ಕನ್ನಡಪ್ರಭ ವಾರ್ತೆ ಶಹಾಪುರ
ನಗರದ ಹೆಚ್ಚುವರಿ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮೂರು ನ್ಯಾಯಾಲಯದ ಪ್ರಕರಣ ಸೇರಿ ಒಟ್ಟು 2, 624 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಿದೆ. ಅಲ್ಲದೆ ₹20.25 ಕೋಟಿ ಹಣ ಸಂದಾಯವಾಗಿದೆ. ಕಕ್ಷಿದಾರರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದು ತಿಳಿಸಿದರು.
ನಗರದ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ವಿವಿಧ ಸ್ವೂರಪದ ಸಿವಿಲ್, ಕ್ರಿಮಿನಲ್, ಮೋಟಾರು ವಾಹನ ಅಪಘಾತ ಪ್ರಕರಣ ಸೇರಿ 536 ಪ್ರಕರಣ ಇತ್ಯರ್ಥಪಡಿಸಿ ₹1.6 ಕೋಟಿ ಹಣ ಸಂದಾಯ ಮಾಡಿಸಿದೆ. ಅಲ್ಲದೆ ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಶೋಭಾ ಅವರ ಸಮ್ಮುಖದಲ್ಲಿ 1,045 ಪ್ರಕರಣ ಬಗೆಹರಿಸಿದೆ. ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ಬಸವರಾಜ ಅವರ ಸಮ್ಮುಖದಲ್ಲಿ 1,043 ಪ್ರಕರಣ ಬಗೆಹರಿಸಿ ₹45 ಸಾವಿರ ಹಣ ಸಂದಾಯಪಡಿಸಿದೆ ಎಂದು ಮಾಹಿತಿ ನೀಡಿದರು.ಪ್ರತಿಯೊಬ್ಬ ವ್ಯಕ್ತಿಗೆ ಬದುಕು ಸಾಗಿಸಲು ಶಾಂತಿ, ನೆಮ್ಮದಿ ಅವಶ್ಯಕ. ಯಾವುದೇ ವಿಧವಾದ ವ್ಯಾಜ್ಯಗಳು, ಜಗಳಗಳು ಇರಬಾರದು. ಇದ್ದರೂ ಎಲ್ಲಾ ಸಮಸ್ಯೆ ಇತ್ಯರ್ಥ ಮಾಡಿಕೊಂಡು ಬದುಕನ್ನು ಕಟ್ಟಿಕೊಳ್ಳಬೇಕು.
-
ಶಹಾಪುರ ನಗರದ ಹೆಚ್ಚುವರಿ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ರಾಜೀ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಲಾಯಿತು.---000---