ಕನ್ನಡಪ್ರಭ ವಾರ್ತೆ ಮೂಲ್ಕಿ
ಮಹಾರಾಷ್ಟ್ರ ಕಲ್ಯಾಣದ ಹೋಟೆಲ್ ಗುರುದೇವ್ ಗ್ರ್ಯಾಂಡ್ ಸಭಾಂಗಣದಲ್ಲಿ ಗುರುದೇವ್ ಹೋಟೆಲ್ ಸಮೂಹ ಸಂಸ್ಥೆಗಳ ಸ್ಥಾಪಕ ಎಕ್ಕಾರು ನಡ್ಯೋಡಿಗುತ್ತು ಭಾಸ್ಕರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಭೀವಂಡಿ- ಬದ್ಲಾಪುರ ಬಂಟ್ಸ್ ಕಾರ್ಯಧ್ಯಕ್ಷ ಶುಭೋದ್ ಭಂಡಾರಿ, ಶ್ರೀಕಾಂತ್ ಶೆಟ್ಟಿ ನಡ್ಯೋಡಿ ಗುತ್ತು, ಸಂಘಟಕ ವಿಜಯ ಕುಮಾರ್ ಶೆಟ್ಟಿ ಮೊಯ್ಲೊಟ್ಟು, ಪ್ರಸನ್ನ ಶೆಟ್ಟಿ ಅತ್ತೂರು ಗುತ್ತು, ಹೇಮಂತ್ ಶೆಟ್ಟಿ ಉಪಸ್ಥಿತರಿದ್ದರು.
ಕಳೆದ ನಾಲ್ಕು ದಶಕಗಳಿಂದ ಯಕ್ಷಗಾನದ ಚೆಂಡೆ ಮದ್ದಳೆ ವಾದಕರಾಗಿ ಆಟ ಕೂಟಗಳಲ್ಲಿ ಭಾಗವಹಿಸಿ, ಶನೀಶ್ವರ ಪೂಜಾ ಸಹಿತ ತಾಳಮದ್ದಳೆಗಳನ್ನು ತುಳುನಾಡು, ಮುಂಬೈ, ದುಬೈ, ಅಬುದಾಬಿ, ಮಸ್ಕತ್ ಗಳಲ್ಲಿ ಸಂಘಟಿಸಿರುವ, ಪಕ್ಷಿಕೆರೆ ಶನೀಶ್ವರ ಭಕ್ತ ವೃoದದ ಪ್ರಧಾನ ಸಂಚಾಲಕ ಪದ್ಮನಾಭ ಶೆಟ್ಟಿಗಾರರ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಯಿತು.ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು. ಸದಾಶಿವ ಆಳ್ವ ತಲಪಾಡಿ ವಂದಿಸಿದರು. ಮುಂಬೈ ಯಕ್ಷಯಾನದ ಪಕ್ಷಿಕೆರೆ ತಂಡದವರಿಂದ ಹರೀಶ್ ಶೆಟ್ಟಿ ಸೂಡ ವಿರಚಿತ ತುಳುನಾಡ ಬಲೀಂದ್ರ ತಾಳಮದ್ದಳೆ ಜರುಗಿತು.