ಲೋಕ್‌ ಅದಾಲತ್‌: 50 ಲಕ್ಷ ರು. ಪಾವತಿ

KannadaprabhaNewsNetwork |  
Published : Dec 16, 2024, 12:48 AM IST
ಫೋಟೋ 15ಪಿವಿಡಿ115ಪಿವಿಜಿ1 ತಾಲೂಕಿನ ನಾಲ್ಕು ಭಾರತೀಯ ಸ್ಟೇಟ್‌ ಬ್ಯಾಂಕ್‌ ಶಾಖೆಗಳಿಂದ ಹಮ್ಮಿಕೊಂಡಿದ್ದ ಲೋಕ ಅದಾಲತ್‌ ಕಾರ್ಯಕ್ರಮದಲ್ಲಿ ತಾಲೂಕಿನ ಅನೇಕ ಮಂದಿ ಸುಸ್ತಿದಾರರು ಭಾಗವಹಿಸಿ 50ಲಕ್ಷ ಸಾಲ ಸೆಟ್ಲ ಮೆಂಟ್‌ ಮಾಡಿಕೊಂಡಿರುವುದಾಗಿ ಇಲ್ಲಿನ ಎಸ್‌ಬಿಐ ವ್ಯವಸ್ಥಾಪಕ ಕೆ.ಚಂದ್ರಶೇಖರ್‌ ತಿಳಿಸಿದರು.      | Kannada Prabha

ಸಾರಾಂಶ

ಲೋಕ ಅದಾಲತ್‌ ಕಾರ್ಯಕ್ರಮದಲ್ಲಿ ಸಾಲಪಡೆದು ಕಟ್ಟಲು ಸಾಧ್ಯವಾಗದ ಹಿನ್ನಲೆಯಲ್ಲಿ ಒಟಿಎಸ್‌ (ಒನ್‌ ಟೈಮ್‌ ಸೆಟ್ಲ ಮೆಂಟ್‌) ಮೂಲಕ ಅನೇಕ ಮಂದಿ ಸಾಲಗಾರರಿಂದ 50ಲಕ್ಷ ರು.ಸಾಲ ತೀರುವಳಿ ಮಾಡಿಕೊಳ್ಳಲಾಗಿದೆ ಎಂದು ಪಾವಗಡ ಪಟ್ಟಣದ ಭಾರತೀಯ ಸ್ಟೇಟ್‌ ಬ್ಯಾಂಕ್‌ ಶಾಖೆಯ ಮುಖ್ಯ ವ್ಯವಸ್ಥಾಪಕರಾದ ಕೆ.ಚಂದ್ರಶೇಖರ್‌ ಅವರು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಪಾವಗಡ

ಲೋಕ ಅದಾಲತ್‌ ಕಾರ್ಯಕ್ರಮದಲ್ಲಿ ಸಾಲಪಡೆದು ಕಟ್ಟಲು ಸಾಧ್ಯವಾಗದ ಹಿನ್ನಲೆಯಲ್ಲಿ ಒಟಿಎಸ್‌ (ಒನ್‌ ಟೈಮ್‌ ಸೆಟ್ಲ ಮೆಂಟ್‌) ಮೂಲಕ ಅನೇಕ ಮಂದಿ ಸಾಲಗಾರರಿಂದ 50ಲಕ್ಷ ರು.ಸಾಲ ತೀರುವಳಿ ಮಾಡಿಕೊಳ್ಳಲಾಗಿದೆ ಎಂದು ಪಾವಗಡ ಪಟ್ಟಣದ ಭಾರತೀಯ ಸ್ಟೇಟ್‌ ಬ್ಯಾಂಕ್‌ ಶಾಖೆಯ ಮುಖ್ಯ ವ್ಯವಸ್ಥಾಪಕರಾದ ಕೆ.ಚಂದ್ರಶೇಖರ್‌ ಅವರು ತಿಳಿಸಿದ್ದಾರೆ.

ಸುಸ್ತಿ ಸಾಲಗಾರರಿಂದ ಸಾಲ ತೀರುವಳಿ ಮಾಡಿಕೊಳ್ಳವ ಹಿನ್ನೆಲೆಯಲ್ಲಿ ಶನಿವಾರ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಎಸ್‌ಬಿಐ ಹಾಗೂ ಇತರೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಲೋಕ ಅದಾಲತ್‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರೈತರು ಹಾಗೂ ಸಾಲಪಡೆದು ಕಟ್ಟಲು ಸಾಧ್ಯವಾಗದ ತಾಲೂಕಿನ ಸುಮಾರು 150ಕ್ಕೂ ಹೆಚ್ಚು ಮಂದಿ ಸಾಲಗಾರರು ಲೋಕ ಅದಾಲತ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಒನ್‌ ಟೈಮ್‌ ಸೆಟ್ಲ ಮೆಂಟ್‌ ಮೂಲಕ ಶೇಖಡವಾರು ಸಾಲದ ಮೊತ್ತ ಬ್ಯಾಂಕಿಗೆ ಪಾವತಿಸಿದ್ದಾರೆ. ಪಾವಗಡ ಶಾಖೆ ಸೇರಿದಂತೆ ತಾಲೂಕಿನ ನಾಲ್ಕು ಎಸ್‌ಬಿಐ ಬ್ಯಾಂಕ್‌ ಶಾಖೆಗಳಿಂದ 50ಲಕ್ಷ ರು ಸಾಲದ ಬಾಬ್ತು ಸೆಟ್ಲಮೆಂಟ್‌ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ವಿವಿಧ ಉದ್ದೇಶದ ಹಿನ್ನೆಲೆಯಲ್ಲಿ ಬ್ಯಾಂಕಿನಿಂದ ಸಾಲಪಡೆದ ಗ್ರಾಹಕರು ನಿಯಮನುಸಾರ ಸಕಾಲಕ್ಕೆ ಸಾಲ ಮರುಪಾವತಿ ಮಾಡಿದರೆ, ಬ್ಯಾಂಕಿನ ವ್ಯವಹಾರ ಹಾಗೂ ಸುಲಭವಾಗಿ ಸಾಲ ಸಿಗಲು ಅವಕಾಶವಿದೆ.ಅಲ್ಲದೇ ಇದರಿಂದ ಬ್ಯಾಂಕ್‌ಗಳ ಪ್ರಗತಿ ಸೇರಿದಂತೆ ಗ್ರಾಹಕರಿಗೆ ಮತ್ತೆ ಮತ್ತೆ ಹೆಚ್ಚು ಸಾಲ ನೀಡಲು ಅನುಕೂಲವಾಗಲಿದೆ. ಒನ್‌ ಟೈಮ್‌ ಸೆಟ್ಲಮೆಂಟ್‌ ಮೂಲಕ ಸಾಲ ಮರುಪಾವತಿಸಲು ಲೋಕ ಅದಾಲತ್‌ ಒಂದು ಉಪಯುಕ್ತ ಯೋಜನೆಯಾಗಿದ್ದು ಕಾರ್ಯಕ್ರಮದ ಬಗ್ಗೆ ಮಾಹಿತಿ ಪಡೆದು ಹೆಚ್ಚಿನ ರೈತರು ಹಾಗೂ ಸಾಲಪಡೆದ ಗ್ರಾಹಕರು ನ್ಯಾಯಾಲಯದಲ್ಲಿ ಹಮ್ಮಿಕೊಂಡಿದ್ದ ಲೋಕ ಅದಾಲತ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಸಾಲ ತೀರುವಳಿಯ ಸಟ್ಲಮೆಂಟ್‌ ಮಾಡಿಕೊಂಡಿದ್ದು ಅತ್ಯಂತ ಸಂತಸ ತಂದಿದೆ ಎಂದರು. ತುಮಕೂರು ಎಸ್‌ಬಿಐ ಶಾಖೆಯ ಮುಖ್ಯ ವ್ಯವಸ್ಥಾಪಕ ಗೋಪೆತ್‌ಲಾಲ್‌, ವ್ಯವಸ್ಥಾಪಕರಾದ ಅಭಿನಂದನ್‌, ವದನಕಲ್ಲು ಎಸ್‌ಬಿಐ ಶಾಖೆಯ ವ್ಯವಸ್ಥಾಪಕ ಒಡೆಯರ್‌, ವಕೀಲ ಯಜ್ಞನಾರಾಯಣ್‌ ಶರ್ಮ, ವೈ.ಎನ್‌. ಹೊಸಕೋಟೆ, ಕೋಟಗುಡ್ಡ, ಅರಸೀಕೆರೆ ಗ್ರಾಮದ ಎಸ್‌ಬಿಐ ಶಾಖೆಯ ವ್ಯವಸ್ಥಾಪಕರುಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಾ.ನಗರ: ಚಿನ್ನದ ಆಸೆಗೆ ಗುಡ್ಡವನ್ನೇ ಅಗೆದ ಕಿಡಿಗೇಡಿಗಳು
ವಜ್ರ, ಚಿನ್ನ ಪತ್ತೆಗೆ 6.71 ಲಕ್ಷ ಹೆಕ್ಟೇರ್‌ ಭೂ ಗುರುತು