ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಕ್ಷಣಗಣನೆ ಆರಂಭಗೊಂಡಿದೆ. ಬೆಳಗ್ಗೆ ೭ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ಮತ ಚಲಾಯಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯೊಳಗೆ ೮,೭೬,೧೧೨ ಪುರುಷರು, ೯,೦೨,೯೫೯ ಮಹಿಳೆಯರು ಹಾಗೂ ೧೬೮ ಇತರೆ ಮತದಾರರು ಸೇರಿದಂತೆ ಅಂತಿಮವಾಗಿ ೧೭,೭೯,೨೩೯ ಮತದಾರರಿದ್ದಾರೆ. ಪುರುಷರಿಗಿಂತಲೂ ೨೬೮೪೭ ಅಧಿಕ ಮಹಿಳಾ ಮತದಾರರಿರುವುದು ವಿಶೇಷವಾಗಿದೆ.ಮತದಾನಕ್ಕಾಗಿ ೨೦೭೬ ಮತಗಟ್ಟೆಗಳನ್ನು ತೆರೆಯಲಾಗಿದೆ. ೬೯೩ ನಿರ್ಣಾಯಕ ಹಾಗೂ ೩೩ ದುರ್ಬಲ ಮತಗಟ್ಟೆಗಳೆಂದು ಗುರುತಿಸಲಾಗಿದೆ. ೪೦ ಪಿಂಕ್ ಮತಗಟ್ಟೆಗಳನ್ನು ತೆರೆದಿದ್ದು, ೮ ಅಂಗವಿಕಲ, ೧೬ ಸಾಂಪ್ರದಾಯಿಕ, ೧೬ ಯುವ ಮತಗಟ್ಟೆಗಳನ್ನು ತೆರೆಯಲಾಗಿದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಒಟ್ಟು ಮತಗಟ್ಟೆಗಳಲ್ಲಿ ೧೦೩೭ ಮತಗಟ್ಟೆಗಳಿಗೆ ಸಿಸಿ ಟೀವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮಂಡ್ಯ ಜಿಲ್ಲೆಯ ೨೯೨೨ ಮತಗಟ್ಟೆಗಳಿಗೆ ೨೦೯೯ ಪಿಆರ್‌ಒ, ೨೦೯೯ ಎಪಿಆರ್‌ಒ, ೪೧೯೮ ಪಿಒ ಸೇರಿದಂತೆ ೮೩೯೬ ಮಂದಿಯನ್ನು ನಿಯೋಜಿಸಲಾಗಿದೆ.
ಮತದಾನಕ್ಕೆ ವಿಶೇಷ ವ್ಯವಸ್ಥೆ:ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಮತಗಟ್ಟೆಯಲ್ಲಿ ಮತ ಚಲಾಯಿಸಲು ಅನುಕೂಲವಾಗುವಂತೆ ಪ್ರತಿ ಮತಗಟ್ಟೆಗೆ ಇಳಿಜಾರು ವ್ಯವಸ್ಥೆ, ವ್ಹೀಲ್‌ಚೇರ್ ವ್ಯವಸ್ಥೆ ಮಾಡಲಾಗಿದೆ. ದೃಷ್ಟಿದೋಷವುಳ್ಳ ವಿಕಲಚೇತನರಿಗೆ ಬ್ರೈಲ್ ಲಿಪಿಯುಳ್ಳ ವಿದ್ಯುನ್ಮಾನ ಮತಯಂತ್ರ ವ್ಯವಸ್ಥೆ ಹಾಗೂ ಡಮ್ಮಿ ಬ್ರೈಲ್ ಬ್ಯಾಲೆಟ್ ಪೇಪರ್ ವ್ಯವಸ್ಥೆ ಕಲ್ಪಿಸಲಾಗಿದೆ.
ಶ್ರವಣದೋಷವುಳ್ಳ ವಿಕಲಚೇತನರು ಮತದಾನ ಮಾಡಲು ಅವಶ್ಯಕವಿದ್ದಲ್ಲಿ ಸಂಜ್ಞಾ ಭಾಷೆ ತಜ್ಞರಿಂದ ಸಂಜ್ಞಾ ಭಾಷೆ ಮೂಲಕ ಅವ್ಯಶ್ಯಕ ವ್ಯವಸ್ಥೆ ಮಾಡಲಾಗಿದೆ. ಮಂದದೃಷ್ಟಿಯುಳ್ಳ ವಿಕಲಚೇತನರು ಮತದಾನ ಮಾಡಲು ಮತ ಕೇಂದ್ರಗಳಲ್ಲಿ ಬೂತ ಕನ್ನಡಿ ವ್ಯವಸ್ಥೆ ಕಲ್ಪಿಸಿದ್ದು, ಮತದಾನಕ್ಕೆ ವಿಕಲಚೇತನರು ಹಾಗೂ ಹಿರಿಯ ನಾಗರಿಕರು ಸರತಿ ಸಾಲಿನಲ್ಲಿ ನಿಲ್ಲದೆ ನೇರವಾಗಿ ಮತ ಚಲಾಯಿಸಲು ಅವಕಾಶ ಮಾಡಿಕೊಟ್ಟಿದೆ.ವೇತನ ಸಹಿತ ರಜಾ ದಿನ:
ಮತದಾನದ ದಿನದಂದು ಮತ ಚಲಾಯಿಸಲು ಅನುಕೂಲವಾಗುವಂತೆ ಅರ್ಹ ಮತದಾರರಾಗಿರುವ ಎಲ್ಲಾ ವ್ಯವಹಾರಿಕ, ಔದ್ಯೋಗಿಕ ಹಾಗೂ ಇನ್ನಿತರ ಸಂಸ್ಥೆಗಳಲ್ಲಿ ಕಾಯಂ ಅಥವಾ ದಿನಗೂಲಿ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಪ್ರಜಾಪ್ರತಿನಿಧಿ ಕಾಯ್ದೆ ೧೯೫೧ರ ಕಲಂ ೧೩೫(ಬಿ) ಅಡಿಯಲ್ಲಿ ಎಲ್ಲಾ ಉಪಬಂಧಗಳಿಗೆ ಒಳಪಟ್ಟು ವೇತನಸಹಿತ ರಜೆ ನೀಡಲು ಆದೇಶಿಸಲಾಗಿದೆ.ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೭೭೩ ಮಂದಿ ಶಸ್ತ್ರಾಸ್ತ್ರ ಪರವಾನಗಿ ಹೊಂದಿದ್ದು, ೭೪೪ ಮಂದಿ ಪೊಲೀಸ್ ಠಾಣೆಯಲ್ಲಿ ಠೇವಣಿ ಇರಿಸಿದ್ದು, ೨೮ ಮಂದಿಗೆ ವಿನಾಯಿತಿ ನೀಡಲಾಗಿದೆ. ಒಬ್ಬರು ಮಾತ್ರ ಶಸ್ತ್ರಾಸ್ತ್ರ ಠೇವಣಿ ಇಟ್ಟಿಲ್ಲ ಎಂದರಲ್ಲದೆ, ಚುನಾವಣೆಗೆ ಸಂಬಂಧಿಸಿದಂತೆ ೩೨ ದೂರುಗಳು ಬಂದಿದ್ದು, ಅದರಲ್ಲಿ ೨೮ ದೂರುಗಳನ್ನು ವಿಲೇವಾರಿ ಮಾಡಲಾಗಿದೆ.
ಮನೆಗಳಿಗೆ ವೋಟರ್ ಸ್ಲಿಪ್:ಮತದಾರರು ಯಾವುದೇ ಆಮಿಷ ಅಥವಾ ಯಾರ ಪ್ರಭಾವಕ್ಕೆ ಒಳಗಾಗದೆ ನಿಷ್ಪಕ್ಷಪಾತ ಹಾಗೂ ನಿರ್ಭೀತಿಯಿಂದ ನೇರವಾಗಿ ಮತಗಟ್ಟೆಗೆ ಹೋಗಿ ಮತ ಚಲಾಯಿಸುವ ವಾತಾವರಣ ಸೃಷ್ಟಿಸಬೇಕಿರುವ ಕಾರಣದಿಂದ ವೋಟರ್ ಸ್ಲಿಪ್‌ಗಳನ್ನು ವಿತರಿಸಿದೆ. ಇದರಲ್ಲಿ ಮತದಾರರ ಹೆಸರಿರುವ ಮತಗಟ್ಟೆ ಸಂಖ್ಯೆ, ಕ್ರಮಸಂಖ್ಯೆ, ಮತದಾನದ ದಿನಾಂಕ ಮತ್ತು ಸಮಯವನ್ನು ನಮೂದಿಸಿ ಒದಗಿಸಿದೆ. ಜಿಲ್ಲೆಯಲ್ಲಿ ಒಟ್ಟು ೧೫,೬೦,೪೫೭ ಮತದಾರರಿದ್ದು, ಇವರಿಗೆ ಗ್ರಾಪಂ ಆಡಳಿತಾಧಿಕಾರಿ, ಗ್ರಾಮಸಹಾಯಕ, ಮತಗಟ್ಟೆ ಅಧಿಕಾರಿಗಳ ಮೂಲಕ ವೋಟರ್ ಸ್ಲಿಪ್‌ಗಳನ್ನು ವಿತರಿಸಲಾಗಿದೆ.ಮಂಡ್ಯ ಲೋಕಸಭಾ ಕ್ಷೇತ್ರದ ಮತದಾರರ ವಿವರ
ತಾಲೂಕುಪುರುಷರುಮಹಿಳೆಯರುಇತರೆಒಟ್ಟುಮಳವಳ್ಳಿ೧೨೬೧೧೮೧೨೭೪೮೭೨೩೨೫೩೬೨೮
ಮದ್ದೂರು೧೦೪೨೮೦೧೧೧೪೪೩೨೨೨೧೫೭೪೫ಮೇಲುಕೋಟೆ೧೦೦೩೭೯೧೦೩೦೧೦೦೯೨೦೩೩೯೮
ಮಂಡ್ಯ೧೧೧೮೬೮೧೧೭೭೫೯೩೬೨೨೯೬೬೩ಶ್ರೀರಂಗಪಟ್ಟಣ೧೦೬೧೫೭೧೧೧೪೨೭೪೪೨೧೭೬೨೮
ನಾಗಮಂಗಲ೧೦೭೭೬೦೧೦೮೭೮೩೧೧೨೧೬೫೫೪ಕೆ.ಆರ್.ಪೇಟೆ೧೧೧೫೪೨೧೧೨೨೮೪೧೧೨೨೩೮೩೭
ಒಟ್ಟು೭೬೮೧೦೪೭೯೨೧೯೩೧೫೬೧೫೬೦೪೫೩ಕೆ.ಆರ್.ನಗರ೧೦೮೦೦೮೧೧೦೭೬೬೧೨೨೧೮೭೮೬
ಒಟ್ಟು೮೭೬೧೧೨೯೦೮೯೫೯೧೬೮೧೭೭೯೨೩೯ಮತಗಟ್ಟೆಗಳ ವಿವರ
ತಾಲೂಕುನಗರಗ್ರಾಮೀಣಒಟ್ಟುಮಳವಳ್ಳಿ೩೦೨೪೨೨೭೨
ಮದ್ದೂರು೨೪೨೩೦೨೫೪ಮೇಲುಕೋಟೆ೧೬೨೪೮೨೬೪
ಮಂಡ್ಯ೧೧೫೧೪೭೨೬೨ಶ್ರೀರಂಗಪಟ್ಟಣ೨೧೨೨೮೨೪೯
ನಾಗಮಂಗಲ೩೩೨೨೭೨೬೦ಕೆ.ಆರ್.ಪೇಟೆ೨೧೨೪೦೨೬೧
ಒಟ್ಟು೨೬೦೧೫೬೨೧೮೨೨ಕೆ.ಆರ್.ನಗರ೩೨೨೨೦೨೫೨
ಒಟ್ಟು೨೯೨೧೭೮೨೨೦೭೪