ಲೋಕಸಭೆ ಚುನಾವಣೆ, ಜಿಲ್ಲೆಯಲ್ಲಿ 41 ನಾಮಪತ್ರ ಕ್ರಮಬದ್ಧ

KannadaprabhaNewsNetwork |  
Published : Apr 21, 2024, 02:31 AM IST
ಚುನಾವಣೆ | Kannada Prabha

ಸಾರಾಂಶ

ಬೆಳಗಾವಿ: ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 41 ನಾಮಪತ್ರ ಕ್ರಮಬದ್ಧವಾಗಿವೆ. ಚಿಕ್ಕೋಡಿ ಕ್ಷೇತ್ರಕ್ಕೆ ಸಲ್ಲಿಕೆಯಾಗಿದ್ದ 20 ನಾಮಪತ್ರ ಹಾಗೂ ಬೆಳಗಾವಿ ಕ್ಷೇತ್ರಕ್ಕೆ ಸಲ್ಲಿಕೆಯಾಗಿದ್ದ 21 ನಾಮಪತ್ರ ಕ್ರಮಬದ್ಧವಾಗಿವೆ.

ಬೆಳಗಾವಿ: ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 41 ನಾಮಪತ್ರ ಕ್ರಮಬದ್ಧವಾಗಿವೆ. ಚಿಕ್ಕೋಡಿ ಕ್ಷೇತ್ರಕ್ಕೆ ಸಲ್ಲಿಕೆಯಾಗಿದ್ದ 20 ನಾಮಪತ್ರ ಹಾಗೂ ಬೆಳಗಾವಿ ಕ್ಷೇತ್ರಕ್ಕೆ ಸಲ್ಲಿಕೆಯಾಗಿದ್ದ 21 ನಾಮಪತ್ರ ಕ್ರಮಬದ್ಧವಾಗಿವೆ.ಚಿಕ್ಕೋಡಿ ಕ್ರಮಬದ್ಧ ನಾಮಪತ್ರ ವಿವರ: ಬಿಜೆಪಿಯ ಅಣ್ಣಸಾಹೇಬ ಜೊಲ್ಲೆ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಪ್ರಿಯಾಂಕಾ ಜಾರಕಿಹೊಳಿ, ಸರ್ವ ಜನತಾ ಪಕ್ಷದ ಅಪ್ಪಾಸಾಹೇಬ ಕುರಣೆ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕುಮಾರ ಡೊಂಗರೆ, ಬಹುಜನ ಭಾರತ ಪಕ್ಷದ ಪವನಕುಮಾರ ಮಾಳಗೆ, ಭಾರತೀಯ ಜವಾನ ಕಿಸಾನ್‌ ಪಕ್ಷದ ಸತ್ಯಪ್ಪ ದಶರಥ ಕಾಳೇಲಿ, ಪಕ್ಷೇತರ ಅಭ್ಯರ್ಥಿಗಳಾದ ಕಾಡಯ್ಯ ಹಿರೇಮಠ, ಕಾಶಿನಾಥ ಕುರಣಿ, ಗಜಾನನ ಪೂಜಾರಿ, ಜಿತೇಂದ್ರ ನೇರ್ಲೆ, ಭೀಮಸೇನ ಸನದಿ, ಮಗದುಮ್ಮ ಇಸ್ಮಾಯಿಲ್ ಮಗದುಮ್ಮ, ಮಹೇಶ ಅಶೋಕ, ಮೋಹನ ಮೊಟನ್ನವರ, ಯಾಸೀನ್‌ ಸಿರಾಜುದ್ಧಿನ್‌ ಪಟಕಿ, ರಾಜು ವಿಜಯ ಸೊಲ್ಲಾಪುರೆ, ವಿಲಾಸ ಮಣ್ಣೂರ, ಶಂಭು ಕಲ್ಲೋಳಿಕರ, ಶ್ರೀಣಿಕ ಅಣ್ಣಾಸಾಹೇಬ ಜಂಗಟೆ, ಸಮ್ಮೇದ್‌ ಸರದಾರ ವರ್ಧಮಾನೆ ನಾಮಪತ್ರಗಳು ಕ್ರಮಬದ್ಧವಾಗಿವೆ.

ಬೆಳಗಾವಿ ಕ್ರಮಬದ್ಧ ನಾಮಪತ್ರ ವಿವರ

ಬಹುಜನ ಸಮಾಜ ಪಾರ್ಟಿಯಿಂದ ಅಶೋಕ ಅಪ್ಪುಗೋಳ, ಭಾರತೀಯ ಜನತಾ ಪಾರ್ಟಿಯಿಂದ ಜಗದೀಶ ಶೆಟ್ಟರ್‌, ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌ ಪಕ್ಷದ ಮೃಣಾಲ ಹೆಬ್ಬಾಳಕರ, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಬಸಪ್ಪ ಗುರುಸಿದ್ದ ಕುಂಬಾರ, ಉತ್ತಮ ಪ್ರಜಾಕೀಯ ಪಕ್ಷದಿಂದ ಮಲ್ಲಪ್ಪ ಚೌಗಲಾ, ಸೋಷಿಯಲಿಸ್ಟ್‌ ಯುನಿಟ್‌ ಸೆಂಟರ್‌ ಆಫ್‌ ಇಂಡಿಯಾ ಎಸ್‌ಯುಸಿಐನಿಂದ ಲಕ್ಷ್ಮಣ ಜಡಗಣ್ಣವರ, ಪಕ್ಷೇತರರಾಗಿ ಅಶ್ಪಾಕ ಅಹ್ಮದ ಉಸ್ತಾದ, ಅಶೋಕ ಹಣಜಿ, ಈಶ್ವರ ನಾಗಪ್ಪ ಚಿಕ್ಕನರಗುಂದ, ದೊಡ್ಡಪ್ಪ ಈರಪ್ಪ ದೊಡಮನಿ, ನಿತಿನ ಅಶೋಕ ಮಾಡಗುಡ, ಪುಂಡಲೀಕ ಇಟ್ನಾಳ, ಭಾರತಿ ಬಾಳಪ್ಪ ನೀರಲಕೇರಿ, ಮಗದುಮ್ಮ ಇಸ್ಮಾಲ್‌ ಮಗದುಮ್ಮ, ಮಹಾದೇವ ಪಾಟೀಲ, ಮಹಾಂತೇಶ ಗೌಡರ, ಮಹಾಂತೇಶ ನಿರ್ವಾಣಿ, ರವಿ ಪಡಸಲಗಿ, ವಿಜಯ ಮೇತ್ರಾಣಿ, ಸಾಗರ ಪಾಟೀಲ, ಹನಮಂತ ನಾಗನೂರ ಅವರ ನಾಮಪತ್ರ ಕ್ರಮಬದ್ಧವಾಗಿವೆ.

ಏ. 22ರಂದು ಮಧ್ಯಾಹ್ನ 3 ಗಂಟೆಯ ವರೆಗೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಮೇ 7ರಂದು ಮತದಾನ ನಡೆಯಲಿದೆ ಎಂದು ಎಂದು ಜಿಲ್ಲಾ ಚುನಾವಣಾಧಿಕಾರಿ ನಿತೇಶ್‌ ಪಾಟೀಲ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ