ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಮತ ಪಟ್ಟಿಯಲ್ಲಿರುವ 80 ವರ್ಷ ತುಂಬಿರುವ ವೃದ್ಧರು, ಬುದ್ದಿ ಮಾಂದ್ಯರು ಇತರೆ ನಡೆದಾಡಲು ಸಾಧ್ಯವಾಗದೆ ಮತಗಟ್ಟೆ ವರೆಗೆ ಬರಲಾಗದ ಮತದಾರರನ್ನು ಪರಿಶೀಲಿಸಿ, ಆಯಾ ಮತಗಟ್ಟೆಯ ಅಧಿಕಾರಿಗಳು ಅವರಿಗೆ ಮನೆಯಲ್ಲಿಯೇ ಮತ ಚಲಾಯಿಸಲು ಅವಕಾಶ ಮಾಡಬೇಕಾಗಿದೆ ಎಂದರು.
ಒಂದು ವೇಳೆ ಮತಗಟ್ಟೆಗೆ ಬಂದು ಸ್ವತಃ ಅವರೇ ಮತ ಚಲಾಯಿಸುವವರಿದ್ದರೆ ಅವರಿಗೂ ಮತಗಟ್ಟೆಗೆ ಹೋಗುವ ವ್ಯವಸ್ಥೆ ಕಲ್ಪಿಸಲಾಗಿದೆ. ಆಯಾ ಮತಗಟ್ಟೆ ಅಧಿಕಾರಿಗಳು ಅವರನ್ನು ಸರ್ವೆ ಮೂಲಕ ಪರಿಶೀಲಿಸಿ ಒನ್ ಲೈನ್ ಮೂಲಕ ಮತ ಪಟ್ಟಿಯಾರಿಸಂತೆ ಮಾಡಲಾಗಿದೆ ಎಂದು ಹೇಳಿದರು.ಮನೆಯಲ್ಲಿ ಮತದಾನ ಮಾಡುವವರಿಗೆ ನಮೂನೆ 12ರ ಫಾರಂನಲ್ಲಿ ಅವರ ಆಧಾರ್ ನಂ. ಇತರೆ ವಿಳಾಸದ ಧಾಖಲೆಯೊಂದಿಗೆ ಹೆಸರನ್ನು ಚುನಾವಣೆಗಿಂತ ಮೊದಲೆ ನೊಂದಾವಣೆ ಮಾಡುವಂತೆ ಸಭೆಯಲ್ಲಿ ಎಲ್ಲಾ ಮತಗಟ್ಟೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಸೇರಿದಂತೆ 270ಕ್ಕೂ ಹೆಚ್ಚು ಮಂದಿ ಮತಗಟ್ಟೆಗೆ ಸಂಬಂಧಿಸಿದ ಸೆಕ್ಟರ್ ಅಧಿಕಾರಿಗಳು ಇದ್ದು ಅಗತ್ಯ ಮಾಹಿತಿ ಪಡೆದುಕೊಂಡರು.ಈ ವೇಳೆ ತಹಸೀಲ್ದಾರ್ ಪರುಶುರಾಮ್ ಸತ್ತಿಗೇರಿ, ಎಡಿಎಲ್‌ಆರ್ ಮೇಘನಾ, ಚುನಾವಣೆ ಶಿರಸೇದಾರ್ ನೇತ್ರಾವತಿ, ಗ್ರಾಮ ಆಡಳಿತಾಧಿಕಾರಿ ಶ್ರೀಧರ್ ಸೇರಿದಂತೆ ಇತರರು ಇದ್ದರು.ಐಜಿಪಿಯಿಂದ ಪೊಲೀಸ್ ಅಧಿಕಾರಿಗಳ ಸಭೆ
ಮಳವಳ್ಳಿ:ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಪಟ್ಟಣದ ಪೊಲೀಸ್ ಉಪವಿಭಾಗದ ಕಚೇರಿಗೆ ದಕ್ಷಿಣ ವಲಯದ ಐಜಿಪಿ ಅಮಿತ್ ಸಿಂಗ್ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು.ಪಟ್ಟಣದ ಉಪವಿಭಾಗದ ಸಭಾಂಗಣದಲ್ಲಿ ಮಳವಳ್ಳಿ ಮತ್ತು ಮದ್ದೂರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಚುನಾವಣೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಎರಡು ಕ್ಷೇತ್ರಗಳ ಚೆಕ್ ಪೋಸ್ಟ್ ಗಳ ಮಾಹಿತಿ ಸಂಗ್ರಹಿಸಿದ ಅವರು ಕೆಲ ಸೂಚನೆಗಳನ್ನು ನೀಡಿದರು.ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ತಿಮ್ಮಯ್ಯ, ಗಂಗಾಧರಸ್ವಾಮಿ, ಡಿವೈಎಸ್ ಪಿ ವಿ.ಕೃಷ್ಣಪ್ಪ ಸೇರಿದಂತೆ ಮಳವಳ್ಳಿ ಮತ್ತು ಮದ್ದೂರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.