ಉಪನೋಂದಣಾಧಿಕಾರಿಗಳ ಕಚೇರಿ ಮೇಲೆ ಲೋಕಾ ದಾಳಿ

KannadaprabhaNewsNetwork |  
Published : Jun 21, 2025, 12:49 AM IST
ತುಮಕೂರು- ಜಿಲ್ಲಾ ಕೇಂದ್ರ ತುಮಕೂರು, ಹುಲಿಯೂರುದುರ್ಗ ಸೇರಿದಂತೆ ಜಿಲ್ಲೆಯ ೧೧ ಉಪ ನೋಂದಣಾಧಿಕಾರಿಗಳ ಕಚೇರಿ ಮೇಲೆ ಏಕಕಾಲದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ದಾಖಲಾತಿಗಳ ಪರಿಶೀಲನೆ ನಡೆಸಿದ್ದಾರೆ.ಜಿಲ್ಲೆಯಲ್ಲಿರುವ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಜಮೀನು, ನಿವೇಶನ ನೋಂದಣಿ, ಖಾತೆ ಬದಲಾವಣೆ ಸೇರಿದಂತೆ ಇನ್ನಿತರೆ ಕೆಲಸ ಕಾರ್ಯಗಳಿಗೆ ಲಂಚದ ಬೇಡಿಕೆ, ಮಧ್ಯವರ್ತಿಗಳ ಹಾವಳಿ ಮಿತಿ ಮೀರಿದೆ ಎಂಬ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ತುಮಕೂರು ಲೋಕಾಯುಕ್ತ ಎಸ್ಪಿ ಲಕ್ಷಿ÷್ಮÃನಾರಾಯಣ್ ನೇತೃತ್ವದಲ್ಲಿ ಬೆಳಿಗ್ಗೆ ಕಚೇರಿಗಳು ಆರಂಭವಾಗುತ್ತಿದ್ದಂತೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.ಜಿಲ್ಲೆಯ ತುಮಕೂರು, ಕುಣಿಗಲ್, ಹುಲಿಯೂರುದುರ್ಗ, ಗುಬ್ಬಿ, ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಕೊರಟಗೆರೆ, ಮಧುಗಿರಿ, ಸಿರಾ ಹಾಗೂ ಪಾವಗಡ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೀಡು ಬಿಟ್ಟಿದ್ದು, ಕಚೇರಿಯ ಅಗತ್ಯ ದಾಖಲಾತಿಗಳ ತಪಾಸಣೆ ನಡೆಸಿದ್ದಾರೆ.   ಜಿಲ್ಲಾ ಕೇಂದ್ರ ತುಮಕೂರು ಉಪನೋಂದಣಾಧಿಕಾರಿಗಳ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದಾಗ ರೈತರೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದು, ಕಳೆದ ೩ ತಿಂಗಳಿನಿಂದ ಒಂದು ಇ.ಸಿ. (ಋಣಭಾರ ಪತ್ರ) ತೆಗೆದುಕೊಳ್ಳುವುದಕ್ಕೆ ಮೂರು ತಿಂಗಳಿನಿಂದ ಅಲೆದಾಡಿಸುತ್ತಿದ್ದಾರೆ. ಇವತ್ತು ನೀವು ಬಂದಿದ್ದೀರಾ ಅಂತ ಸಲೀಸಾಗಿ ಇ.ಸಿ. ಕೊಟ್ಟಿದ್ದಾರೆ. ಒಂದು ಇ.ಸಿ. ಕೊಡಲು ಮೂರು ತಿಂಗಳು ಬೇಕಾ ಸರ್ ಎಂದು ಲೋಕಾಯುಕ್ತ ಅಧಿಕಾರಿಗಳನ್ನು ರೈತ ಪ್ರಶ್ನಿಸಿದರು.ನಾನು ದಲ್ಲಾಳಿಗಳ ಕಡೆಯಿಂದ ಹೋಗಿದ್ದರೆ ಒಂದೇ ದಿನಕ್ಕೆ ಇ.ಸಿ. ಸಿಕ್ಕಿರೋದು, ನಾನು ನೇರವಾಗಿ ಹೋಗಿದ್ದಕ್ಕೆ ಮೂರು ತಿಂಗಳು ಮಾಡಿದ್ದಾರೆ ಎಂದು ರೈತ ಆಂಜಿನಪ್ಪ ಲೋಕಾಯುಕ್ತ ಅಧಿಕಾರಿಗಳ ಬಳಿ ತಮ್ಮ ಅಳಲ ತೋಡಿಕೊಂಡರು. ಕಳೆದ ಒಂದು ವಾರದ ಹಿಂದೆಯಷ್ಟೇ ಜಿಲ್ಲೆಯ ೧೦ ತಾಲ್ಲೂಕು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ನಡೆಸಿದ್ದರು. ಇದರ ಬೆನ್ನಲ್ಲೆ ಇಂದು ೧೧ ಉಪನೋಂದಣಾಧಿಕಾರಿಗಳ ಕಚೇರಿ ಮೇಲೆ ದಾಳಿ ನಡೆಸಿರುವುದು ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿದೆ. | Kannada Prabha

ಸಾರಾಂಶ

ನಾನು ದಲ್ಲಾಳಿಗಳ ಕಡೆಯಿಂದ ಹೋಗಿದ್ದರೆ ಒಂದೇ ದಿನಕ್ಕೆ ಇ.ಸಿ. ಸಿಕ್ಕಿರೋದು, ನಾನು ನೇರವಾಗಿ ಹೋಗಿದ್ದಕ್ಕೆ ಮೂರು ತಿಂಗಳು ಮಾಡಿದ್ದಾರೆ ಎಂದು ರೈತ ಆಂಜಿನಪ್ಪ ಲೋಕಾಯುಕ್ತ ಅಧಿಕಾರಿಗಳ ಬಳಿ ತಮ್ಮ ಅಳಲು ತೋಡಿಕೊಂಡರು.

ಕನ್ನಡಪ್ರಭ ವಾರ್ತೆ ತುಮಕೂರು

ತುಮಕೂರು, ಹುಲಿಯೂರುದುರ್ಗ ಸೇರಿದಂತೆ ಜಿಲ್ಲೆಯ 11 ಉಪ ನೋಂದಣಾಧಿಕಾರಿಗಳ ಕಚೇರಿ ಮೇಲೆ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ದಾಖಲಾತಿಗಳ ಪರಿಶೀಲನೆ ನಡೆಸಿದ್ದಾರೆ.

ಜಿಲ್ಲೆಯಲ್ಲಿರುವ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಜಮೀನು, ನಿವೇಶನ ನೋಂದಣಿ, ಖಾತೆ ಬದಲಾವಣೆ ಸೇರಿ ಇನ್ನಿತರೆ ಕೆಲಸ ಕಾರ್ಯಗಳಿಗೆ ಲಂಚದ ಬೇಡಿಕೆ, ಮಧ್ಯವರ್ತಿಗಳ ಹಾವಳಿ ಮಿತಿ ಮೀರಿದೆ ಎಂಬ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ತುಮಕೂರು ಲೋಕಾಯುಕ್ತ ಎಸ್ಪಿ ಲಕ್ಷ್ಮೀನಾರಾಯಣ್ ನೇತೃತ್ವದಲ್ಲಿ ಬೆಳಗ್ಗೆ ಕಚೇರಿಗಳು ಆರಂಭವಾಗುತ್ತಿದ್ದಂತೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಜಿಲ್ಲೆಯ ತುಮಕೂರು, ಕುಣಿಗಲ್, ಹುಲಿಯೂರುದುರ್ಗ, ಗುಬ್ಬಿ, ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಕೊರಟಗೆರೆ, ಮಧುಗಿರಿ, ಶಿರಾ ಹಾಗೂ ಪಾವಗಡ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೀಡು ಬಿಟ್ಟಿದ್ದು, ಕಚೇರಿಯ ಅಗತ್ಯ ದಾಖಲಾತಿಗಳ ತಪಾಸಣೆ ನಡೆಸಿದ್ದಾರೆ.

ಜಿಲ್ಲಾ ಕೇಂದ್ರ ತುಮಕೂರು ಉಪನೋಂದಣಾಧಿಕಾರಿಗಳ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದಾಗ ರೈತರೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದು, ಒಂದು ಇ.ಸಿ. (ಋಣಭಾರ ಪತ್ರ) ತೆಗೆದುಕೊಳ್ಳುವುದಕ್ಕೆ ಕಳೆದ ಮೂರು ತಿಂಗಳಿನಿಂದ ಅಲೆದಾಡಿಸುತ್ತಿದ್ದಾರೆ. ಇವತ್ತು ನೀವು ಬಂದಿದ್ದೀರಾ ಅಂತ ಸಲೀಸಾಗಿ ಇ.ಸಿ. ಕೊಟ್ಟಿದ್ದಾರೆ. ಒಂದು ಇ.ಸಿ. ಕೊಡಲು ಮೂರು ತಿಂಗಳು ಬೇಕಾ ಸರ್ ಎಂದು ಲೋಕಾಯುಕ್ತ ಅಧಿಕಾರಿಗಳನ್ನು ರೈತ ಪ್ರಶ್ನಿಸಿದರು.

ನಾನು ದಲ್ಲಾಳಿಗಳ ಕಡೆಯಿಂದ ಹೋಗಿದ್ದರೆ ಒಂದೇ ದಿನಕ್ಕೆ ಇ.ಸಿ. ಸಿಕ್ಕಿರೋದು, ನಾನು ನೇರವಾಗಿ ಹೋಗಿದ್ದಕ್ಕೆ ಮೂರು ತಿಂಗಳು ಮಾಡಿದ್ದಾರೆ ಎಂದು ರೈತ ಆಂಜಿನಪ್ಪ ಲೋಕಾಯುಕ್ತ ಅಧಿಕಾರಿಗಳ ಬಳಿ ತಮ್ಮ ಅಳಲು ತೋಡಿಕೊಂಡರು.

ಕಳೆದ ಒಂದು ವಾರದ ಹಿಂದೆಯಷ್ಟೇ ಜಿಲ್ಲೆಯ 10 ತಾಲೂಕು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಇದರ ಬೆನ್ನಲ್ಲೆ ಇಂದು ೧೧ ಉಪನೋಂದಣಾಧಿಕಾರಿಗಳ ಕಚೇರಿ ಮೇಲೆ ದಾಳಿ ನಡೆಸಿರುವುದು ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿದೆ.

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!