ಮುಖ್ಯ ಅಭಿಯಂತರ ಬಾಲರಾಜ್ ನಿವಾಸ ಮೇಲೆ ಲೋಕಾಯುಕ್ತ ದಾಳಿ

KannadaprabhaNewsNetwork | Published : Oct 31, 2023 1:15 AM

ಸಾರಾಂಶ

ಮುಖ್ಯ ಅಭಿಯಂತರ ಬಾಲರಾಜ್ ನಿವಾಸ ಮೇಲೆ ಲೋಕಾಯುಕ್ತ ದಾಳಿರಾಜ್ಯ ನೀರು ಸರಬರಾಜು ಹಾಗೂ ಒಳ ಚರಂಡಿ ಮಂಡಳಿ ಮುಖ್ಯ ಅಭಿಯಂತರ ಬಾಲರಾಜ್
ಮಳವಳ್ಳಿ: ರಾಜ್ಯ ನೀರು ಸರಬರಾಜು ಹಾಗೂ ಒಳ ಚರಂಡಿ ಮಂಡಳಿ ಮುಖ್ಯ ಅಭಿಯಂತರ ಬಾಲರಾಜ್ ಸ್ವಗ್ರಾಮ ತಾಲೂಕಿನ ನಂಜೇಗೌಡನದೊಡ್ಡಿ ಗ್ರಾಮದಲ್ಲಿ ನಿವಾಸ ಹಾಗೂ ತೋಟದ ಮನೆ ಮೇಲೆ ಸಹ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಸೋಮವಾರ ಮುಂಜಾನೆ 5.30ರ ಸಮಯದಲ್ಲಿ ದಾಳಿ ನಡೆಸಿದ ಮೈಸೂರು ವಿಭಾಗದ ಲೋಕಾಯುಕ್ತ ಎಸ್ಪಿ ಜಯರತ್ನ ನೇತೃತ್ವದ ಐವರು ಅಧಿಕಾರಿಗಳ ತಂಡ ಮನೆಯಲ್ಲಿ ಸಿಕ್ಕಿದ ಕುಟುಂಬದವರ ಹೆಸರಿನಲ್ಲಿರುವ ಆಸ್ತಿ ಪತ್ರಗಳ ಪರಿಶೀಲನೆ ನಡೆಸಿ ಜಮೀನಿನ ಬಳಿ ಕುಟುಂಬದವರನ್ನು ಕರೆದೊಯ್ದು ಖುದ್ದಾಗಿ ಮಾಹಿತಿ ಪಡೆದುಕೊಂಡರು. ಮತ್ತೊಂದೆಡೆ ಲೋಕಾಯುಕ್ತ ಇನ್ಸ್ ಪೆಕ್ಟರ್ ಉಮೇಶ್ ನೇತೃತ್ವದ ನಾಲ್ವರು ಅಧಿಕಾರಿಗಳ ತಂಡ ಗ್ರಾಮದ ಹೊರವಲಯದ ಬಾಲರಾಜ್ ಕುಟುಂಬದವರಿಗೆ ಸೇರಿದ ತೋಟದ ಮನೆ ಮೇಲೆ ಸಹ ದಾಳಿ ನಡೆಸಿದ್ದು ತೋಟದ ಮನೆಯಲ್ಲಿ ಶೋಧ ಕಾರ್ಯ ಮುಂದುವರಿಸಿದರು. 30ಕೆಎಂಎನ್ ಡಿ14 ಮಳವಳ್ಳಿ ತಾಲೂಕು ನಂಜೇಗೌಡನದೊಡ್ಡಿ ಗ್ರಾಮದಲ್ಲಿರುವ ಬಾಲರಾಜ್ ಅವರ ನಿವಾಸ.

Share this article