ಬೆಂಗಳೂರು : ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಮಂಗಳವಾರ ರಾಜ್ಯದ ವಿವಿಧೆಡೆ 12 ಮಂದಿ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ, ಸಂಬಂಧಿಕರ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಕೋಟ್ಯಂತರ ರುಪಾಯಿ ಮೌಲ್ಯದ ಚರ ಹಾಗೂ ಸ್ಥಿರಾಸ್ತಿ ಪತ್ತೆಹಚ್ಚಿದ್ದಾರೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೀದರ್, ಹಾಸನ, ಚಿತ್ರದುರ್ಗ, ಉಡುಪಿ, ದಾವಣಗೆರೆ, ಹಾವೇರಿ, ಬಾಗಲಕೋಟೆ ಜಿಲ್ಲೆಗಳಲ್ಲಿ 12 ಮಂದಿ ಸರ್ಕಾರಿ ಅಧಿಕಾರಿಗಳ ಮನೆ ಸೇರಿ 48 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಕೃಷಿ ಜಮೀನು, ನಿವೇಶನ, ಐಷಾರಾಮಿ ಮನೆಗಳು, ದುಬಾರಿ ವಸ್ತುಗಳು, ಚಿನ್ನಾಭರಣ, ನಗದು ಸೇರಿದಂತೆ ಒಟ್ಟು 38.10 ಕೋಟಿ ರು. ಮೌಲ್ಯದ ಅಸಮತೋಲನ ಆಸ್ತಿ ಪತ್ತೆ ಹಚ್ಚಿದ್ದಾರೆ. ದಾಳಿಗೊಳಗಾದ 12 ಮಂದಿ ಅಧಿಕಾರಿಗಳ ವಿರುದ್ಧ ಆಯಾ ಜಿಲ್ಲಾ ಲೋಕಾಯುಕ್ತ ಪೊಲೀಸ್ ಠಾಣೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾವ ಅಧಿಕಾರಿ ಬಳಿ ಎಷ್ಟು ಆಸ್ತಿ?:
1.ಜ್ಯೋತಿ ಮೇರಿ (ಹಾಸನದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಕೌಂಟ್ ಶಾಖೆ ಪ್ರಥಮ ದರ್ಜೆ ಸಹಾಯಕಿ): 4 ಕಡೆ ದಾಳಿ, 3 ನಿವೇಶನ, 1 ಮನೆ, 5.20 ಎಕರೆ ಕೃಷಿ ಜಮೀನು, ₹15.09 ಲಕ್ಷ ನಗದು ಪತ್ತೆ, 15.31 ಲಕ್ಷ ಮೌಲ್ಯದ ಚಿನ್ನಾಭರಣ, ₹64.53 ಲಕ್ಷ ಮೌಲ್ಯದ ವಾಹನಗಳು, ₹10 ಲಕ್ಷ ಬೆಲೆಬಾಳುವ ಇತರೆ ವಸ್ತುಗಳು ಸೇರಿ ಒಟ್ಟು ₹2.17 ಕೋಟಿ ಮೌಲ್ಯದ ಆಸ್ತಿ.
2. ಧೂಳಪ್ಪ (ಬೀದರ್ ಜಿಲ್ಲೆ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ): 4 ಕಡೆ ದಾಳಿ, 2 ನಿವೇಶನಗಳು, 1 ವಾಸದ ಮನೆ, 33 ಎಕರೆ ಕೃಷಿ ಜಮೀನು, ₹83.09 ಲಕ್ಷ ನಗದು, ₹5.02 ಲಕ್ಷ ಮೌಲ್ಯದ ಚಿನ್ನ, ₹43.77 ಲಕ್ಷ ಮೌಲ್ಯದ ವಾಹನಗಳು, ₹24.60 ಲಕ್ಷ ಮೌಲ್ಯದ ದುಬಾರಿ ವಸ್ತುಗಳು ಸೇರಿದಂತೆ ಒಟ್ಟು ₹3.39 ಕೋಟಿ ಮೌಲ್ಯದ ಆಸ್ತಿ.
3.ಎನ್.ಚಂದ್ರಶೇಖರ್ (ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ): 3 ಕಡೆ ದಾಳಿ, 4 ನಿವೇಶನ, 3 ಮನೆಗಳು, 15.8 ಎಕರೆ ಕೃಷಿ ಜಮೀನು, ₹26 ಸಾವಿರ ನಗದು, ₹60.39 ಲಕ್ಷ ಮೌಲ್ಯದ ಚಿನ್ನಾಭರಣ, ₹18.50 ಲಕ್ಷ ಮೌಲ್ಯದ ವಾಹನ, ₹33 ಲಕ್ಷ ಮೌಲ್ಯದ ಇತರೆ ವಸ್ತು ಸೇರಿದಂತೆ ಒಟ್ಟು ₹5.14 ಕೋಟಿ ಮೌಲ್ಯದ ಆಸ್ತಿ.
4. ಲಕ್ಷ್ಮೀನಾರಾಯಣ ಪಿ.ನಾಯಕ್ (ಉಡುಪಿ ಆರ್‌ಟಿಓ): 5 ಕಡೆ ದಾಳಿ, 3 ನಿವೇಶನಗಳು, 2 ಮನೆಗಳು, ₹1.15 ಲಕ್ಷ ನಗದು, ₹5.10 ಲಕ್ಷ ಮೌಲ್ಯದ ಚಿನ್ನಾಭರಣ, ಎನ್‌ಆರ್‌ಐ ಬ್ಯಾಂಕ್ ಬ್ಯಾಲೆನ್ಸ್, ಠೇವಣಿ, ಬ್ರೋಕರ್ ಆಫೀಸ್ ಹಾಗೂ ಇತರೆ ಸೇರಿ ₹1.67 ಕೋಟಿ ಒಳಗೊಂಡಂತೆ ಒಟ್ಟು ₹2.21 ಕೋಟಿ ಮೌಲ್ಯದ ಆಸ್ತಿ.
5. ಜಿ.ಮಂಜುನಾಥ (ಬೆಂಗಳೂರು ನಗರದ ಮಲ್ಲಸಂದ್ರದ ಹೆರಿಗೆ ಆಸ್ಪತ್ರೆ ವೈದ್ಯಾಧಿಕಾರಿ): 4 ಕಡೆ ದಾಳಿ, 1 ನಿವೇಶನ, 1 ಮನೆ, 1 ಪ್ಲಾಟ್, ₹10.53 ಲಕ್ಷ ನಗದು, ₹31.75 ಲಕ್ಷ ಮೌಲ್ಯದ ಚಿನ್ನಾಭರಣ, ₹29.50 ಲಕ್ಷ ಮೌಲ್ಯದ ವಾಹನಗಳು, ₹67.35 ಲಕ್ಷ ಮೌಲ್ಯದ ಇತರೆ ವಸ್ತು ಸೇರಿ ಒಟ್ಟು ₹3.24 ಕೋಟಿ ಮೌಲ್ಯದ ಆಸ್ತಿ.
6. ಜಗದೀಶ್ ನಾಯ್ಕ್ (ದಾವಣಗೆರೆ ಕೆಆರ್‌ಐಡಿಎಲ್ ಸಹಾಯಕ ಅಭಿಯಂತರ): 5 ಕಡೆ ದಾಳಿ, 5 ನಿವೇಶನ, 3 ಮನೆ, 17 ಎಕರೆ ಕೃಷಿ ಜಮೀನು, ₹1.82 ಲಕ್ಷ ಮೌಲ್ಯದ ಚಿನ್ನಾಭರಣ, ₹27 ಲಕ್ಷ ಮೌಲ್ಯದ ವಾಹನ, ₹20 ಲಕ್ಷ ಮೌಲ್ಯದ ಇತರೆ ವಸ್ತು ಸೇರಿ ಒಟ್ಟು ₹2.04 ಕೋಟಿ ಮೌಲ್ಯದ ಆಸ್ತಿ.
7. ಅಶೋಕ್ ಶಂಕರಪ್ಪ ಅರಳೇಶ್ವರ್ (ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಕಚೇರಿ ರಾಜಸ್ವ ನಿರೀಕ್ಷಕ): 3 ಕಡೆ ದಾಳಿ, 2 ನಿವೇಶನಗಳು, 2 ಮನೆ, 11.20 ಎಕರೆ ಕೃಷಿ ಜಮೀನು, ₹1.45 ಲಕ್ಷ ನಗದು, ₹26.02 ಲಕ್ಷ ಮೌಲ್ಯದ ಚಿನ್ನಾಭರಣ, ₹15 ಲಕ್ಷ ಮೌಲ್ಯದ ವಾಹನ, ₹57.42 ಲಕ್ಷ ಮೌಲ್ಯದ ಇತರೆ ವಸ್ತು ಸೇರಿ ಒಟ್ಟು ₹2.25 ಕೋಟಿ ಮೌಲ್ಯದ ಆಸ್ತಿ.
8. ಬಸವೇಶ ಶಿವಪ್ಪ ಶಿಡೆನೂರ (ಹಾವೇರಿ ಜಿಲ್ಲೆ ಸವಣೂರು ತಾ.ಪಂ. ಪ್ರಭಾರ ಕಾರ್ಯ ನಿರ್ವಾಹಕ ಅಧಿಕಾರಿ): 2 ಕಡೆ ದಾಳಿ, 6 ನಿವೇಶನ, 1 ವಾಸದ ಮನೆ, ₹4,450 ನಗದು, ₹48.97 ಲಕ್ಷ ಮೌಲ್ಯದ ಚಿನ್ನಾಭರಣ, ₹13 ಲಕ್ಷ ಮೌಲ್ಯದ ವಾಹನ, ₹40 ಲಕ್ಷ ಮೌಲ್ಯದ ಇತರೆ ವಸ್ತು ಸೇರಿ ಒಟ್ಟು ₹1.67 ಕೋಟಿ ಮೌಲ್ಯದ ಆಸ್ತಿ.
9. ಚೇತನ್ (ಬಾಗಲಕೋಟೆ ಕಮತಗಿಯ ಕೆಬಿಜೆಎನ್‌ಎಲ್, ಎಆರ್‌ಬಿಸಿ ವಿಭಾಗ-2 ಕಿರಿಯ ಅಭಿಯಂತರ): 2 ಕಡೆ ದಾಳಿ, 4 ನಿವೇಶನ, 1 ಮನೆ, ₹36 ಸಾವಿರ ನಗದು, ₹24.81 ಲಕ್ಷ ಮೌಲ್ಯದ ಚಿನ್ನಾಭರಣ, ₹20 ಲಕ್ಷ ಮೌಲ್ಯದ ವಾಹನ, ₹2.11 ಲಕ್ಷ ಬ್ಯಾಂಕ್ ಬ್ಯಾಲೆನ್ಸ್ ಸೇರಿ ಒಟ್ಟು ₹1.67 ಕೋಟಿ ಮೌಲ್ಯದ ಆಸ್ತಿ.
10. ವಿ.ಸುಮಂಗಲ (ಬೆಂಗಳೂರು ನಗರದ ರಾಜ್ಯ ಶಾಲಾ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ನಿರ್ದೇಶಕಿ): 6 ಕಡೆ ದಾಳಿ, 4 ನಿವೇಶನ, 5 ವಾಸದ ಮನೆ, 19 ಎಕರೆ ಕೃಷಿ ಜಮೀನು, ₹1 ಕೋಟಿ ಮೌಲ್ಯದ ಚಿನ್ನಾಭರಣ, ₹22 ಲಕ್ಷ ಮೌಲ್ಯದ ವಾಹನಗಳು, ₹96.73 ಲಕ್ಷ ಮೌಲ್ಯದ ಷೇರು ಮತ್ತು ಮ್ಯೂಚುವೆಲ್ ಫಂಡ್, ₹4.85 ಲಕ್ಷ ಮೌಲ್ಯದ ಗೋಲ್ಡ್ ಬಾಂಡ್ ಸೇರಿ ಒಟ್ಟು ₹7.32 ಕೋಟಿ ಮೌಲ್ಯದ ಆಸ್ತಿ.
11.ಬಿ.ಎಸ್.ನಡುವಿನ ಮನೆ (ದಾವಣಗೆರೆ ಜಿಲ್ಲೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಹಿರಿಯ ಸಹಾಯಕ): 7 ಕಡೆ ದಾಳಿ, 1 ನಿವೇಶನ, 4 ಮನೆ, 20 ಎಕರೆ ಕೃಷಿ ಜಮೀನು, ₹60 ಸಾವಿರ ನಗದು, ₹16.25 ಲಕ್ಷ ಮೌಲ್ಯದ ಚಿನ್ನ, ₹42.90 ಲಕ್ಷ ಮೌಲ್ಯದ ವಾಹನ ಸೇರಿ ಒಟ್ಟು ₹2.30 ಕೋಟಿ ಮೌಲ್ಯದ ಆಸ್ತಿ.
12. ಎನ್.ಕೆ.ಗಂಗಮರಿಗೌಡ (ಬೆಂಗಳೂರು ಕೆಐಎಡಿಬಿ ಸರ್ವೇಯರ್): 5 ಕಡೆ ದಾಳಿ, 2 ನಿವೇಶನ, 2 ಮನೆ, 2 ಎಕರೆ ಕೃಷಿ ಜಮೀನು, ₹7.73 ಲಕ್ಷ ನಗದು, ₹51.61 ಲಕ್ಷ ಮೌಲ್ಯದ ಚಿನ್ನ, ₹24.21 ಲಕ್ಷ ಮೌಲ್ಯದ ವಾಹನ, ₹24.83 ಲಕ್ಷ ಮೌಲ್ಯದ ಇತರೆ ವಸ್ತು ಸೇರಿ ಒಟ್ಟು ₹4.66 ಕೋಟಿ ಮೌಲ್ಯದ ಆಸ್ತಿ.
ಯಾವುದು ಎಷ್ಟೆಷ್ಟು?
ನಿವೇಶನಗಳು, ಮನೆಗಳು, ಕೃಷಿ ಭೂಮಿ- ₹24.34 ಕೋಟಿ
ನಗದು- ₹1.20 ಕೋಟಿ.
ಚಿನ್ನಾಭರಣಗಳು- ₹3.87 ಲಕ್ಷ
ವಾಹನಗಳು- ₹3.20 ಕೋಟಿ
ಇತರೆ ಬೆಲೆಬಾಳುವ ವಸ್ತುಗಳು- ₹5.48 ಕೋಟಿ