ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕಲಬುರಗಿ, ಧಾರವಾಡ, ಹಾಸನ, ಗದಗ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ 8 ಮಂದಿ ಸರ್ಕಾರಿ ಅಧಿಕಾರಿಗಳ ಮನೆ ಸೇರಿ 45 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಕೃಷಿ ಜಮೀನು, ನಿವೇಶನ, ಐಷಾರಾಮಿ ಮನೆಗಳು, ದುಬಾರಿ ವಸ್ತುಗಳು, ಚಿನ್ನಾಭರಣ, ನಗದು ಸೇರಿ ಒಟ್ಟು 34.90 ಕೋಟಿ ರು. ಮೌಲ್ಯದ ಆದಾಯ ಮೀರಿದ ಆಸ್ತಿ ಪತ್ತೆ ಹಚ್ಚಿದ್ದಾರೆ.
ದಾಳಿಗೊಳಗಾದ ಎಂಟು ಮಂದಿ ಅಧಿಕಾರಿಗಳ ವಿರುದ್ಧ ಆಯಾ ಜಿಲ್ಲಾ ಲೋಕಾಯುಕ್ತ ಪೊಲೀಸ್ ಠಾಣೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಯಾವ ಅಧಿಕಾರಿ ಬಳಿ ಎಷ್ಟು ಆಸ್ತಿ?
6.ಡಿ.ಬಿ.ಲತಾಮಣಿ(ಚಿಕ್ಕಮಗಳೂರು ನಗರಸಭೆ ಕಾರ್ಯಾಲಯದ ಲೆಕ್ಕಾಧೀಕ್ಷಕಿ): 6 ಕಡೆ ದಾಳಿ, 6 ನಿವೇಶನ, 2 ವಾಸದ ಮನೆಗಳು, 10 ಗುಂಟೆ ಕೃಷಿ ಜಮೀನು, 1.98 ಲಕ್ಷ ರು. ನಗದು, 75 ಲಕ್ಷ ರು. ಮೌಲ್ಯದ ನಿಶ್ಚಿತ ಠೇವಣಿ (ಎಫ್‌ಡಿ) 22 ಲಕ್ಷ ರು. ಮೌಲ್ಯದ ಚಿನ್ನ, 10 ಲಕ್ಷ ರು. ಮೌಲ್ಯದ ವಾಹನಗಳು, 20 ಲಕ್ಷ ರು. ಮೌಲ್ಯದ ಇತರೆ ವಸ್ತುಗಳು ಸೇರಿದಂತೆ ಒಟ್ಟು 2.89 ಕೋಟಿ ರು. ಆಸ್ತಿ ಪತ್ತೆ.7. ಡಿ.ಬಿ.ಪಾಟೀಲ್( ಗದಗ ಟೌನ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್): 8 ಕಡೆ ದಾಳಿ, 4 ನಿವೇಶನಗಳು, 1 ವಾಸದ ಮನೆ, 4.89 ಲಕ್ಷ ರು. ನಗದು, 27 ಲಕ್ಷ ರು. ಮೌಲ್ಯದ ಚಿನ್ನಾಭರಣ, 10 ಲಕ್ಷ ರು. ಮೌಲ್ಯದ ವಾಹನಗಳು, 7 ಲಕ್ಷ ರು. ಮೌಲ್ಯದ ಗೃಹೋಪಯೋಗಿ ವಸ್ತುಗಳು ಸೇರಿದಂತೆ ಒಟ್ಟು 1.48 ಕೋಟಿ ರು. ಆಸ್ತಿ ಪತ್ತೆ.8. ಡಾ.ಪ್ರದೀಪ್(ಶಿವಮೊಗ್ಗದ ಕೆ.ಎಸ್.ಎ.ಎಚ್.ಯು ಕೋ-ಆರ್ಡಿನೇಟರ್, ಪ್ರಾಧ್ಯಾಪಕ): 6 ಕಡೆ ದಾಳಿ, 5 ನಿವೇಶನ, 1 ವಾಸದ ಮನೆ, 16.7 ಎಕರೆ ಕೃಷಿ ಜಮೀನು, 10 ಸಾವಿರ ರು. ನಗದು, 34.75 ಲಕ್ಷ ರು. ಮೌಲ್ಯದ ಚಿನ್ನ, 30 ಲಕ್ಷ ರು. ಮೌಲ್ಯದ ವಾಹನಗಳು, 25 ಸಾವಿರ ರು. ವಿದೇಶಿ ಕರೆನ್ಸಿಗಳು, 15.50 ಲಕ್ಷ ರು. ಮೌಲ್ಯದ ಮೇಕೆ ಹಾಗೂ ಹಸುಗಳು, 50 ಲಕ್ಷ ರು. ಮೌಲ್ಯದ ಫಾರ್ಮ್ ಹೌಸ್, 29.75 ಲಕ್ಷ ರು. ಬ್ಯಾಂಕ್ ಬ್ಯಾಲೆನ್ಸ್, 28.75 ಲಕ್ಷ ರು. ಮೌಲ್ಯದ ಬೆಲೆಬಾಳುವ ವಸ್ತುಗಳು ಸೇರಿ ಒಟ್ಟು 6.34 ಕೋಟಿ ರು. ಆಸ್ತಿ ಪತ್ತೆ.
----ಚಿತ್ರಗಳು-
===ದಾಳಿಗೊಳಗಾದ ಅಧಿಕಾರಿಗಳ ವಿವರ:ಬಿಬಿಎಂಪಿ ಕಾರ್ಯಕಾರಿ ಅಭಿಯಂತರ ಕೆ.ಎಸ್.ಪ್ರಕಾಶ್, ಆನೇಕಲ್ ಪುರಸಭೆ ಮುಖ್ಯಾಧಿಕಾರಿ ಕೆ.ಜಿ.ಅಮರನಾಥ್, ಕಲಬುರಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಾರ್ಯಕಾರಿ ಅಭಿಯಂತರ ಮಲ್ಲಿಕಾರ್ಜುನ ಅಲ್ಲಿಪುರ, ಕಲಬುರಗಿ ಜಿಪಂ ಸಣ್ಣೂರು ಗ್ರಾಪಂ ಪಿಡಿಓ ರಾಮಚಂದ್ರ ಮಸರಕಲ್, ಧಾರವಾಡದ ಕರ್ನಾಟಕ ನೀರಾವರಿ ನಿಗಮ ನಿಯಮಿತ ಮಲಪ್ರಭಾ ಪ್ರಾಜೆಕ್ಟ್ ಜೋನ್ ಮುಖ್ಯ ಅಭಿಯಂತರ ಅಶೋಕ್ ಲಕ್ಷ್ಮಪ್ಪ ವಸನಾಡ್, ಚಿಕ್ಕಮಗಳೂರು ನಗರಸಭೆ ಕಾರ್ಯಾಲಯ ಲೆಕ್ಕಾಧೀಕ್ಷಕಿ ಲತಾಮಣಿ ಡಿ.ಬಿ., ಗದಗ ಟೌನ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಡಿ.ಬಿ.ಪಾಟೀಲ್ ಹಾಗೂ ಶಿವಮೊಗ್ಗದ ಕೆಎಸ್‌ಎಎಚ್‌ಯು ಎಡಿಆರ್, ಕೋ ಆರ್‌ಡಿನೇಟರ್ ಡಾ.ಪ್ರದೀಪ್ ಅವರ ಮನೆಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.