- ಐದು ಕಡೆ ಎಸ್‌ಪಿ ಕೌಲಾಪುರೆ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ
- ಮನೆ, ನಿವೇಶನ, ಜಮೀನು, ಒಡವೆ, ವಾಹನಗಳು, ಆಸ್ತಿ ದಾಖಲೆಗಳು ಪತ್ತೆ
- ಆಹಾರ ಸುರಕ್ಷಾ ಕಚೇರಿ ರೆಫ್ರಿಜರೇಟರಿನಲ್ಲಿ ಕೊಳೆತು ನಾರುತ್ತಿದ್ದ ಸ್ಯಾಂಪಲ್‌ಗಳು- - - ಕನ್ನಡಪ್ರಭ ವಾರ್ತೆ ದಾವಣಗೆರೆಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಜಿಲ್ಲಾ ಆಹಾರ ಸುರಕ್ಷಾ ಶಾಖೆ ಜಿಲ್ಲಾ ಅಧಿಕಾರಿ ಮನೆ, ಕಚೇರಿ ಸೇರಿದಂತೆ 5 ಕಡೆ ಏಕಕಾಲಕ್ಕೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಕೋಟ್ಯಂತರ ರು. ಮೌಲ್ಯದ ಆಸ್ತಿಯನ್ನು ಪತ್ತೆ ಮಾಡಿದ್ದಾರೆ.
ದಾಳಿ ವೇಳೆ ಆಹಾರ ಸುರಕ್ಷತಾ ಅಧಿಕಾರಿ ಡಾ.ನಾಗರಾಜ ಮನೆಯಲ್ಲಿ 1 ನಿವೇಶನ, 4 ಮನೆಗಳು, 38 ಎಕರೆ ಜಮೀನು, 1 ಕೆಜಿ 597 ಗ್ರಾಂ ಚಿನ್ನಾಭರಣ, 5 ಕೆ,ಜಿ, 249 ಗ್ರಾಂ ಬೆಳ್ಳಿಯ ವಸ್ತುಗಳು, ₹38 ಲಕ್ಷ ಮೌಲ್ಯದ ಕಾರು, ದ್ವಿಚಕ್ರ ವಾಹನಗಳು, ₹32 ಲಕ್ಷ ಮೌಲ್ಯದ ಇತರೆ ಸ್ವತ್ತುಗಳು ಸದ್ಯ ಪತ್ತೆ ಮಾಡಲಾಗಿದೆ. ಬ್ಯಾಂಕ್ ಲಾಕರ್ ಇತರೆ ಕಡೆ ಪರಿಶೀಲನೆ ಕಾರ್ಯವನ್ನು ಗುರುವಾರ ರಾತ್ರಿಯೂ ಲೋಕಾಯುಕ್ತ ತಂಡಗಳು ಮುಂದುವರಿಸಿದ್ದವು.
ಉಪ್ಪಿಟ್ಟು, ದೋಸೆ, ಪೂರಿ, ಪಲಾವ್ ಸೇರಿದಂತೆ ಹತ್ತಾರು ಆಹಾರ ಪದಾರ್ಥಗಳು ಸ್ಯಾಂಪಲ್‌ಗೆಂದು ತಂದಿದ್ದು, ಅದಕ್ಕೆ ಯಾವುದೇ ದಾಖಲೆಯನ್ನೂ ನಿರ್ವಹಣೆ ಮಾಡಿರಲಿಲ್ಲ. ಕಸದ ಬುಟ್ಟಿಯಲ್ಲಿ ತುಂಬಿದಂತೆ ಆಹಾರದ ಮಾದರಿಗಳನ್ನು ತುಂಬಿಟ್ಟಿರುವುದು, ಹತ್ತಾರು ಕಲಬೆರಕೆ ಪ್ರಕರಣಗಳಿದ್ದರೂ ಲೋಕಾಯುಕ್ತ ಅಧಿಕಾರಿಗಳ ದಾಳಿ ವೇಳೆ ಆಹಾರ ಸುರಕ್ಷಾ ಅಧಿಕಾರಿ ಡಾ.ನಾಗರಾಜ ಮೌನಕ್ಕೆ ಶರಣಾಗಿದ್ದರು ಎನ್ನಲಾಗಿದೆ.
- - - -6ಕೆಡಿವಿಜಿ2: ದಾವಣಗೆರೆ ಎಸ್.ನಿಜಲಿಂಗಪ್ಪ ಬಡಾವಣೆಯಲ್ಲಿರುವ ಆಹಾರ ಸುರಕ್ಷತಾ ಅಧಿಕಾರಿ ಡಾ.ನಾಗರಾಜ ನಿವಾಸ, ವಾಹನ.
-6ಕೆಡಿವಿಜಿ4: ದಾವಣಗೆರೆ ಎಸ್.ನಿಜಲಿಂಗಪ್ಪ ಬಡಾವಣೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿ ಡಾ.ನಾಗರಾಜ ನಿವಾಸದಲ್ಲಿ ಪತ್ತೆಯಾದ ಚಿನ್ನಾಭರಣಗಳು, ಬೆಳ್ಳಿ ಆಭರಣ, ವಸ್ತುಗಳು.