ಲೋಕಾಯುಕ್ತರಿಂದ 16 ಸ್ವಯಂ ಪ್ರೇರಿತ ದೂರು ದಾಖಲು

KannadaprabhaNewsNetwork |  
Published : Aug 19, 2026, 02:45 AM IST
ಫೋಟೋ 18 ಎ, ಎನ್, ಪಿ 1 ಆನಂದಪುರ ಇಲ್ಲಿಗೆ ಸಮೀಪದ  ಕೆಂಜಿಗಾಪುರ ವೀರಭದ್ರ ಸ್ವಾಮಿ ದೇವಾಲಯದ ನಡೆದ ಶ್ರಾವಣ ಮಾಸದ ಧರ್ಮಸಭೆಯಲ್ಲಿ ಕೋಣಂದೂರು ಮಳಲಿ ಮಠದ ಡಾ. ಶ್ರೀ ಗುರು ನಾಗಭೂಷಣ ಶಿವಾಚಾರ್ಯ ಸ್ವಾಮಿ ಸಾನಿಧ್ಯ ವಹಿಸಿದ್ದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆಜುಲೈ 23 ಮತ್ತು 24ರಂದು ರಾಜ್ಯದ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಬಾಗಲಕೋಟೆ ಜಿಲ್ಲೆಯ ಪ್ರವಾಸ ಕಾಲಕ್ಕೆ ವಿವಿಧ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲಿಸಿ ಕಂಡುಬಂದ ನೂನ್ಯತೆಗಳು, ಕರ್ತವ್ಯ ಲೋಪ ಮತ್ತು ದುರಾಡಳಿತದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 16 ಇಲಾಖೆಗಳ ಮೇಲೆ ಸ್ವಯಂಪ್ರೇರಿತ ದೂರುಗಳನ್ನು ದಾಖಲಿಸಿಕೊಂಡು ವಿಚಾರಣೆ ಕೈಗೊಂಡಿದ್ದಾರೆ ಎಂದು ಲೋಕಾಯುಕ್ತ ಇಲಾಖೆ ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ.ಬಿ.ನಂದಗಾಂವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜುಲೈ 23 ಮತ್ತು 24ರಂದು ರಾಜ್ಯದ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಬಾಗಲಕೋಟೆ ಜಿಲ್ಲೆಯ ಪ್ರವಾಸ ಕಾಲಕ್ಕೆ ವಿವಿಧ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲಿಸಿ ಕಂಡುಬಂದ ನೂನ್ಯತೆಗಳು, ಕರ್ತವ್ಯ ಲೋಪ ಮತ್ತು ದುರಾಡಳಿತದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 16 ಇಲಾಖೆಗಳ ಮೇಲೆ ಸ್ವಯಂಪ್ರೇರಿತ ದೂರುಗಳನ್ನು ದಾಖಲಿಸಿಕೊಂಡು ವಿಚಾರಣೆ ಕೈಗೊಂಡಿದ್ದಾರೆ ಎಂದು ಲೋಕಾಯುಕ್ತ ಇಲಾಖೆ ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ.ಬಿ.ನಂದಗಾಂವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಪವಿಭಾಗಾಧಿಕಾರಿ ಕಚೇರಿ ಬಾಗಲಕೋಟೆ, ಸಹಾಯಕ ನಿರ್ದೇಶಕರ ಕಚೇರಿ, ಭೂದಾಖಲೆಗಳ ಇಲಾಖೆ, ಬಾಗಲಕೋಟೆ, ನವನಗರದ ಬಸ್ ನಿಲ್ದಾಣ, ನಗರಸಭೆ ಬಾಗಲಕೋಟೆ, ಜಿಲ್ಲಾಸ್ಪತ್ರೆ, ಹಿರಿಯ ನೋಂದಣಾಧಿಕಾರಿ ಕಚೇರಿ, ಬಾಗಲಕೋಟೆ, ತಹಸೀಲ್ದಾರ ಕಚೇರಿ ಬಾಗಲಕೋಟೆ, ಗದ್ದನಕೇರಿ ಕ್ರಾಸ್ ಬಳಿ ಇರುವ ಕುಡಿಯುವ ನೀರು ಶುದ್ಧೀಕರಣ ಘಟಕ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬಾಗಲಕೋಟೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬಾಗಲಕೋಟೆ, ಡಾ.ಬಿ.ಆರ್.ಅಂಬೇಡ್ಕರ ಅಭಿವೃದ್ದಿ ನಿಗಮ ಬಾಗಲಕೋಟೆ.

ಉಪ ನಿರ್ದೇಶಕರ ಕಚೇರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಬಾಗಲಕೋಟೆ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಬಾಗಲಕೋಟೆ, ಕೊಳಚೆ ನೀರು ಶುದ್ದೀಕರಣ ಘಟಕ-2 ನವನಗರ, ಬಾಗಲಕೋಟೆ, ಉಪನಿರ್ದೇಶಕರ ಕಚೇರಿ ಸಮಾಜ ಕಲ್ಯಾಣ ಇಲಾಖೆ ಬಾಗಲಕೋಟೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ ಬಾಗಲಕೋಟೆ ಸೇರಿ ಒಟ್ಟು 16 ಇಲಾಖೆಗಳ ಮೇಲೆ ಸ್ವಯಂಪ್ರೇರಿತ ದೂರುಗಳನ್ನು ದಾಖಲಿಸಿ ವಿಚಾರಣೆ ಕೈಗೊಂಡಿರುತ್ತಾರೆ ಎಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರೋಗ್ಯಕರ ಪರಿಸರ ನಿರ್ಮಿಸುವ ಉದ್ದೇಶದಿಂದ ಲಕ್ಷ ವೃಕ್ಷ ಸಂಕಲ್ಪ
ಸೆ.4, 5ರಂದು ಕೃಷ್ಣ ವಾದಿರಾಜ ಮಠದಲ್ಲಿ ಕೃಷ್ಣ ಜನ್ಮಾಷ್ಟಮಿ