ವಿಬಿಜಿ–ರಾಮ್ ಜಿ ಕಾಮಗಾರಿ ಸ್ಥಳಕ್ಕೆ ಜಿಪಂ ಉಪಕಾರ್ಯದರ್ಶಿ ಭೇಟಿ

KannadaprabhaNewsNetwork |  
Published : Aug 19, 2026, 02:45 AM IST
18ಬಿಎಸ್ವಿ03- ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಬಿಜಿ–ರಾಮ್ ಜಿ ಯೋಜನೆಯಡಿ ನಡೆಯುತ್ತಿರುವ ಕೆರೆ ಕಾಮಗಾರಿ ಸ್ಥಳಕ್ಕೆ ಮಂಗಳವಾರ ಉಪಕಾರ್ಯದರ್ಶಿ ಪ್ರಕಾಶ ವಡ್ಡರ ಭೇಟಿ ನೀಡಿ ಯೋಜನೆಯ ಕುರಿತು ಜನಜಾಗೃತಿ ಮೂಡಿಸಿದರು. | Kannada Prabha

ಸಾರಾಂಶ

ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಹಾಗೂ ಉಕ್ಕಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿಬಿಜಿ–ರಾಮ್ ಜಿ ಯೋಜನೆಯಡಿ ನಡೆಯುತ್ತಿರುವ ಕೆರೆ ಕಾಮಗಾರಿ ಸ್ಥಳಗಳಿಗೆ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಅವರು ಮಂಗಳವಾರ ಭೇಟಿ ನೀಡಿ ಕಾಮಗಾರಿಯ ಪ್ರಗತಿ, ಕೂಲಿಕಾರರ ಹಾಜರಾತಿ, ಗ್ರಾಪಂನಲ್ಲಿ ಹಮ್ಮಿಕೊಂಡ ಕಾಮಗಾರಿಗಳ ಬಗ್ಗೆ ಹಾಗೂ ಮೂಲ ಸೌಲಭ್ಯಗಳ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ತಾಲೂಕಿನ ಇಂಗಳೇಶ್ವರ ಹಾಗೂ ಉಕ್ಕಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿಬಿಜಿ–ರಾಮ್ ಜಿ ಯೋಜನೆಯಡಿ ನಡೆಯುತ್ತಿರುವ ಕೆರೆ ಕಾಮಗಾರಿ ಸ್ಥಳಗಳಿಗೆ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಅವರು ಮಂಗಳವಾರ ಭೇಟಿ ನೀಡಿ ಕಾಮಗಾರಿಯ ಪ್ರಗತಿ, ಕೂಲಿಕಾರರ ಹಾಜರಾತಿ, ಗ್ರಾಪಂನಲ್ಲಿ ಹಮ್ಮಿಕೊಂಡ ಕಾಮಗಾರಿಗಳ ಬಗ್ಗೆ ಹಾಗೂ ಮೂಲ ಸೌಲಭ್ಯಗಳ ಪರಿಶೀಲನೆ ನಡೆಸಿದರು.

ಉಕ್ಕಲಿ ಮತ್ತು ಇಂಗಳೇಶ್ವರ ಗ್ರಾಮ ಪಂಚಾಯತಿಯಲ್ಲಿ ಲೇಬರ್ ಎಂಗೇಜ್ ಗೂ ಮತ್ತು ಎನ್‌ಎಂಎಂಎಸ್‌ ಹಾಜರಾತಿ ಪ್ರಕಾರ ಕೂಲಿಕಾರರ ಹಾಜರಾತಿ ತಾಳೆ ಮಾಡಿ ಕಾಮಗಾರಿ ಸ್ಥಳದಲ್ಲಿ ಕೂಲಿಕಾರ್ಮಿಕರು ಕಡಿಮೆ ಇರುವುದನ್ನು ಪರಿಶೀಲಿಸಿ ಮುಂದಿನ ದಿನದಲ್ಲಿ ಕೂಲಿಕಾರರ ಸಂಖ್ಯೆ ಹೆಚ್ಚಿಸಬೇಕು ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರತಿದಿನ ಎನ್‌ಎಂಎಂಎಸ್‌ ಆ್ಯಪ್‌ ಮೂಲಕ ಕಡ್ಡಾಯವಾಗಿ ಹಾಜರಾತಿ ದಾಖಲಿಸುವಂತೆ ಗ್ರಾಪಂ ಸಿಬ್ಬಂದಿಗೆ ನಿರ್ದೇಶನ ನೀಡಿದರು. ಮುಂದಿನ ದಿನಗಳಲ್ಲಿ ಗರಿಷ್ಠ 200 ಕೂಲಿಕಾರರಿಗೆ ಕೆಲಸ ನೀಡಬೇಕು ಎಂದು ತಿಳಿಸಿದರು.

ಉಕ್ಕಲಿ ಗ್ರಾಪಂ ವ್ಯಾಪ್ತಿಯ ಪರಮಾನಂದ ಕೆರೆಯಲ್ಲಿ ಕೂಲಿಕಾರರಿಗೆ ಅಳತೆಯಲ್ಲಿ 50*50 ಮಾಪನದಲ್ಲಿ ಕೆಲಸ ನೀಡಿ ನಡುವೆ ಸಾಕ್ಷಿಗುಡ್ಡದ ತೆರನಾಗಿ ಕಾಮಗಾರಿ ಹಮ್ಮಿಕೊಂಡು ಕೆಲಸ ನೀಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು. ಎನ್.ಎಂ.ಆರ್. ಮುಗಿದ 15 ದಿನಗಳಲ್ಲಿ ಕೂಲಿಮೊತ್ತ ಜಮಾ ಆಗಲಿದೆ ಎಂದು ಕೂಲಿಕಾರರಿಗೆ ಭರವಸೆ ನೀಡಿದರು.

ಕೂಲಿಕಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೂಲಿ ಆಧಾರಿತ ಕಾಮಗಾರಿಗಳನ್ನು ಕ್ರಿಯಾಯೋಜನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಳಿಸುವಂತೆ ಪಿಡಿಒ ಅವರಿಗೆ ಸೂಚಿಸಿದ ಅವರು, ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಅಗತ್ಯ ಮೂಲ ಸೌಲಭ್ಯಗಳಾದ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಹಾಗೂ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಕಡ್ಡಾಯವಾಗಿ ಲಭ್ಯವಿರುವಂತೆ ನೋಡಿಕೊಳ್ಳಬೇಕೆಂದರು.

ಕೂಲಿಕಾರರೊಂದಿಗೆ ಸಂವಾದ ನಡೆಸಿದ ಉಪ ಕಾರ್ಯದರ್ಶಿಗಳು ವಿಬಿಜಿ–ರಾಮ್ ಜಿ ಯೋಜನೆಯ ಉದ್ದೇಶ ಹಾಗೂ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು. ಕೆಲಸಕ್ಕೆ ಎಷ್ಟು ಮಂದಿ ಬಂದರೂ ಸಹ 125 ದಿನಗಳವರೆಗೆ ಉದ್ಯೋಗ ಒದಗಿಸುವ ವ್ಯವಸ್ಥೆ ಇದೆ ಎಂದು ತಿಳಿಸಿ, ಕೂಲಿಕಾರರು ನಿರಂತರವಾಗಿ ಕೆಲಸಕ್ಕೆ ಹಾಜರಾಗುವಂತೆ ಮನವರಿಕೆ ಮಾಡಿಕೊಟ್ಟರು. ಯೋಜನೆ ಪ್ರಾರಂಭದ ಹಂತದಲ್ಲಿರುವುದರಿಂದ ವೇತನ ಜಮೆಯಾಗುವಲ್ಲಿ ಸ್ವಲ್ಪ ವಿಳಂಬವಾಗುವ ಸಾಧ್ಯತೆ ಇದ್ದರೂ, ಅದಕ್ಕಾಗಿ ಕೆಲಸಕ್ಕೆ ಬರುವುದನ್ನು ನಿಲ್ಲಿಸಬಾರದು ಎಂದು ತಿಳಿಸಿದ ಅವರು, ತಮ್ಮ ಮಕ್ಕಳನ್ನು ಉತ್ತಮವಾಗಿ ವಿದ್ಯಾಭ್ಯಾಸ ಮಾಡಿಸಿ ಭವಿಷ್ಯ ರೂಪಿಸುವಂತೆ ಕೂಲಿಕಾರರಿಗೆ ಸಲಹೆ ನೀಡಿದರು.ಕಾಮಗಾರಿ ಸ್ಥಳದಲ್ಲಿ ಜಾಬ್‌ಕಾರ್ಡ್ ಸಮಸ್ಯೆ ಇದ್ದವರ ವರದಿ ಸಿದ್ಧಪಡಿಸಿ ಜಿಪಂಗೆ ಕಳಿಸುವಂತೆ ಗಣಕಯಂತ್ರ ನಿರ್ವಾಹಕರಿಗೆ ಸೂಚನೆ ನೀಡಿದರು. ಜಾಬ್‌ ಕಾರ್ಡ್ ಮೇಳವನ್ನು ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಹಮ್ಮಿಕೊಂಡು ಜಾಬ್‌ಕಾರ್ಡ್ ನ್ನು ಕೂಲಿಕಾರರಿಗೆ ಒದಗಿಸಿ ಹೆಚ್ಚಿನ ಉದ್ಯೋಗ ಕಲ್ಪಿಸಿಕೊಡುವುದಾಗಿ ತಿಳಿಸಿದ ಅವರು, ಮುಂದಿನ ದಿನಗಳಲ್ಲಿ ನಮೂನೆ–6ರಲ್ಲಿ ಕೆಲಸದ ಬೇಡಿಕೆ ಸಲ್ಲಿಸುವ ಪ್ರತಿಯೊಬ್ಬರಿಗೂ ಉದ್ಯೋಗ ಒದಗಿಸಲಾಗುವುದು ಎಂದು ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ ವಂದಾಲ ಕೂಲಿಕಾರರಿಗೆ ಭರವಸೆ ನೀಡಿದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ ವಂದಾಲ, ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಪ್ರಕಾಶ ದೇಸಾಯಿ, ತಾಂತ್ರಿಕ ಸಂಯೋಜಕ ವಿಶ್ವನಾಥ ಪಟ್ಟಣಶೆಟ್ಟಿ, ಐಇಸಿ ಸಂಯೋಜಕ ಮಡಿವಾಳಪ್ಪ ಬಿರಾದಾರ, ತಾಂತ್ರಿಕ ಸಹಾಯಕ ಚಂದ್ರಶೇಖರ ಆಡಿನ, ಉಕ್ಕಲಿ ಗ್ರಾಮ ಪಂಚಾಯತ ಪಿಡಿಓ ಮಲ್ಲಿಕಾರ್ಜುನ ಹಿಟ್ನಳ್ಳಿ, ಇಂಗಳೇಶ್ವರ ಗ್ರಾಮ ಪಂಚಾಯತಿ ಪಿಡಿಒ ಜಯಕುಮಾರ ದೇವರನಾವದಗಿ, ಅಪ್ಪು ಧನಶೆಟ್ಟಿ, ಕಾರ್ಯದರ್ಶಿಗಳು, ಗ್ರಾಮ ಪಂಚಾಯತಿ ಸಿಬ್ಬಂದಿ, ಕಾಯಕ-ಬಂಧುಗಳು, ಹಾಗೂ ಕೂಲಿಕಾರ್ಮಿಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರೋಗ್ಯಕರ ಪರಿಸರ ನಿರ್ಮಿಸುವ ಉದ್ದೇಶದಿಂದ ಲಕ್ಷ ವೃಕ್ಷ ಸಂಕಲ್ಪ
ಸೆ.4, 5ರಂದು ಕೃಷ್ಣ ವಾದಿರಾಜ ಮಠದಲ್ಲಿ ಕೃಷ್ಣ ಜನ್ಮಾಷ್ಟಮಿ