ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಲೋಕೇಶ್‌ ಸಿದ್ಧತೆ

KannadaprabhaNewsNetwork |  
Published : Mar 17, 2026, 01:45 AM IST
16ಎಚ್ಎಸ್ಎನ್12 :  | Kannada Prabha

ಸಾರಾಂಶ

ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಮುಂಬರುವ ದಿನಗಳಲ್ಲಿ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳು ಈಗಾಗಲೇ ತಮ್ಮ ಸ್ಪರ್ಧೆಯನ್ನು ಪ್ರಕಟಿಸುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಮತದಾರರ ಅಭಿಪ್ರಾಯದಂತೆ ತಾವೂ ಸ್ಪರ್ಧೆಯಲ್ಲಿ ಇದ್ದೇನೆ ಎಂದರು. ಈವರೆಗೆ ಪರಿಷತ್ತಿನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಜಿಲ್ಲಾ ಕೇಂದ್ರ ಮೊದಲುಗೊಂಡು ಎಲ್ಲ ತಾಲೂಕುಗಳಿಂದಲೂ ಬೆಂಬಲ ವ್ಯಕ್ತವಾಗಿದೆ. ಈ ಪವಿತ್ರವಾದ ಕ್ಷೇತ್ರದಲ್ಲಿ ಅಪಚಾರವಾಗದಂತೆ ಎಚ್ಚರಿಕೆ ವಹಿಸುತ್ತೇನೆ. ದೊರೆತ ಅವಕಾಶದಿಂದ ವಂಚಿತರಾಗದಂತೆ ಬೆಂಬಲಿಗರು ಪ್ರೋತ್ಸಾಹಿಸಿರುವುದು ಹೆಚ್ಚಿನ ಶಕ್ತಿ ದೊರೆತಂತಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ರಥವನ್ನು ಎಳೆಯುವ ಅವಕಾಶ ಚನ್ನರಾಯಪಟ್ಟಣ ತಾಲೂಕಿಗೆ ಒಲಿದು ಬಂದಿದ್ದು, ಇದಕ್ಕೆ ಜಿಲ್ಲೆಯ ಎಲ್ಲ ಕನ್ನಡದ ಮನಸ್ಸುಗಳು ಬೆಂಬಲ ನೀಡಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎನ್.ಲೋಕೇಶ್ ಮನವಿ ಮಾಡಿದರು.

ಪಟ್ಟಣದ ಗಣಪತಿ ಪೆಂಡಾಲಿನಲ್ಲಿ ಆಯೋಜಿಸಿದ್ದ ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಮುಂಬರುವ ದಿನಗಳಲ್ಲಿ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳು ಈಗಾಗಲೇ ತಮ್ಮ ಸ್ಪರ್ಧೆಯನ್ನು ಪ್ರಕಟಿಸುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಮತದಾರರ ಅಭಿಪ್ರಾಯದಂತೆ ತಾವೂ ಸ್ಪರ್ಧೆಯಲ್ಲಿ ಇದ್ದೇನೆ ಎಂದರು. ಈವರೆಗೆ ಪರಿಷತ್ತಿನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಜಿಲ್ಲಾ ಕೇಂದ್ರ ಮೊದಲುಗೊಂಡು ಎಲ್ಲ ತಾಲೂಕುಗಳಿಂದಲೂ ಬೆಂಬಲ ವ್ಯಕ್ತವಾಗಿದೆ. ಈ ಪವಿತ್ರವಾದ ಕ್ಷೇತ್ರದಲ್ಲಿ ಅಪಚಾರವಾಗದಂತೆ ಎಚ್ಚರಿಕೆ ವಹಿಸುತ್ತೇನೆ. ದೊರೆತ ಅವಕಾಶದಿಂದ ವಂಚಿತರಾಗದಂತೆ ಬೆಂಬಲಿಗರು ಪ್ರೋತ್ಸಾಹಿಸಿರುವುದು ಹೆಚ್ಚಿನ ಶಕ್ತಿ ದೊರೆತಂತಾಗಿದೆ ಎಂದರು.ಹಿರಿಯ ಜಾನಪದ ವಿದ್ವಾಂಸ ಡಾ.ಚಂದ್ರುಕಾಳೇನಹಳ್ಳಿ, ನಿವೃತ್ತ ಪ್ರಾಂಶುಪಾಲ ಎನ್. ತಮ್ಮಣ್ಣಗೌಡ, ಪರಿಸರಪ್ರೇಮಿ ಸಿ.ಎನ್. ಅಶೋಕ್, ಪುರಸಭೆ ಮಾಜಿ ಅಧ್ಯಕ್ಷ ಸಿ.ಎನ್. ಶಶಿಧರ್‌, ಲವಣ್ಣ, ಕುಂಬಾರಹಳ್ಳಿ ರಮೇಶ್, ಕಲಾವಿದ ಮಹದೇವ್, ರವಿ, ಸೋಮಶೇಖರ್, ಜಬೀವುಲ್ಲಾಬೇಗ್, ಮಹೇಶ್‌ ಕಬ್ಬಾಳು, ಸಿದ್ದಲಿಂಗ, ಗುರುಪ್ರಸಾದ್, ರಾಮಣ್ಣ, ನಿವೃತ್ತ ಉಪನ್ಯಾಸಕ ಎನ್. ನಾರಾಯಣ್, ಸಾಹಿತಿ ನಂಬಿಹಳ್ಳಿಚಂದ್ರು, ಸಾಹಿತಿ ಜಯಂತಿ ಚಂದ್ರಶೇಖರ್, ಯಶೋಧಾಜೈನ್, ರೂಪಸಂತೋಷ್, ಪ್ರೇಮಮ್ಮ, ದಲಿತಸಾಹಿತಿ ನಂಜುಂಡಯ್ಯ, ರಾಮಚಂದ್ರ, ಎಚ್.ಎನ್.ಲೋಕೇಶ್, ಗೋವಿಂದರಾಜ್‌ ದಿಂಡಗೂರು, ಮುಳ್ಕೆರೆ ಪ್ರಕಾಶ್, ಧರಣೇಶ್, ಸೇರಿದಂತೆ ಹಲವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಲಾ ನಿರ್ಮಾಣಕ್ಕಾಗಿ ಭೂ ಸ್ವಾಧೀನ; ರೈತರಿಗೆ ವೈಜ್ಞಾನಿಕ ಪರಿಹಾರ ನೀಡದೆ ತಾರತಮ್ಯ
ಐದಳ್ಳ ಕಾವಲು ಭೂಮಿ ಬಿಡಲ್ಲ ಎಂದು ರೈತರ ಪ್ರತಿಭಟನೆ