ಏಕಾಂಗಿ ಹೋರಾಟಗಾರ ತೀರ್ಥಪ್ಪ ಹೃದಯಾಘಾತದಿಂದ ಸಾವು

KannadaprabhaNewsNetwork |  
Published : Jun 20, 2025, 12:34 AM IST
19ಎಚ್ಎಸ್ಎನ್18 : ತೀರ್ಥಪ್ಪ . | Kannada Prabha

ಸಾರಾಂಶ

ಪ್ರತಿ ಊರುಗಳಲ್ಲಿ ಏಕಾಂಗಿ ಹೋರಾಟಗಾರ ತೀರ್ಥಪ್ಪನಂಥವರು ಇದ್ದರೆ ಆ ಊರು ಮತ್ತು ಪಂಚಾಯಿತಿಗಳು ಅಭಿವೃದ್ಧಿ ಆಗುತ್ತವೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಎಂ. ಮಂಜಪ್ಪ ತಿಳಿಸಿದರು. ಹೃದಯಾಘಾತದಿಂದ ನಿಧನರಾದ ತೀರ್ಥಪ್ಪನವರಿಗೆ ಹಳೇಬೀಡು ಪ್ರವಾಸ ಮಂದಿರದಲ್ಲಿ ನುಡಿನಮನಗಳನ್ನು ಸಲ್ಲಿಸುತ್ತಾ ಇಂಥ ವ್ಯಕ್ತಿಗಳು ಪ್ರತಿ ಊರು, ತಾಲೂಕು, ಜಿಲ್ಲೆಯಲ್ಲಿದ್ದರೆ ಅಭಿವೃದ್ಧಿ ಕಾಣುತ್ತವೆ. ತಾಲೂಕು ಕೇಂದ್ರ, ಜಿಲ್ಲಾ- ರಾಜ್ಯ ಕೇಂದ್ರಗಳಲ್ಲಿ ತಮ್ಮ ಮೌನ ಹೋರಾಟದಿಂದ ಹಲವಾರು ಸಾಧನೆ ಮಾಡಿರುವ ಏಕೈಕ ವ್ಯಕ್ತಿ ತೀರ್ಥಪ್ಪ. ಇವರಿಗೆ ನಮ್ಮ ನಮನ ಸದಾ ಇರಬೇಕೆಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಳೇಬೀಡು

ಪ್ರತಿ ಊರುಗಳಲ್ಲಿ ಏಕಾಂಗಿ ಹೋರಾಟಗಾರ ತೀರ್ಥಪ್ಪನಂಥವರು ಇದ್ದರೆ ಆ ಊರು ಮತ್ತು ಪಂಚಾಯಿತಿಗಳು ಅಭಿವೃದ್ಧಿ ಆಗುತ್ತವೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಎಂ. ಮಂಜಪ್ಪ ತಿಳಿಸಿದರು.

ಹೃದಯಾಘಾತದಿಂದ ನಿಧನರಾದ ತೀರ್ಥಪ್ಪನವರಿಗೆ ಹಳೇಬೀಡು ಪ್ರವಾಸ ಮಂದಿರದಲ್ಲಿ ನುಡಿನಮನಗಳನ್ನು ಸಲ್ಲಿಸುತ್ತಾ ಇಂಥ ವ್ಯಕ್ತಿಗಳು ಪ್ರತಿ ಊರು, ತಾಲೂಕು, ಜಿಲ್ಲೆಯಲ್ಲಿದ್ದರೆ ಅಭಿವೃದ್ಧಿ ಕಾಣುತ್ತವೆ. ತಾಲೂಕು ಕೇಂದ್ರ, ಜಿಲ್ಲಾ- ರಾಜ್ಯ ಕೇಂದ್ರಗಳಲ್ಲಿ ತಮ್ಮ ಮೌನ ಹೋರಾಟದಿಂದ ಹಲವಾರು ಸಾಧನೆ ಮಾಡಿರುವ ಏಕೈಕ ವ್ಯಕ್ತಿ ತೀರ್ಥಪ್ಪ. ಇವರಿಗೆ ನಮ್ಮ ನಮನ ಸದಾ ಇರಬೇಕೆಂದು ತಿಳಿಸಿದರು.

ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯ ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಡಿ.ಎಲ್. ಸೋಮಶೇಖರ್‌ ಮಾತನಾಡುತ್ತಾ, ತೀರ್ಥಪ್ಪನವರು ಹೋರಾಟದಲ್ಲಿ ಗಾಂಧಿ ವಾದಿಗಳೆಂದು ಹೇಳಿದರೂ ತಪ್ಪಾಗಲಾರದು. ಏಕೆಂದರೆ ಯಾವ ಹೋರಾಟದಲ್ಲಿ ಗಲಾಟೆಗಳಿಲ್ಲದೇ ಮೌನವಾಗಿ ಸಿದ್ಧಗಂಗಾ ಶ್ರೀಗಳು, ಕಾಯಕಯೋಗಿ ಬಸವಣ್ಣನವರ ಭಾವಚಿತ್ರಗಳೊಂದಿಗೆ ಹೋರಾಟ ಮಾಡುತ್ತಿದ್ದ ಏಕೈಕ ವ್ಯಕ್ತಿ. ಇಂಥವರು ನಮ್ಮೊಂದಿಗೆ ಇಲ್ಲದೆ ಇರುವುದು ಬೇಸರದ ವಿಚಾರವಾಗಿದೆ. ತೀರ್ಥಪ್ಪನವರ ಕುಟುಂಬಕ್ಕೆ ದೇವರು ಒಳ್ಳೆಯದು ಮಾಡಲಿ,ದುಃಖ ಭರಿಸುವ ಶಕ್ತಿ ತುಂಬಲಿ ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಠಿಣ ಪರಿಶ್ರಮದಿಂದ ಉತ್ತಮ ಫಲಿತಾಂಶ ಸಾಧ್ಯ
ಔರಾದ್ ತಾಲೂಕು ಅದ್ಧೂರಿ ಕಸಾಪ ಸಮ್ಮೇಳನ