ಲಾರಿ ಟ್ರ್ಯಾಕ್ಟರ್‌ ಮುಖಾಮುಖಿ: ಇಬ್ಬರು ಸ್ಥಳದಲ್ಲೇ ಸಾವು

KannadaprabhaNewsNetwork |  
Published : Nov 27, 2025, 01:15 AM IST
ಪೊಟೊ-26ಕೆ ಎನ್ಎಲ್‌ಎಮ್ 1-ನೆಲಮಂಗಲ ರಾಷ್ಟೀಯ ಹೆದ್ದಾರಿ 75ರ ಮಲ್ಲರಬಾಣವಾಡಿ ಗೇಟ್ ಬಳಿ ರಸ್ತೆದಾಟುತ್ತಿದ್ದ  ವೇಳೆ ನೆಲಮಂಗಲ ಕಡೆಯಿಂದ ಬಂದ ಕ್ಯಾಂಟರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಟ್ರಾಕ್ಟರ್‌ ಜಖಂ ಗೊಂಡಿರುವುದು | Kannada Prabha

ಸಾರಾಂಶ

ರಾ.ಹೆದ್ದಾರಿ 75ರ ಮಲ್ಲರಬಾಣವಾಡಿ ಗೇಟ್ ಬಳಿ ರಸ್ತೆ ದಾಟುತ್ತಿದ್ದ ವೇಳೆ ನೆಲಮಂಗಲ ಕಡೆಯಿಂದ ಬಂದ ಕ್ಯಾಂಟರ್ ಲಾರಿ ಏಕಾಏಕಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಟ್ರ್ಯಾಕ್ಟರ್‌ನಲ್ಲಿ ಇದ್ದ ಇಬ್ಬರು ಭೀಕರವಾಗಿ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ.

ನೆಲಮಂಗಲ: ರಸ್ತೆ ದಾಟುತ್ತಿದ್ದ ಟ್ರ್ಯಾಕ್ಟರ್‌ಗೆ ಕ್ಯಾಂಟರ್ ಲಾರಿ ಡಿಕ್ಕಿ ಹೊಡೆದ ಟ್ರ್ಯಾಕ್ಟರ್‌ ಚಾಲಕ ಹಾಗೂ ನಿರ್ವಾಹಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾ. ಹೆದ್ದಾರಿ 75ರ ಮಲ್ಲರಬಾಣವಾಡಿ ಗೇಟ್ ಬಳಿ ನಡೆದಿದೆ.

ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ನಿವಾಸಿಗಳಾದ ಪ್ರೇಮ್ ಕುಮಾರ್(37), ರಮೇಶ್(38) ಮೃತರು.

ಘಟನೆ ಹಿನ್ನೆಲೆ: ಬುಧವಾರದಂದು ಬೆಳಗ್ಗೆ 8:30ರ ವೇಳೆಯಲ್ಲಿ ಪ್ರೇಮ್‌ಕುಮಾರ್ ಹಾಗೂ ರಮೇಶ್ ಇಬ್ಬರು ಗುಡೇಮಾರನಹಳ್ಳಿ ಗ್ರಾಮದಿಂದ ಟ್ರ್ಯಾಕ್ಟರ್ ತಗೆದುಕೊಂಡು ಮಲ್ಲರಬಾಣವಾಡಿಗೆ ತೆರಳುತ್ತಿದ್ದರು. ರಾ.ಹೆದ್ದಾರಿ 75ರ ಮಲ್ಲರಬಾಣವಾಡಿ ಗೇಟ್ ಬಳಿ ರಸ್ತೆ ದಾಟುತ್ತಿದ್ದ ವೇಳೆ ನೆಲಮಂಗಲ ಕಡೆಯಿಂದ ಬಂದ ಕ್ಯಾಂಟರ್ ಲಾರಿ ಏಕಾಏಕಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಟ್ರ್ಯಾಕ್ಟರ್‌ನಲ್ಲಿ ಇದ್ದ ಇಬ್ಬರು ಭೀಕರವಾಗಿ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ. ಬಳಿಕ ಲಾರಿ ಫಟ್ಟಿಯಾಗಿದೆ. ಟ್ರ್ಯಾಕ್ಟರ್ ಹಾಗೂ ಲಾರಿ ನಜ್ಜುಗುಜ್ಜಾಗಿದೆ. ಕ್ಯಾಂಟರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಲಾರಿ ಹಾಗೂ ಟ್ರ್ಯಾಕ್ಟರ್‌ನನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತದಲ್ಲಿ ಲಾರಿ ಪಲ್ಟಿಯಾಗಿದ್ದು ಸುಮಾರು ಎರಡು ಕಿಲೋ ಮೀಟರ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕೆ ಆಗಮಿಸಿದ್ದ ಸಂಚಾರಿ ಠಾಣೆ ಪೊಲೀಸರು ಕ್ರೈನ್ ಮೂಲಕ ಲಾರಿಯನ್ನು ಸ್ಥಳಾಂತರ ಮಾಡಿ ವಾಹನ ಸವಾರರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಪೊಟೊ-26ಕೆ ಎನ್ಎಲ್‌ಎಮ್ 1-ನೆಲಮಂಗಲ ರಾಷ್ಟೀಯ ಹೆದ್ದಾರಿ 75ರ ಮಲ್ಲರಬಾಣವಾಡಿ ಗೇಟ್ ಬಳಿ ರಸ್ತೆದಾಟುತ್ತಿದ್ದ ವೇಳೆ ನೆಲಮಂಗಲ ಕಡೆಯಿಂದ ಬಂದ ಕ್ಯಾಂಟರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಟ್ರಾಕ್ಟರ್‌ ಜಖಂ ಗೊಂಡಿರುವುದು.

ಪೊಟೊ-26ಕೆ ಎನ್ಎಲ್‌ಎಮ್ 3-ನೆಲಮಂಗಲ ರಾಷ್ಟೀಯ ಹೆದ್ದಾರಿ 75ರ ಮಲ್ಲರಬಾಣವಾಡಿ ಗೇಟ್ ಬಳಿ ರಸ್ತೆದಾಟುತ್ತಿದ್ದ ಟ್ರಾಕ್ಟರ್‌ಗೆ ನೆಲಮಂಗಲ ಕಡೆಯಿಂದ ಬಂದ ಕ್ಯಾಂಟರ್ ಲಾರಿ ಡಿಕ್ಕಿ ಹೊಡೆದು ಪಲ್ಟಿಯಾಗಿರುವ ಲಾರಿ.

PREV

Recommended Stories

ಡಿಕೆಶಿ ಭೇಟಿಯಾದ್ರೂ ಸಿದ್ದುಗೇ ನಮ್ಮ ಬೆಂಬಲ: ಜಾರಕಿಹೊಳಿ
2028ಕ್ಕೆ ಕಾಂಗ್ರೆಸ್‌ ಅಧಿಕಾರಕ್ಕೆ ತರಲು ಸತೀಶ್‌ ಜತೆ ಚರ್ಚೆ : ಡಿಕೆ