ಸಂವಿಧಾನದಿಂದ ಸಮಾಜದಲ್ಲಿ ಶಾಂತಿ ನೆಮ್ಮದಿ

KannadaprabhaNewsNetwork |  
Published : Nov 27, 2025, 01:15 AM IST
26 ಟಿವಿಕೆ 1 - ತುರುವೇಕೆರೆ ತಾಲ್ಲೂಕು ಆಡಳಿತದಿಂದ ಪಟ್ಟಣದ ವೈಟಿ ರಸ್ತೆಯಲ್ಲಿನ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಬುಧವಾರ  ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಸಂವಿಧಾನ ದೇಶದಲ್ಲಿ ಬಹಳ ಗಟ್ಟಿಯಾಗಿ ಇರುವುದರಿಂದಲೇ ಸಮಾಜದಲ್ಲಿ ಶಾಂತಿ ನೆಮ್ಮದಿ ಇದೆ ಎಂದು ಶ್ರೀ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿ.ರಾಜು ಹೇಳಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಸಂವಿಧಾನ ದೇಶದಲ್ಲಿ ಬಹಳ ಗಟ್ಟಿಯಾಗಿ ಇರುವುದರಿಂದಲೇ ಸಮಾಜದಲ್ಲಿ ಶಾಂತಿ ನೆಮ್ಮದಿ ಇದೆ ಎಂದು ಶ್ರೀ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿ.ರಾಜು ಹೇಳಿದರು.

ಪಟ್ಟಣದ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಭಾರತ ಸಂವಿಧಾನ ದಿನಾಚರಣೆಯಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಅವರು ಮಾತನಾಡುತ್ತಿದ್ದರು. ಸಂವಿಧಾನವೆಂಬುದು ನಾಗರೀಕರ ನಾಡಿಮಿಡಿತವಾಗಿದೆ. ಸಂವಿಧಾನವಿರುವುದರಿಂದ ದೇಶದಲ್ಲಿ ಸರ್ವರಿಗೂ ಸಮಪಾಲು ದೊರೆಯುತ್ತಿದೆ. ಭಾರತೀಯರು ಒಟ್ಟಿಗೆ ಬಾಳಲು ಸಹಕಾರಿಯಾಗಿದೆ. ಭಾರತದಲ್ಲಿ ಸಂವಿಧಾನ ಉತ್ತಮವಾಗಿ ಕಾರ್ಯನಿರ್ವಹಿಸುತಿರುವುದರಿಂದ ಭಾರತ ಸ್ವರ್ಗದಂತಿದೆ. ಪ್ರಪಂಚದ ಎಲ್ಲಾ ಸಂವಿಧಾನಗಳಿಗಿಂತ ನಮ್ಮ ದೇಶದ ಸಂವಿಧಾನ ಶ್ರೇಷ್ಠ ಮಟ್ಟದಲ್ಲಿದೆ ಎಂದು ವಿ.ರಾಜು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್‌ ಎನ್.‌ ಎ.ಕುಂ ಇ ಅಹಮದ್‌ ಮಾತನಾಡಿ ಇಂದು ಸಂವಿಧಾನವನ್ನು ದೇಶಕ್ಕೆ ಸಮರ್ಪಣೆ ಮಾಡಿಕೊಂಡ ವಿಶೇಷ ದಿನವಾಗಿದೆ. ಇಡೀ ಜಗತ್ತಿನಲ್ಲೇ ಅತ್ಯುತ್ತಮವಾದ ಸಂವಿಧಾನ ನೀಡಿದ ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆ ಅವಿಸ್ಮರಣೀಯ. ಭವಿಷ್ಯ ಭಾರತದ ನಿರ್ಮಾತೃಗಳಾದ ವಿದ್ಯಾರ್ಥಿಗಳು ಸಂವಿಧಾನ ಓದಿ ಅದರಲ್ಲಿರುವ ಹಕ್ಕು, ಕರ್ತವ್ಯ ಮತದಾನ, ಚುನಾವಣಾ ವ್ಯವಸ್ಥೆ ಹಾಗು ಪ್ರಜಾಪ್ರಭುತ್ವದ ಮಹತ್ವ ಅರಿತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಕಾರ್ಯಕ್ರಮಕ್ಕೂ ಮುನ್ನ ಸಂವಿಧಾನದ ಪೂರ್ವ ಪೀಠಿಕೆ ಮತ್ತು ಅಂಬೇಡ್ಕರ್‌ ಸ್ಥಬ್ದ ಚಿತ್ರವನ್ನು ವಿಶೇಷ ವಾಹನದಲ್ಲಿ ಇರಿಸಿ, ಪಟ್ಟಣದ ವಿವಿಧ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು ಇಲ್ಲಿನ ಪ್ರವಾಸಿ ಮಂದಿರದಿಂದ ವೇದಿಕೆ ಕಾರ್ಯಕ್ರಮದವರೆಗೂ ಮೆರವಣಿಗೆ ನಡೆಸಿದರು. ಪ್ರತಿಭಾವಂತ ಮಕ್ಕಳಿಗೆ ಸಂವಿಧಾನ ಪುಸ್ತಕ ನೀಡುವ ಮೂಲಕ ಸನ್ಮಾನ ಮಾಡಲಾಯಿತು. ಸಮಾರಂಭದಲ್ಲಿ ಇ.ಒ ಪಿ.ಎಸ್.ಅನಂತರಾಜು, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಚಿದಾನಂದ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಶಿವಲಿಂಗಯ್ಯ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂಜಾ.ಬಿ, ಮೀನಿಗಾರಿಕೆ ಇಲಾಖಾ ಸಹಾಯಕ ನಿರ್ದೇಶಕ ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಷಣ್ಮುಖಪ್ಪ, ದಸಂಸ ಮುಖಂಡರುಗಳಾದ ವಿ.ಟಿ.ವೆಂಕಟರಾಮು, ದಂಡಿನಶಿವರ ಕುಮಾರ್, ಮಲ್ಲೂರು ತಿಮ್ಮೇಶ್, ಗುರುದತ್, ಬಿಗಿನೇಹಳ್ಳಿ ಪುಟರಾಜು, ತಂಡಗ ಸೋಮಣ್ಣ, ಇಂದಿರಾ ಪ್ರಭಾಕರ್, ಬಾಣಸಂದ್ರ ಕೃಷ್ಣ ಮಾದಿಗ, ತೊರೆಮಾವಿನಹಳ್ಳಿ ಡಾ.ಚಂದ್ರಯ್ಯ, ಬಿಆರ್.ಸಿ ಸುರೇಶ್ ಸೇರಿದಂತೆ ಪಟ್ಟಣ ಪಂಚಾಯಿತಿಯ ಪ್ರಸನ್ನ ಭದ್ರಣ್ಣವರ್‌ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಮುಖಂಡರುಗಳು ಭಾಗವಹಿಸಿದ್ದರು.

PREV

Recommended Stories

ಡಿಕೆಶಿ ಭೇಟಿಯಾದ್ರೂ ಸಿದ್ದುಗೇ ನಮ್ಮ ಬೆಂಬಲ: ಜಾರಕಿಹೊಳಿ
2028ಕ್ಕೆ ಕಾಂಗ್ರೆಸ್‌ ಅಧಿಕಾರಕ್ಕೆ ತರಲು ಸತೀಶ್‌ ಜತೆ ಚರ್ಚೆ : ಡಿಕೆ