ಕನ್ನಡದ ಮೇಲಿನ ಪ್ರೀತಿ, ಭಕ್ತಿ ಬದುಕಿನ ಸಾರ್ಥಕತೆ: ಡಾ. ಎಸ್.ಪಿ. ಬಳಿಗಾರ

KannadaprabhaNewsNetwork |  
Published : Nov 23, 2026, 02:00 AM IST
ಕುಮಾರೇಶ್ವರ ಕಲ್ಚರಲ್ ಸೊಸೈಟಿಯು ಹುಬ್ಬಳ್ಳಿಯ ಇನ್ಫೋಸಿಸ್‌ ಆವರಣದಲ್ಲಿ ರಾಜ್ಯೋತ್ಸವ ನಿಮಿತ್ತ ಆಯೋಜಿಸಿದ್ದ ಭಾವಸಂಗಮ ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಕೊಡುಗೆ ಕೊಟ್ಟ ಡಾ. ಸುಧಾ ಮೂರ್ತಿ ಹುಬ್ಬಳ್ಳಿಯಲ್ಲಿ ಇನ್ಫೋಸಿಸ್‌ ಕಂಪನಿ ನಿರ್ಮಾಣ ಮಾಡುವ ಮೂಲಕ ಉತ್ತರ ಕರ್ನಾಟಕಕ್ಕೆ ಬಹುದೊಡ್ಡ ಕೊಡುಗೆ ಕೊಟ್ಟಿದ್ದಾರೆ.

ಹುಬ್ಬಳ್ಳಿಯಲ್ಲಿ ಭಾವ ಸಂಗಮ ಉದ್ಘಾಟಿಸಿದ ಖ್ಯಾತ ನರರೋಗ ತಜ್ಞ

ಕನ್ನಡಪ್ರಭ ವಾರ್ತೆ ಧಾರವಾಡ

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಕೊಡುಗೆ ಕೊಟ್ಟ ಡಾ. ಸುಧಾ ಮೂರ್ತಿ ಹುಬ್ಬಳ್ಳಿಯಲ್ಲಿ ಇನ್ಫೋಸಿಸ್‌ ಕಂಪನಿ ನಿರ್ಮಾಣ ಮಾಡುವ ಮೂಲಕ ಉತ್ತರ ಕರ್ನಾಟಕಕ್ಕೆ ಬಹುದೊಡ್ಡ ಕೊಡುಗೆ ಕೊಟ್ಟಿದ್ದಾರೆ ಎಂದು ಖ್ಯಾತ ನರರೋಗ ತಜ್ಞ ಡಾ. ಎಸ್.ಪಿ. ಬಳಿಗಾರ ಹೇಳಿದರು.

ಇಲ್ಲಿಯ ಕುಮಾರೇಶ್ವರ ಕಲ್ಚರಲ್ ಸೊಸೈಟಿಯು ಹುಬ್ಬಳ್ಳಿಯ ಇನ್ಫೋಸಿಸ್‌ ಸಂಸ್ಥೆಯ ಆವರಣದಲ್ಲಿ ರಾಜ್ಯೋತ್ಸವ ನಿಮಿತ್ತ ಆಯೋಜಿಸಿದ್ದ ಭಾವಸಂಗಮ ಉದ್ಘಾಟಿಸಿದ ಅವರು, ಡಾ. ಸುಧಾಮೂರ್ತಿ ಅವರ ನರನಾಡಿಗಳಲ್ಲಿ ಕನ್ನಡ ಸಾಹಿತ್ಯದ ಕಣಗಳೇ ತುಂಬಿಕೊಂಡಿವೆ. ಕನ್ನಡ ಮಾತೃ ಭಾಷೆಯಲ್ಲದೇ ಹೃದಯ ಭಾಷೆ. ನಾವೆಲ್ಲ ಕನ್ನಡ ಮಾಧ್ಯಮದಲ್ಲೇ ಕಲಿತಿದ್ದು, ಕನ್ನಡವನ್ನು ಪರಿಶುದ್ಧವಾಗಿ ಕಲಿಸಿದ ಗುರುಗಳಿಗೆ ಸದಾ ಋಣಿಯಾಗಿದ್ದೇವೆ ಎಂದರು.

ಕನ್ನಡದ ಬಗ್ಗೆ ಪ್ರೀತಿ, ಭಕ್ತಿ, ತನ್ಮಯತೆ, ಆಳವಾದ ಜ್ಞಾನವಿದ್ದಲ್ಲಿ, ವೃತ್ತಿಯಲ್ಲಿ ಮಾತ್ರವಲ್ಲದೇ ಇಡೀ ಜೀವನದಲ್ಲಿ ಸಾರ್ಥಕತೆ ಹೊಂದಲು ಸಾಧ್ಯ. ನಾಡಿನ ದಾಸರು, ಶರಣರು ಅನೇಕ ವಚನಗಳನ್ನು ಕಟ್ಟಿಕೊಟ್ಟಿದ್ದಾರೆ. ಅವುಗಳನ್ನು ಅರ್ಥೈಸಿಕೊಂಡಲ್ಲಿ, ಅವು ನಮಗೆ ದಾರಿದೀಪವಾಗಲಿವೆ ಎಂದರು.

ಹಿರಿಯ ಹಿಂದುಸ್ತಾನಿ ಗಾಯಕ ಪಂ. ಬಾಲಚಂದ್ರ ನಾಕೋಡ, ಇನ್ಫೊಸಿಸ್ ಮುಖ್ಯಸ್ಥ ಅಲ್ಲಾಭಕ್ಷ ಅಸಾದುಲ್ಲಾ, ಹಿರಿಯ ತಾಂತ್ರಿಕ ವ್ಯವಸ್ಥಾಪಕ ಶಿವಾನಂದ ಕೂಡ್ಲಮಠ ಕಲಾಪೋಷಕ ವಿನಯ ನಾಯಕ್ ಇದ್ದರು.

ಸಂಜನಾ ಶಿವಪುರಮಠ ಕಾರ್ಯಕ್ರಮ ನಿರೂಪಿಸಿದರು. ಶ್ವೇತಾ ಜುಗ್ತಿಮಠ ಪ್ರಾರ್ಥಿಸಿದರು. ಸೊಸೈಟಿ ಕಾರ್ಯದರ್ಶಿ ಪ್ರಕಾಶ ಬಾಳಿಕಾಯಿ ವಂದಿಸಿದರು. ಯುವ ಗಾಯಕ ಸುಜಯೇಂದ್ರ ಕುಲಕರ್ಣಿ ಗಾಯನದಲ್ಲಿ ಪ್ರಸ್ತುತಪಡಿಸಿದ ರಾಗ ಮಧುವಂತಿ ಹಾಗೂ ದಾಸವಾಣಿ ಮತ್ತು ವಚನಗಳು ಕೇಳುಗರ ಹೃನ್ಮನ ತಣಿಸಿತು. ತಬಲಾದಲ್ಲಿ ಡಾ. ಶ್ರೀಹರಿ ದಿಗ್ಗಾವಿ ಹಾಗೂ ಹಾರ್ಮೊನಿಯಂದಲ್ಲಿ ವಿನೋದ ಪಾಟೀಲ ಮತ್ತು ತಾಳದಲ್ಲಿ ಸಮರ್ಥ ಪಾಟೀಲ ಸಾಥ್‌ ಸಂಗತ ನೀಡಿದರು. ಯುವ ಗಾಯಕಿ ಕೃಷ್ಣಪ್ರಿಯ ಆನಂದ ಬದಿ ಭಾವಗೀತೆಗಳನ್ನು ಪ್ರಸ್ತುತ ಪಡಿಸಿದಳು. ಗಣ್ಯರಾದ ಮೃಣ್ಮಯಿ, ರಾಘವೇಂದ್ರ ನಾಕೋಡ, ಜಗದೀಶ, ಮನೋಹರ ಆರ್., ಆನಂದ ಬದಿ, ಸಂದೀಪ ಕುಲಕರ್ಣಿ, ಸಂತೋಷ, ಆಲಿಸ್ಟರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತಾರಾಷ್ಟ್ರೀಯ ಸಮ್ಮೇಳನ ಯಶಸ್ವಿ
ಸರ್ಕಾರದ ಅನುದಾನದ ಜೊತೆಗೆ ದಾನಿಗಳ ನೆರವು ಪಡೆಯಿರಿ: ವಿಜಯ ಮಾನೆ