ಕನ್ನಡಪ್ರಭ ವಾರ್ತೆ ಗೋಕಾಕ ಡಿ.22 ರಿಂದ 15 ದಿನಗಳ ಕಾಲ ನಗರದ ವಾಲ್ಮೀಕಿ ತಾಲೂಕು ಕ್ರೀಡಾಂಗಣದಲ್ಲಿ ದಿ.ಲಕ್ಷ್ಮಣರಾವ ಜಾರಕಿಹೊಳಿ ಸ್ಮರಣಾರ್ಥ ಪ್ರಥಮ ಬಾರಿಗೆ ಅಂತರರಾಜ್ಯ ಮಟ್ಟದ ಲೆದರ್ ಬಾಲ್ ಎಲ್.ಆರ್.ಜೆ ಟಿ-20 ಟ್ರೋಫಿ ಪಂದ್ಯಾವಳಿ ಜರುಗಲಿವೆ ಎಂದು ಬಿಸಿಸಿ ಅಂಗವಿಕಲ ಕ್ರಿಕೆಟ್ ಮಂಡಳಿ ಸದಸ್ಯ ಶಿವಾನಂದ ಗುಂಜಾಳ ಹೇಳಿದರು.
ಕನ್ನಡಪ್ರಭ ವಾರ್ತೆ ಗೋಕಾಕ
ಡಿ.22 ರಿಂದ 15 ದಿನಗಳ ಕಾಲ ನಗರದ ವಾಲ್ಮೀಕಿ ತಾಲೂಕು ಕ್ರೀಡಾಂಗಣದಲ್ಲಿ ದಿ.ಲಕ್ಷ್ಮಣರಾವ ಜಾರಕಿಹೊಳಿ ಸ್ಮರಣಾರ್ಥ ಪ್ರಥಮ ಬಾರಿಗೆ ಅಂತರರಾಜ್ಯ ಮಟ್ಟದ ಲೆದರ್ ಬಾಲ್ ಎಲ್.ಆರ್.ಜೆ ಟಿ-20 ಟ್ರೋಫಿ ಪಂದ್ಯಾವಳಿ ಜರುಗಲಿವೆ ಎಂದು ಬಿಸಿಸಿ ಅಂಗವಿಕಲ ಕ್ರಿಕೆಟ್ ಮಂಡಳಿ ಸದಸ್ಯ ಶಿವಾನಂದ ಗುಂಜಾಳ ಹೇಳಿದರು.ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್.ಆರ್.ಜೆ ಟಿ-20 ಪಂದ್ಯಾವಳಿ ವಿಜೇತರಿಗೆ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಪ್ರಥಮ ಬಹುಮಾನ ರೂಪದಲ್ಲಿ ₹ 2.51 ಲಕ್ಷ ನಗದು ಹಾಗೂ ಟ್ರೋಫಿ, ಕಿಶೋರ ಶೆಟ್ಟಿ ದ್ವಿತೀಯ ಬಹುಮಾನ ₹ 1.51 ಲಕ್ಷ ನಗದು ಹಾಗೂ ಟ್ರೋಫಿ ನೀಡುವರು. ಟಿ-20 ಪಂದ್ಯಾವಳಿಯಲ್ಲಿ ರಾಜ್ಯ ಮತ್ತು ಅಂತರಾಜ್ಯದ ಖ್ಯಾತ ಆಟಗಾರರು ಭಾಗವಹಿಸಲ್ಲಿದ್ದಾರೆ. ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ಬೆಂಗಳೂರು ಅವರಿಂದ ಸರಣಿ ಅನುಮೋದಿಸಲ್ಪಟ್ಟಿದ್ದು, ಗೋಕಾಕ ಕ್ರಿಕೆಟ್ ಕ್ಲಬ್ ನವರು ಈ ಸರಣಿಯನ್ನು ಆಯೋಜಿಸಿದ್ದಾರೆ. ಸರಣಿಯಲ್ಲಿ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್‌ನಿಂದ ಮಾನ್ಯತೆ ಪಡೆದ ನಿರ್ಣಾಯಕರು, ನಿರ್ಣಾಯಕರಾಗಿ ಭಾಗವಹಿಸಲಿದ್ದಾರೆ. ಸರಣಿಯಲ್ಲಿ ಆಹ್ವಾನಿತ 15 ತಂಡಗಳು ಭಾಗವಹಿಸಲ್ಲಿದ್ದು, ವೈಯಕ್ತಿಕ ಬಹುಮಾನಗಳು ಒಳಗೊಂಡಿದೆ. ನಗರದ ಉದ್ಯಮಿ ಬಸರಾಜ ಕಲ್ಯಾಣಶೆಟ್ಟಿ ಅವರಿಂದ ಸರಣಿ ಪುರುಷ ಒಂದು ಟಿ.ವ್ಹಿ.ಎಸ್ ಜೂಪಿಟರ್ ವಾಹನ ಬಹುಮಾನ ಮತ್ತು ಅಂತಿಮ ಪಂದ್ಯದ ಪಂದ್ಯ ಪುರುಷಗೆ ನಗದು ₹ 21 ಸಾವಿರ, ಸರಣಿಯ ಉತ್ತಮ ಬ್ಯಾಟರ್, ಸರಣಿಯ ಉತ್ತಮ ಬಾಲರ್, ಸರಣಿಯ ಉತ್ತಮ ಕ್ಷೇತ್ರ ರಕ್ಷಕ ತಲಾ ₹ 10 ಸಾವಿರ ನಗದು ನೀಡಿ ಗೌರವಿಸಲಾಗುವುದು. ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳು ಪ್ರವೇಶ ಶುಲ್ಕ ₹ 10 ಸಾವಿರ ಪಾವತಿಸಿ ಬಸವರಾಜ ಕತ್ತಿ- 9019923104 ಮತ್ತು ಮಹೇಶ್ ಗಣಾಚಾರಿ- 9110877108 ಸಂಪರ್ಕಿಸುವಂತೆ ಶಿವಾನಂದ ಗುಂಜಾಳ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಉದ್ಯಮಿ ಕಿಶೋರ ಭಟ್, ಅನಿಲ ಭವಾನಿ, ಮಹೇಶ್ ಗಣಾಚಾರಿ, ಬಸವರಾಜ ಕತ್ತಿ, ದೀಪಕ ಕಲಾಲ್, ವಿಜಯ ಅರಬಾಂವಿ ಇತರರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.