ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ಪಟ್ಟಣದ ವಿದ್ಯೋದಯ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಎಂ.ಸಿ. ಶಿವಾನಂದ ಶರ್ಮ ಸ್ಮಾರಕ ಪ್ರವೇಶ ದ್ವಾರ, ದಾಸೋಹ ಭವನ, ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ ಬಯಲು ರಂಗಮಂದಿರ ಹಾಗೂ ನಿಸ್ವಾರ್ಥಿ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಮೂರು ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಅವರು, ತಮ್ಮ ಜೀವಿತಾವಧಿಯ ಸುಮಾರು 36 ವರ್ಷಗಳನ್ನು ತ್ಯಾಗ, ಸೇವೆಗಾಗಿಯೇ ನೀಡಿದ್ದಾರೆ. ಸಂಸ್ಥೆಯ ಸ್ಥಾಪಕ ಶಿವಾನಂದ ಶರ್ಮ ಅವರು ಕಂಡಿದ್ದ ಕನಸನ್ನು ನನಸು ಮಾಡುವತ್ತ ಮಹದೇವಸ್ವಾಮಿ ಅವರು ಸಾಗಿದ್ದಾರೆ, ಅವರ ಕನಸು ನನಸಾಗಲಿ, ಸಂಸ್ಥೆ ಮತ್ತಷ್ಟು ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಹಾರೈಸಿದರು.ಸಂಸ್ಥೆಯ ಸಂಸ್ಥಾಪಕ ಎಂ.ಸಿ. ಶಿವಾನಂದ ಶರ್ಮ ಅವರು 1940 ರಲ್ಲಿ ಬೆಂಗಳೂರಿನಲ್ಲಿ 1946 ರಲ್ಲಿ ಟಿ. ನರಸೀಪುರದಲ್ಲಿ ಗ್ರಾಮ ವಿದ್ಯೋದಯ ಸಂಘ ಸ್ಥಾಪನೆ ಮಾಡಿದ್ದು, ಅವರ ಉದಾರ ಚಿಂತನೆಯ ಫಲವಾಗಿದೆ. ವಿದ್ಯಾರ್ಥಿಗಳ ಹೆಚ್ಚಾದಾಗ 1951ರಲ್ಲಿ ವಿಶಾಲವಾದ ಕಟ್ಟಡ ಸ್ಥಾಪಿಸಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲಕಲ್ಪಿಸಿ ಕೊಟ್ಟಿದ್ದ ಶರ್ಮರ ಕನಸನ್ನು ಸಾಕಾರಗೊಳಿಸುವಲ್ಲಿ ಟಿ.ಪಿ.ಬೋರಯ್ಯ ಸಹ ಒಬ್ಬರಾಗಿದ್ದಾರೆ. ನಂತರದಲ್ಲಿ ಸಂಸ್ಥೆಯ ಜವಾಬ್ದಾರಿ ವಹಿಸಿಕೊಂಡ ಕೆ.ಪಿ. ಮಹದೇವಸ್ವಾಮಿ ಅವರು 36 ವರ್ಷಗಳ ಕಾಲ ಅವಿರತವಾದ ಶ್ರಮದಿಂದ ಸಂಸ್ಥೆಯನ್ನು ಶ್ರೇಯಸ್ಸಿನಪಥದತ್ತ ಮುನ್ನಡೆಸಿಕೊಂಡು ಬಂದಿದ್ದಾರೆ. ಸಂಸ್ಥೆಯ ಅಭಿವೃದ್ಧಿಗಾಗಿ ಕೆಲವೊಮ್ಮೆ ಅವರು ಕಠಿಣವಾದ ನಿರ್ಧಾರ ತೆಗೆದುಕೊಂಡಿದ್ದಾರೆ. ಸಂಸ್ಥೆಗೆ ಅನುಕೂಲವಾಗುವ ಕೆಲಸ ಮಾಡುವಲ್ಲಿ ಅವರು ಅದ್ಯಾವುದೇ ತ್ಯಾಗಕ್ಕೂ ಸಿದ್ದರಾಗಿರುತ್ತಾರೆ. ವಿದ್ಯೋದಯ ಶಿಕ್ಷಣ ಸಂಸ್ಥೆ ಇಂದು ಆರ್ಥಿಕವಾಗಿ ಮುನ್ನಡೆದಿದೆ ಎಂದರೆ ಅದಕ್ಕೆ ಮಹದೇವಸ್ವಾಮಿ ಅವರ ದಿಟ್ಟವಾದ ನಿರ್ಧಾರ ಕಾರಣವಾಗಿದೆ. ಸಂಸ್ಥೆಗೆ ಬಂದ ಯಾವುದೇ ಸಂಪತ್ತನ್ನು ಮಹದೇವಸ್ವಾಮಿಯವರು ತಮ್ಮ ಜೇಬಿಗೆ ಇಳಿಸಿಕೊಂಡಿಲ್ಲ, ಆ ಕಾರಣಕ್ಕಾಗಿಯೇ ಇಂದು ಅವರಿಗೆ ಅಭಿನಂದನೆ ಸಲ್ಲಿಸಲು ಅಭಿಮಾನಿಗಳ ಮಹಾಪೂರವೇ ಹರಿದು ಬಂದಿದೆ ಎಂದರು.
ಮುಂದುವರೆದು ಮಾತನಾಡಿದ ಶ್ರೀಗಳು ಶಿವಾನಂದ ಶರ್ಮರು ಸಂಸ್ಥೆ ಕಟ್ಟಿದಾಗ ಸಂಸ್ಥೆಗೆ ತಮ್ಮ ಮನೆತನದ ಅಥವಾ ತಮ್ಮ ಊರಿನ ಹೆಸರಿಡಬಹುದಿತ್ತು. ಆದರೆ ಅವರು ಹಾಗೆ ಮಾಡದೇ ಬೆಂಗಳೂರು ಸಂಸ್ಥೆಗೆ ರಾಷ್ಟ್ರೀಯ ವಿದ್ಯಾಲಯ ಹಾಗೂ ನರಸೀಪುರ ಸಂಸ್ಥೆಗೆ ಗ್ರಾಮ ವಿದ್ಯೋದಯ ಸಂಘ ಎಂಬ ಹೆಸರಿಟ್ಟರು. ಶರ್ಮರಿಗೆ ರಾಷ್ಟ್ರ ಮುಖ್ಯವಾಗಿತ್ತೇ ಹೊರತು, ಅವರ ವೈಯಕ್ತಿಕ ಹೆಸರು ಮುಖ್ಯವಾಗಿರಲಿಲ್ಲ, ಶರ್ಮರು ತಮ್ಮನ್ನು ತಾವು ಸಮರ್ಪಣೆ ಮಾಡಿಕೊಂಡು ಇಂತಹ ಸಂಸ್ಥೆಯನ್ನು ಕೊಟ್ಟಿದ್ದರಿಂದ ಇಂದಿಗೂ ಕೂಡ ಅವರು ಸ್ಮರಣೀಯರಾಗಿದ್ದಾರೆ ಎಂದರು.
ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಬೆಂಗಳೂರಿನಲ್ಲಿ ರಾಷ್ಟ್ರೀಯ ಶಿಕ್ಷಣ ಸಂಸ್ಥೆ (ಆರ್.ವಿ) ಸ್ಥಾಪಿಸಿದ ಶರ್ಮ ಅವರು, ಹುಟ್ಟೂರಿನ ಋಣ ತೀರಿಸಲು ನರಸೀಪುರದಲ್ಲಿ ಗ್ರಾಮ ವಿದ್ಯೋದಯ ಸಂಘ ಸ್ಥಾಪಿಸಿ, ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದರು. ಅಂದೇ ವಿದ್ಯಾರ್ಥಿಗಳಿಗೆ ಬಿಸಿಯೂಟ ಯೋಜನೆ ಜಾರಿಗೆ ತಂದರು. ಅವರು ದೂರ ದೃಷ್ಟಿ ಇಟ್ಟುಕೊಂಡು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದರು. ಕೆ.ಪಿ. ಮಹದೇವಸ್ವಾಮಿ ಅವರು ಶಿವಾನಂದ ಶರ್ಮ ಅವರ ಹುಟ್ಟೂರಾದ ಮಾಡ್ರಹಳ್ಳಿ ಗ್ರಾಮದಲ್ಲಿ ಶಿಕ್ಷಣ ಸಂಸ್ಥೆ ತೆರೆದು ಅಲ್ಲಿನ ಮಕ್ಕಳಿಗೆ ಉಚಿತವಾದ ಗುಣ ಮಟ್ಟದ ಶಿಕ್ಷಣ ನೀಡುವ ಯೋಜನೆಗೆ ಜೊತೆಗೆ ಹನೂರಿನಲ್ಲಿ ಸಿಬಿಎಸ್ ಶಾಲೆ ತೆರೆಯಲು ಚಿಂತನೆ ನಡೆಸಿದ್ದು, ಅವರ ಯೋಜನೆ ತ್ವರಿತವಾಗಿ ಕಾರ್ಯ ರೂಪಕ್ಕೆ ಬರುವಂತಾಗಲಿ, ಗ್ರಾಮೀಣ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಸಿಗುವಂತಾಗಲಿ ಎಂದರು.
ಸಮಾಜಕ್ಕೆ ಉತ್ತಮವಾದ ಕೊಡುಗೆ
ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ಹಲವಾರು ಮಠಗಳ ಮಠಾಧೀಶರು ಕೆ.ಪಿ. ಮಹದೇವಸ್ವಾಮಿ ಹಾಗೂ ಅವರ ಪತ್ನಿ ಸುಜಾತಾ ಅವರನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಎಲ್ಲ ಸಮಾಜದ ಜಗದ್ಗುರುಗಳು, ಹರಗುರು ಚರ ಮೂರ್ತಿಗಳು ಭಾಗವಹಿಸಿ ನನಗೆ ಮತ್ತು ನನ್ನಕುಟುಂಬಕ್ಕೆ ಆಶೀರ್ವದಿಸಿದ್ದಾರೆ. ಅವರಿಗೆ ಪ್ರಣಾಮ ಸಲ್ಲಿಸುತ್ತೇನೆ. ಶಿವಾನಂದ ಶರ್ಮರು ಸಂಸ್ಥೆ ಸ್ಥಾಪನೆ ಮಾಡದಿದ್ದರೆ ಸಂಸ್ಥೆಯ ಕಾರ್ಯದರ್ಶಿಯಾಗಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಇಂದಿನ ಶ್ರೇಯಸ್ಸು, ಕೀರ್ತಿ ಶರ್ಮರಿಗೆ ಸಲ್ಲಬೇಕಿದೆ. 36 ವರ್ಷಗಳಲ್ಲಿ ಶರ್ಮರ ಆದರ್ಶಕ್ಕೆ ಚ್ಯುತಿ ಬಾರದಂತೆ ಸಂಸ್ಥೆಯ ಆರ್ಥಿಕ ಇತಿ ಮಿತಿಗಳಿಗೆ ಒಳಪಟ್ಟು ಅಭಿವೃದ್ಧಿ ಕಾರ್ಯ ಮಾಡಿಕೊಂಡು ಬಂದಿದ್ದೇನೆ.ನನ್ನವಿದ್ಯಾಭ್ಯಾಸದ ವೇಳೆ ಶರ್ಮರು ನನ್ನನ್ನು ನಿಜಲಿಂಗಪ್ಪ ಎಂದು ಕರೆದಿದ್ದಿದೆ. ಅಂದಿನಕಾಲದಲ್ಲಿಯೇ ಶರ್ಮರು ಮುಂದೆ ನೀನು, ಈ ಸಂಸ್ಥೆಯನ್ನು ಮುನ್ನಡೆಸುತ್ತೀಯ ಎಂದು ಭವಿಷ್ಯ ನುಡಿದಿದ್ದರು. ಅವರ ಹಾರೈಕೆಯ ಫಲವಾಗಿ 1989 ರಲ್ಲಿ ಸಂಸ್ಥೆಯ ಕಾರ್ಯದರ್ಶಿಯಾಗಿ ಸಂಸ್ಥೆಯ ಬೆಳವಣಿಗೆಗೆ ಅಹರ್ನಿಶಿ ದುಡಿಯುತ್ತಾ ಬಂದಿದ್ದೇನೆ. ವರ್ಷವೊಂದಕ್ಕೆ 280 ಕ್ವಿಂಟಲ್ ಅಕ್ಕಿಯನ್ನು ಮಠ ಮಾನ್ಯಗಳು, ವಿದ್ಯಾರ್ಥಿನಿಲಯಗಳ ದಾಸೋಹಕ್ಕೆ ನೀಡುತ್ತಾ ಬರಲಾಗುತ್ತಿದೆ. ಸಿದ್ದಲಿಂಗ ಸ್ವಾಮೀಜಿ ಆಶೀರ್ವಾದ ನನ್ನ ಮೇಲಿದ್ದು, ನನ್ನೆಲ್ಲಾ ಶ್ರೇಯಸ್ಸು ಸಿದ್ದಗಂಗ ಮಠ ಹಾಗೂ ಶಿವಾನಂದ ಶರ್ಮರಿಗೆ ಸೇರುತ್ತದೆ.
ಅಭಿನಂದನಾ ಸಮಿತಿ ಕಾರ್ಯಾಧ್ಯಕ್ಷ ಹಾಗೂ ಸಂಸ್ಥೆ ಆಡಳಿತಾಧಿಕಾರಿ ಕೆ.ಪಿ. ಉದಯಕುಮಾರ್, ಕೆ.ಪಿ. ಮಹದೇವಸ್ವಾಮಿ ಅವರ ಪುತ್ರಿ ಪ್ರಿಯಾಂಕಾ, ಅಭಿನಂದನಾ ಗ್ರಂಥದ ಸಂಪಾದಕ ಪ್ರೊ.ಡಿ.ಎಸ್. ಸದಾಶಿವಮೂರ್ತಿ, ಕೃಷಿಕ ಸಮಾಜದ ಅಧ್ಯಕ್ಷ ಶಿವಮಲ್ಲಪ್ಪ, ವಿದ್ಯೋದಯ ಸಂಸ್ಥೆ ಪ್ರಾಂಶುಪಾಲ ಎಚ್.ಎಸ್. ಮಾನಸ, ಎನ್. ಕಲ್ಪನಾ, ಉಪನ್ಯಾಸಕರಾದ ಟಿ.ಎಸ್. ಬಸವಣ್ಣಸ್ವಾಮಿ, ರವಿಕುಮಾರ್, ಮೂಗೂರು ಕುಮಾರಸ್ವಾಮಿ, ಆಕಾಶವಾಣಿ ಕಲಾವಿದೆ ಸವಿತಾ ಶಿವಕುಮಾರ್ ಇದ್ದರು.-- ಬಾಕ್ಸ್-- -- ಇಂದು ನನ್ನ ಜೀವಮಾನದ ಸೌಭಾಗ್ಯ-- ಗ್ರಾಮ ವಿದ್ಯೋದಯ ಸಂಘದ ಗೌರವ ಕಾರ್ಯದರ್ಶಿ ಕೆ.ಪಿ. ಮಹದೇವಸ್ವಾಮಿ ಮಾತನಾಡಿ, ನಾನು ಯಾವತ್ತೂ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿಲ್ಲ. ಈಗಲೂ ಬೇಡ ಎಂದು ಸುತ್ತೂರು ಶ್ರೀಗಳ ಬಳಿ ಹೇಳಿದಾಗ ಅವರ ಆದೇಶದ ಮೇರೆಗೆ ಒಪ್ಪಿಕೊಂಡೆ, ಆ ಕಾರಣದಿಂದ ಹಿತೈಷಿಗಳು, ಆಡಳಿತ ಮಂಡಳಿಯವರು ಸೇರಿ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಇದು ನನ್ನಜೀವ ಮಾನದ ಸೌಭಾಗ್ಯ ಎಂದು ಭಾವಿಸುತ್ತೇನೆ ಎಂದರು.