ಸಮಾಜ ಕೆಟ್ಟಿದೆ ಎನ್ನುವ ಬದಲು ಆತ್ಮಾವಲೋಕನ ಮಾಡಿಕೊಳ್ಳಿ

KannadaprabhaNewsNetwork |  
Published : Nov 05, 2025, 01:03 AM IST
ಪೋಟೋ, 4ಎಚ್‌ಎಸ್‌ಡಿ4: ನಾಟಕೋತ್ಸವ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೇವೇಂದ್ರಕುಮಾರ್‌ ಪತ್ತಾರ್‌ ಅವರನ್ನ ಅಭಿನಂದಿಸಲಾಯಿತು.ಪೋಟೋ, 4ಎಚ್‌ಎಸ್‌ಡಿ5: ನಾಟಕೋತ್ಸವ ಕಾರ್ಯಕ್ರಮದಲ್ಲಿ ಅಣ್ಣಿಗೆರೆ ಯಶಸ್ವಿನಿ ಯೋಗ ಸಂಸ್ಥೆಯ ಮಕ್ಕಳು ಯೋಗ ನೃತ್ಯ ಪ್ರದರ್ಶನ ಮಾಡಿದರು. | Kannada Prabha

ಸಾರಾಂಶ

ನಾಟಕೋತ್ಸವ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೇವೇಂದ್ರಕುಮಾರ್‌ ಪತ್ತಾರ್‌ ಅವರನ್ನ ಅಭಿನಂದಿಸಲಾಯಿತು.

ಕನ್ನಡಪ್ರಭವಾರ್ತೆ ಹೊಸದುರ್ಗ

ವ್ಯಕ್ತಿ ಬದಲಾದರೆ ಸಮಾಜ ಬದಲಾಗುತ್ತದೆ. ಸಮಾಜ ಕೆಟ್ಟಿದೆ ಎನ್ನುವ ಬದಲು ನಾವು ಸರಿಯಾಗಿದ್ದೇವೆಯೇ ಎಂಬುದನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಸಾಣೇಹಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವದ 3ನೇ ದಿನದ ಕಾರ್ಯಕ್ರಮದ ಸಾನ್ನಿದ್ಯ ವಹಿಸಿ ಅವರು ಮಾತನಾಡಿದರು.

ಪೋಷಕರು ಮಕ್ಕಳನ್ನು ಉದಾಸೀನ ಮಾಡದೆ ಅವರಿಗೆ ಪ್ರೋತ್ಸಾಯಿಸಬೇಕು, ಯಾವ ಮಕ್ಕಳು ದಡ್ಡರಲ್ಲ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರಿಗೆ ಬೇಕಾದ ಶಿಕ್ಷಣ ನೀಡಬೇಕು. ಸರ್ಕಾರದ ಧೋರಣೆಗಳಿಂದ ಯುವಕರು ದುಷ್ಚಟಗಳ ದಾಸರಾಗುತ್ತಿದ್ದಾರೆ. ಚುನಾವಣ ಪ್ರಣಾಳಿಕೆಯಲ್ಲಿ ಮದ್ಯ ನಿಷೇಧ, ಗುಟ್ಕಾ ನಿಷೇದದ ಮಾತುಗಳನ್ನಾಡಿದ್ದರೆ ಯುವಕರಿಗೆ ಉದ್ಯೋಗ ನೀಡಿದ್ದರೆ ಸಮಾಜ ಹದಗೆಡುತ್ತಿಲ್ಲ. ಕೆಟ್ಟದ್ದನ್ನು ದೂರ ತಳ್ಳುವ ಕೆಲಸವನ್ನು ಸರ್ಕಾರ, ಮಠಗಳು ಮಾಡಬೇಕು ಎಂದರು.

ಹೊಸದುರ್ಗ ಕುಂಚಿಟಗ ಮಠದ ಶಾಂತವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ ಇಂದು ಜನರಲ್ಲಿ, ಸಮಾಜದಲ್ಲಿ, ಮನೆಗಳಲ್ಲಿ ಮೌಲ್ಯಗಳ ತೋರಿಕೆಯ ವಾತಾವರಣ ಇದೆ. ಇಂದು ಸಮಾಜ ಎಷ್ಠೇ ಮುಂದುವರಿದಿದ್ದರೂ ಅಷ್ಟೇ ನೈತಿಕವಾಗಿ ಅದಃಪತನವಾಗಿದೆ. ಮನೆಯಲ್ಲಿನ ಪೋಷಕರ ವೈಮನಸ್ಸು ಮಕ್ಕಳ ಮನಸ್ಸಿನ ದುಷ್ಫರಿಣಾಮ ಬೀರುತ್ತಿವೆ. ಮಕ್ಕಳಿಗಿಂತ ಮೊದಲು ಪೋಷಕರಿಗೆ ಮೌಲ್ಯಗಳು ಬೇಕಾಗಿದೆ . ಗುರುವನ್ನು ಗುರುವಾಗಿ ನೋಡಬೇಕು, ಗುರುವಿಗೆ ಗೌರವ ನೀಡಬೇಕು ಪೋಷಕರು ಸರಿಯಾದರೆ ಸಮಾಜ ಸರಿಯಾಗುತ್ತದೆ ಎಂದರು.

ಮಾಜಿ ಸಚಿವ ಬಿ.ಸಿ.ಪಾಟೀಲ್‌ ಮಾತನಾಡಿ, ನಮಗೆ ಬೇಕಾಗಿರುವುದು ಮೌಲ್ಯಾಧಾರಿತ ಶಿಕ್ಷಣಕ್ಕಿಂತ ಮೌಲ್ಯಾಧಾರಿತ ಸಂಸ್ಕಾರ. ಕಲೆ ಮನುಷ್ಯನನ್ನು ಗಟ್ಟಿಯಾಗಿ ಕೂರಿಸುತ್ತದೆ. ರಾಜ್ಯದ ಅನೇಕ ಹಳ್ಳಿಗಳಲ್ಲಿ ದೇವಾಲಯ ಕಟ್ಟಲು ಮದ್ಯ ಮಾರಾಟಕ್ಕೆ ಹರಾಜು ಮಾಡುವ ಪ್ರವೃತ್ತಿಯಿದೆ. ಮದ್ಯದ ಹಣದಿಂದ ದೇವಾಲಯ ಕಟ್ಟಬೇಕಾ ಎಂದು ಪ್ರಶ್ನಿಸಿ. ಮದ್ಯದ ಹಣದಲ್ಲಿ ದೇವಾಲಯ ಕಟ್ಟಬೇಡಿ ಎಂದು ದೇವರು ಹೇಳಲ್ಲ ದೇವರ ರೂಪದಲ್ಲಿ ಪಂಡಿತಾರಾಧ್ಯ ಸ್ವಾಮೀಜಿ ಹೇಳುವ ಕೆಲಸ ಮಾಡುತ್ತಿದ್ದಾರೆ ಎಂದರು.

ಹುಬ್ಬಳ್ಳಿಯ ಡಾ.ಗುರುರಾಜ ಪಾಟೀಲ ಮೌಲ್ಯಾಧಾರಿತ ಶಿಕ್ಷಣ ಕುರಿತು ಉಪನ್ಯಾಸ ನೀಡಿ ಮಾತನಾಡಿ, ಇಂದಿನ ಪೋಷಕರು ಮಕ್ಕಳಿಗೆ ಶಿಕ್ಷಣ ಕೊಡಿಸುವ ಉತ್ಸುಕದಲ್ಲಿದ್ದಾರೆ ಆದರೆ ಶಾಲೆಗಳಲ್ಲಿ ಶಿಕ್ಷಣ ಸಿಗುತ್ತದೆಯೇ ಹೊರತು ಮೌಲ್ಯಗಳಲ್ಲ ಹಾಗಾಗಿ ಮೌಲ್ಯಗಳನ್ನು ಪೋಷಕರೇ ಕಲಿಸಬೇಕು. ಸಮಾಜ ಕೆಟ್ಟಿರುವುದು ಕೆಟ್ಟವರಿಂದಲ್ಲ ಒಳ್ಳೆಯವರು ಸುಮ್ಮನೆ ಕುಳಿತಿರುವುದರಿಂದ ಎಂದರು.

ಪ್ರಾಥಮಿಕ ಹಂತದಲ್ಲಿ ಮಕ್ಕಳು ಪೋಷಕರ ಸಾಂಗತ್ಯವನ್ನು ಬಯಸುತ್ತಾರೆ ಆ ಸಮಯದಲ್ಲಿ ಮಕ್ಕಳೊಂದಿಗೆ ಸಮಯ ಕಳೆಯುವುದರ ಜೊತೆಗೆ ಸರಿಯಾದ ಮಾರ್ಗದರ್ಶನ ಮಾಡಬೇಕು. ಮಕ್ಕಳ ಬಗ್ಗೆ ಸಂಶಯ ಪಡುವುದು ಬೇಡ ಇಂದು ನಾವು ಶಿಕ್ಷಣಕ್ಕೆ ಎಷ್ಠು ಮಹತ್ವ ಕೊಡುತ್ತೇವೆ ಅಷ್ಠೆ ಮಹತ್ವವನ್ನು ಮೌಲ್ಯಕ್ಕೆ, ಬೆಳವಣಿಗೆಗೆ ಕೊಡಬೇಕು. ಔಪಚಾರಿಕ ಶಿಕ್ಷಣ ಬದುಕನ್ನು ಕಲಿಸುತ್ತದೆ ಅನೌಪಚಾರಿಕ ಶಿಕ್ಷಣ ಅದೃಷ್ಠವನ್ನು ಕೊಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲಾಧಿಕಾರಿ ಜಿ ಎಂ ಗಂಗಾದರಸ್ವಾಮಿ , ನಿವೃತ್ತ ಪೋಲೀಸ್‌ ಆಯುಕ್ತ ಎಸ್‌ ಎನ್‌ ಸಿದ್ದರಾಮಪ್ಪ, ಉದ್ಯಮಿ ಅಣಬೇರು ರಾಜಣ್ಣ , ದಾವಣಗೆರೆ ತಹಶೀಲ್ದಾರ್‌ ಅಶ್ವತ್‌ , ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೇವೇಂದ್ರಕುಮಾರ್‌ ಪತ್ತಾರ್‌ ಭಾಗವಹಿಸಿದ್ದರು. ಪ್ರಾರಂಭದಲ್ಲಿ ಅಣ್ಣಿಗೆರೆ ಯಶಸ್ವಿನಿ ಯೋಗ ಸಂಸ್ಥೆಯ ಮಕ್ಕಳು ಯೋಗ ನೃತ್ಯ ಪ್ರದರ್ಶನ ಮಾಡಿದರು. ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೇವೇಂದ್ರಕುಮಾರ್‌ ಪತ್ತಾರ್‌ ಅವರನ್ನ ಅಭಿನಂದಿಸಲಾಯಿತು.

ಸಭಾ ಕಾರ್ಯಕ್ರಮದ ನಂತರ ಕೃಷ್ಣಮೂರ್ತಿ ಮೂಡಬಾಗಿಲು ರಚನೆ-ವಿನ್ಯಾಸ-ನಿರ್ದೇಶನದ ಕಳ್ಳರ ಸಂತೆ ನಾಟಕವನ್ನು ಶಿವಸಂಚಾರದ ಕಲಾವಿದರು ಅಭಿನಯಿಸಿದರು. ಅಣ್ಣಿಗೆರೆ ಯಶಸ್ವಿನಿ ಯೋಗ ಸಂಸ್ಥೆಯ ಮಕ್ಕಳು ಯೋಗ ನೃತ್ಯ ಪ್ರದರ್ಶನ ಮಾಡಿದರು.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ