ಕನ್ನಡಪ್ರಭ ವಾರ್ತೆ ಪಾಂಡವಪುರ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಅಧ್ಯಕ್ಷರಾಗಿದ್ದ ಪಿ.ಮಂಜುನಾಥ್ ಅವರು ಸೇವೆಯಿಂದ ವಯೋ ನಿವೃತ್ತಿ ಹೊಂದಿದ್ದ ಹಿನ್ನೆಲೆಯಲ್ಲಿ ಮಾ.24ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದರಿಂದ ತೆರವಾಜ ಸ್ಥಾನಕ್ಕೆ ರಾಜ್ಯ ಸಮಿತಿ ಅಧ್ಯಕ್ಷ ಕೆ.ನಾಗೇಶ್ ಅವರು ಎಂ.ಡಿ.ಕುಮಾರ್ ಅವರನ್ನು ತಾಲೂಕು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಕಳೆದ ಮೇ 21 ರಂದು ಆದೇಶ ಹೊರಡಿಸಿದ್ದಾರೆ ಎಂದರು.
ಸಂಘದ ನಿಯಮದ ಪ್ರಕಾರ ಎಂ.ಡಿ.ಕುಮಾರ್ ಅವರೇ ಅಧಿಕೃತ ಅಧ್ಯಕ್ಷರು. ಆದರೆ, ಕೆಲವರು ತಾವೇ ಅಧ್ಯಕ್ಷರೆಂದು ಸ್ವಯಂ ಘೋಷಿಸಿಕೊಂಡು ಶಿಕ್ಷಕರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದು ಸಂಘದ ಬೈಲಕ್ಕೆ ವಿರುದ್ಧವಾಗಿದೆ ಎಂದರು.ಸಂಘದ ಅಧ್ಯಕ್ಷ ಎಂ.ಡಿ.ಕುಮಾರ್ ಮಾತನಾಡಿ, ರಾಜ್ಯ ಸಮಿತಿ ನನ್ನನ್ನು ತಾಲೂಕು ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ಆದರೆ, ಸಂಘದ ಉಪಾಧ್ಯಕ್ಷರಾಗಿದ್ದ ಸುರೇಂದ್ರ ಅವರು ಕೆಲ ನಿರ್ದೇಶಕರನ್ನು ಕಟ್ಟಿಕೊಂಡು ಅಧ್ಯಕ್ಷರೆಂದು ಸ್ವಯಂ ಘೋಷಿಸಿಕೊಂಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಕೆ.ಸುಮಂಗಳ ಸಹಕಾರ್ಯದರ್ಶಿ ಕೆ.ಮಂಜುಳ, ಶಿಕ್ಷಕರಾದ ದೀಪು, ನಂದೀಶ, ಧರ್ಮೇಶ್, ರಾಘವೇಂದ್ರ, ಯೋಗೇಶ್, ಕೆ..ಎಸ್.ಸುರೇಂದ್ರ ಶಿವರಾಮು, ಎ.ವಿ.ಜಯರಾಮು, ಚನ್ನಕೇಶವ ಎಂ.ಎಸ್.ಶಿವರಾಮು, ಭಾಸ್ಕರ, ಕೆ.ಎಂ.ಮಹೇಶ್, ಪ್ರಬೀಶ್, ಲೋಕೇಶ್ ಇತರರು ಇದ್ದರು.