ಕನ್ನಡಪ್ರಭ ವಾರ್ತೆ ಮೈಸೂರು
ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ವೇದಿಕೆಯು ಜೆ.ಪಿ. ನಗರದ ಜೆಎಸ್ಎಸ್ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಹಳಕಟ್ಟಿ ಅವರ ಜಯಂತಿ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವ ಸಾಹಿತ್ಯ ಮತ್ತು ಧರ್ಮದಲ್ಲಿ ಕಾಣದ ವೈಜ್ಞಾನಿಕ ಹಾಗೂ ಧಾರ್ಮಿಕ ಸಾಮಾಜಿಕ ಮೌಲ್ಯಗಳು ವಚನ ಸಾಹಿತ್ಯದಲ್ಲಿವೆ. ನಾವು ಅವುಗಳನ್ನು ಮುಂದಿನ ಪೀಳಿಗೆ ಉಳಿಸಬೇಕು. ಇಲ್ಲದೇ ಹೋದರೆ ಸಮಾಜ ಅಂತ್ಯದ ಸ್ಥಿತಿಗೆ ಹೋಗಬಲ್ಲದು. ಇಂದಿನ ಯುವ ಪೀಳಿಗೆಯು ವಚನವನ್ನು ಅಧ್ಯಯನ ಮಾಡುವುದು ಆಚರಣೆಗೆ ತರುವುದು ಅಗತ್ಯ ಎಂದು ಅವರು ಹೇಳಿದರು.ಹಳಕಟ್ಟಿ ಅವರು ಬಹುಮುಖ ಪ್ರತಿಭೆ ಉಳ್ಳವರು. ಮಹಾಸಾಧಕರು. ತಮ್ಮ ಸಂಪೂರ್ಣ ಆಸ್ತಿಯನ್ನು ತೊರೆದು ವಚನ ಸಾಹಿತ್ಯ ಮುದ್ರಿಸಿಕೊಟ್ಟರು. ಶಿಕ್ಷಣ ಸಂಸ್ಥೆ, ಸಹಕಾರ ಸಂಘಗಳನ್ನು ಕಟ್ಟಿದರು. ಮುದ್ರಣ ಆರಂಭಿಸಿದರು. ಆಗಲೂ ವಚನಗಳನ್ನು ಒಪ್ಪದಿದ್ದಾಗ ತಮ್ಮ ಆಸ್ತಿಯನ್ನು ಮಾರಿ ಮುದ್ರಣ ಪ್ರಾರಂಭಿಸಿದರು. ಇಂತಹ ಸಾತ್ವಿಕ, ದಾರ್ಶನಿಕ, ವಚನ ಪಿತಾಮಹ ಎನಿಸಿಕೊಂಡಿರುವ ಹಳಕಟ್ಟಿ ಅವರನ್ನು ನೆನೆಯುವುದು ನಮ್ಮ ಬದುಕಿಗೆ ಒಂದು ಬೆಳಕು ಎಂದು ಅವರು ಹೇಳಿದರು.
ದತ್ತಿ ದಾಸೋಹಿಗಳಾದ ಮಂಗಳಾ ಮುದ್ದುಮಾದಪ್ಪ ಮತ್ತು ಡಾ. ನಿರ್ಮಲಾ ಮಾತನಾಡಿ, ವಿದ್ಯಾರ್ಥಿಗಳಿಗೆ ಜೀವನ ಮೌಲ್ಯಗಳ ಬಗ್ಗೆ ಮಾಹಿತಿ ನೀಡಿದರು.
ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಸಂಸ್ಥೆ ಪ್ರಾಂಶುಪಾಲ ನಿರಂಜನ್ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಿದರು. ರಾಜರಾಜೇಶ್ವರಿ ಜೆಪಿ ನಗರ ಅಕ್ಕನ ಬಳಗದವರು ವಚನ ಹಾಡಿದರು. ಮಮತಾ ಅವರು ನಿರೂಪಿಸಿದರು.