ವಚನಗಳ ಮೂಲಕ ಧಾರ್ಮಿಕ ಜಾಗೃತಿ ಮೂಡಿಸಿದ ಮಾಚಿದೇವ

KannadaprabhaNewsNetwork |  
Published : Feb 04, 2025, 12:30 AM IST
ಪೋಟೋ೩ಸಿಎಲ್‌ಕೆ೨ ಚಳ್ಳಕೆರೆ ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಮಡಿವಾಳ ಸಮಾಜ ಮತ್ತು ರಾಷ್ಟಿçÃಯ ಹಬ್ಬಗಳ ಆಚರಣಾಸಮಿತಿ ಸಹಯೋಗದಲ್ಲಿ ನಡೆದ ಮಾಚಿದೇವರ ಜಯಂತಿ ಕಾರ್ಯಕ್ರಮಕ್ಕೆ ಶಾಸಕ ಟಿ.ರಘುಮೂರ್ತಿ ಚಾಲನೆ ನೀಡಿ, ಮಾತನಾಡಿದರು. | Kannada Prabha

ಸಾರಾಂಶ

ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮಕ್ಕೆ ಶಾಸಕ ಟಿ.ರಘುಮೂರ್ತಿ ಚಾಲನೆ ನೀಡಿ, ಮಾತನಾಡಿದರು.

ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿ ಟಿ.ರಘುಮೂರ್ತಿ ಹೇಳಿಕೆಕನ್ನಡಪ್ರಭ ವಾರ್ತೆ ಚಳ್ಳಕೆರೆ

ಸಮಾಜದಲ್ಲಿ ಬದಲಾವಣೆಯ ಪರ್ವವನ್ನು ಆರಂಭಿಸಿದ ಅನೇಕ ದಾರ್ಶನಿಕರು ತಮ್ಮದೇಯಾದ ವಚನಗಳ ಮೂಲಕ ಜನರಲ್ಲಿ ಧಾರ್ಮಿಕ ಜಾಗೃತಿ ಮೂಡಿಸಲು ಶ್ರಮಿಸಿದ್ದಾರೆ. ವಿಶೇಷವಾಗಿ ಮಡಿವಾಳ ಮಾಚಿದೇವ ವಚನಗಳು ಸಾರ್ವಜನಿಕರಲ್ಲಿ ಪರಿವರ್ತನೆ ಉಂಟುಮಾಡಲು ಸಹಕಾರಿಯಾಗಿವೆ ಎಂದು ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.

ಸೋಮವಾರ ತಾಪಂ ಕಾರ್ಯಲಯದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಮಡಿವಾಳ ಸಮುದಾಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಡಿವಾಳಮಾಚಿದೇವ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಮಡಿವಾಳ ಮಾಚಿದೇವರು ನಿರಂತರ ಕಾಯಕ ಯೋಗಿಯಾಗಿದ್ದರು, ಸದಾಕಾಲ ಧಾರ್ಮಿಕ ವಿಚಾರಧಾರೆಗಳನ್ನು ಎಲ್ಲರಿಗೂ ತಲುಪಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದವರು, ಇಂದು ಮಡಿವಾಳ ಸಮುದಾಯ ಜನರಲ್ಲಿ ಗುರುತಿಸಿಕೊಳ್ಳಲು ಮಡಿವಾಳ ಮಾಚಿದೇವರ ವಚನಗಳು ಸ್ಫೂರ್ತಿ ಎಂದರು.

ತಹಸೀಲ್ದಾರ್ ರೇಹಾನ್‌ಪಾಷ ಮಾತನಾಡಿ, ರಾಜ್ಯ ಸರ್ಕಾರ ಇಂತಹ ಮಹಾನೀಯರ ವಚನಗಳು ಸಮಾಜದ ಎಲ್ಲಾ ವರ್ಗಕ್ಕೂ ತಲುಪಿಸಬೇಕೆಂಬ ದೂರದೃಷ್ಠಿಯಿಂದ ಮಡಿವಾಳ ಮಾಚಿದೇವ ಜಯಂತಿಯನ್ನು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮೂಲಕ ನಡೆಸಲಾಗುತ್ತಿದೆ. ಧಾರ್ಮಿಕ ಪರಿತರ್ವನೆಯ ಹರಿಕಾರರಲ್ಲಿ ಮಡಿವಾಳಮಾಚಿದೇವರು ಒಬ್ಬರು ಎಂದರು.

ಮಡಿವಾಳ ಮಾಚಿದೇವರ ಬಗ್ಗೆ ಕೃಷಿ ಜಂಟಿನಿರ್ದೇಶಕ ಟಿ.ಮಂಜುನಾಥ ಉಪನ್ಯಾಸ ನೀಡಿದರು. ಸಂಜೀವಿನಿ ಲ್ಯಾಬ್‌ ಟೆಕ್ನಿಷನ್ ಎಂ.ಎನ್.ಮೃತ್ಯುಂಜಯ ಮಾತನಾಡಿ, ಮಡಿವಾಳಸಮಾಜಕ್ಕೆ ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಪ್ರಾತಿನಿಧ್ಯ ದೊರೆಯಬೇಕಿದೆ. ಸಮಾಜದ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಸಮಾಜಮುಖಿ ಕಾರ್ಯಗಳನ್ನು ಮಾಡಬೇಕಿದೆ. ಮಡಿವಾಳ ಸಮಾಜಕ್ಕೆ ಎಸ್ಸಿ ಮೀಸಲಾತಿ ಕೊಡಿಸಲು ಶಾಸಕರು ಮುಂದಾಗಬೇಕೆAದರು.

ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ರಾಮಜ್ಜ, ಗೌರವಾಧ್ಯಕ್ಷ ಎನ್.ಮಂಜುನಾಥ, ಅಧ್ಯಕ್ಷ ಎಂ.ನಾಗರಾಜು, ಕಾರ್ಯದರ್ಶಿ ಕುಶಾಲಪ್ಪ, ಖಜಾಂಚಿ ಆರ್ಟ್ಸ್ಸನ್‌ಪ್ರಕಾಶ್, ವಿಜಯಕುಮಾರ್, ಇಒ ಶಶಿಧರ, ಪೌರಾಯುಕ್ತ ಜಗರೆಡ್ಡಿ, ನಗರಸಭಾ ಸದಸ್ಯ ಬಿ.ಟಿ.ರಮೇಶ್‌ಗೌಡ, ಮುಖಂಡರಾದ ವೇದಮೂರ್ತಿ, ಜೀವನ್, ಓಂಕಾರಪ್ಪ, ಮಹಿಳಾಘಟಕದ ಅಧ್ಯಕ್ಷೆ ಶೈಲಜಾಮಂಜುನಾಥ, ಎನ್.ಮಂಜಳಾ ಮುಂತಾದವರು ಉಪಸ್ಥಿತರಿದ್ದರು.

PREV

Recommended Stories

ದ.ಕ.ದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಚಾಲನೆ
ಕದ್ರಿ ದೇವಸ್ಥಾನ ಪ್ರಾಂಗಣದಲ್ಲಿ ‘ಮುದ್ದು ಕೃಷ್ಣ’ ವೇಷ ಸ್ಪರ್ಧೆ