ಸಮಾನತೆ ಸಾರಿದ ವಚನಕಾರ ಮಾಚಿದೇವ: ಬಿ.ಜಿ.ರಾಜಶೇಖರಪ್ಪ

KannadaprabhaNewsNetwork |  
Published : Feb 02, 2024, 01:00 AM IST
1 ಬೀರೂರು 1ಬೀರೂರಿನ ಮಡಿವಾಳ ಮಾಚಿದೇವ ದೇವಾಲಯದಲ್ಲಿ ಗುರುವಾರ ಆಯೋಜಿಸಿದ್ದ ಮಾಚಿದೇವ ಜಯಂತಿ ಆಚರಸಿಲಾಯಿತು. ಸಮಾಜದ ಅಧ್ಯಕ್ಷ ಬಿ.ಜಿ.ರಾಜಶೇಖರಪ್ಪ ಕಾರ್ಯದರ್ಶಿ ತಿಪ್ಪೇಶ್, ಖಜಾಂಚಿ ನಂಜುಂಡಪ್ಪ, ಇದ್ದರು. | Kannada Prabha

ಸಾರಾಂಶ

ಬಸವಾದಿ ಶರಣರ ಕಾಲಘಟ್ಟದಲ್ಲಿ ಶೋಷಿತ ಸಮಾಜದ ಧ್ರುವತಾರೆಯಾಗಿ ಉದಯಿಸಿದವರು ಮಡಿವಾಳ ಮಾಚಿದೇವ ಎಂದು ಬೀರೂರು ಮಡಿವಾಳ ಸಮಾಜದ ಅಧ್ಯಕ್ಷ ಬಿ.ಜಿ.ರಾಜಶೇಖರಪ್ಪ ಹೇಳಿದರು.

ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆಕನ್ನಡಪ್ರಭ ವಾರ್ತೆ, ಬೀರೂರು

ಬಸವಾದಿ ಶರಣರ ಕಾಲಘಟ್ಟದಲ್ಲಿ ಶೋಷಿತ ಸಮಾಜದ ಧ್ರುವತಾರೆಯಾಗಿ ಉದಯಿಸಿದವರು ಮಡಿವಾಳ ಮಾಚಿದೇವ ಎಂದು ಬೀರೂರು ಮಡಿವಾಳ ಸಮಾಜದ ಅಧ್ಯಕ್ಷ ಬಿ.ಜಿ.ರಾಜಶೇಖರಪ್ಪ ಹೇಳಿದರು.

ಪಟ್ಟಣದ ಸಂತೆ ಮೈದಾನದ ಆವರಣದ ಮಡಿವಾಳ ಮಾಚಿದೇವ ದೇವಾಲಯದಲ್ಲಿ ಗುರುವಾರ ಆಯೋಜಿಸಿದ್ದ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಜಾತಿಪದ್ಧತಿ, ಅಸ್ಪಶ್ಯತೆ, ಶೋಷಣೆ ವಿರುದ್ಧ ವಚನಗಳ ಮೂಲಕ ಜಾಗೃತ ಸಮಾಜ ನಿರ್ಮಾಣಕ್ಕೆ ತಳಹದಿ ಹಾಕಿದ್ದರು. ಲಭ್ಯವಿರುವ 346 ವಚನ ಗಳಲ್ಲಿ ಸಮಸಮಾಜದ ನಿರ್ಮಾಣದ ಕನಸುಗಳನ್ನು ವ್ಯಕ್ತಪಡಿಸುವ ದಿಟ್ಟ ಹೆಜ್ಜೆಯನ್ನು ಇಟ್ಟಿದ್ದರು. ಪ್ರಸ್ತುತ ಕಾಲಘಟ್ಟದಲ್ಲಿ ಅವರ ವಿಚಾರಧಾರೆಗಳನ್ನು ನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಜಯಂತಿ ಆಚರಣೆಯನ್ನು ಸಾರ್ಥಕ ಗೊಳಿಸಬೇಕಿದೆ ಎಂದರು.

ಧಾರ್ಮಿಕ ಚೀಂತಕ ಬಿ.ಸೋಮಣ್ಣ ಮಾತನಾಡಿ, ಕಾಯಕ ನಿಷ್ಠೆಗೆ ಸಿಗುವ ಮಹತ್ವವೇ ಹೆಚ್ಚು. ಶೋಷಿತ ಸಮುದಾಯಗಳು ಎಲ್ಲ ರಂಗಗಳಲ್ಲಿ ಪ್ರಗತಿ ಹೊಂದಲು ಶಿಕ್ಷಣವನ್ನು ಅಸ್ತ್ರವಾಗಿ ಬಳಸಿಕೊಂಡು ತಮ್ಮ ವೃತ್ತಿ ಗೌರವ ಉಳಿಸಿಕೊಳ್ಳುವ ಜತೆಗೆ ಮಕ್ಕಳನ್ನು ಶಿಕ್ಷಣ ಸಂಸ್ಕಾರದ ಮೂಲಕ ಸತ್ಪ್ರಜೆಯಾಗಿ ರೂಪುಗೊಳಿಸಬೇಕು. ಮುಂದಿನ ದಿನಗಳಲ್ಲಿ ಸಮಾಜದ ಹಿರಿಯರನ್ನು, ಮಕ್ಕಳನ್ನು ಪ್ರೋತ್ಸಾಹಿಸುವ ಕೆಲಸಕ್ಕೆ ಸಹಕಾರ ನೀಡುವ ಭರವಸೆ ನೀಡಿದರು.

ದೇವಾಲಯದ ಮೂಲ ಮೂರ್ತಿಗೆ ಅಭಿಷೇಕ, ವಿಶೇಷ ಪುಷ್ಪಾಲಂಕಾರ, ಮಹಾಮಂಗಳಾರತಿ, ಭಕ್ತರಿಗೆ ತೀರ್ಥಪ್ರಸಾದ ವಿನಿಯೋಗ ನಡೆಯಿತು.

ಕಾರ್ಯದರ್ಶಿ ತಿಪ್ಪೇಶ್, ಖಜಾಂಚಿ ನಂಜುಂಡಪ್ಪ, ಹಿರಿಯರಾದ ಪ್ರಕಾಶ್, ನಟರಾಜ್, ಓಕಾರ್, ಹೇಮಂತ್, ಜಯಮ್ಮ, ವೀಣಾ, ರಘು ಸೇರಿದಂತೆ ಮತ್ತಿತರರು ಇದ್ದರು.1 ಬೀರೂರು 1

ಬೀರೂರಿನ ಮಡಿವಾಳ ಮಾಚಿದೇವ ದೇವಾಲಯದಲ್ಲಿ ಗುರುವಾರ ಆಯೋಜಿಸಿದ್ದ ಮಾಚಿದೇವ ಜಯಂತಿ ಆಚರಸಿಲಾಯಿತು. ಸಮಾಜದ ಅಧ್ಯಕ್ಷ ಬಿ.ಜಿ.ರಾಜಶೇಖರಪ್ಪ ಕಾರ್ಯದರ್ಶಿ ತಿಪ್ಪೇಶ್, ಖಜಾಂಚಿ ನಂಜುಂಡಪ್ಪ, ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5000 ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ : ಲಕ್ಷ್ಮೀ
ನಾಯಿಗಳ ಮೇಲೂ ತೆರಿಗೆ ಹೇರಿಕೆಗೆ ಮುಂದಾದ ಸರ್ಕಾರ!