ಕನ್ನಡಪ್ರಭ ವಾರ್ತೆ ಮಳವಳ್ಳಿ
ಸಂಘದ ಸಭಾಂಗಣದಲ್ಲಿ ಸೋಮವಾರ ನಿಗದಿಯಾಗಿದ್ದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಎಂ.ವಿ.ಗೀತಾ ಬಸವರಾಜು ಹಾಗೂ ಚಿಕ್ಕಣ್ಣ ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆ ಅಭಿವೃದ್ಧಿ ಅಧಿಕಾರಿ ಜಿ.ರಾಮಕೃಷ್ಣ ಘೋಷಿಸಿದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ಗ್ರಾಪಂ ಮಾಜಿ ಸದಸ್ಯ ಎಂ.ಜಿ.ರಮೇಶ್ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಹಾಲು ಉತ್ಪಾದಕರ ಸಹಕಾರ ಸಂಘದ ಅಭಿವೃದ್ಧಿ ಎಲ್ಲರ ಸಹಕಾರದೊಂದಿಗೆ ದುಡಿಯುತ್ತಿದ್ದೇವೆ. ಸದಸ್ಯರಿಗೆ ಸವಲತ್ತುಗಳನ್ನು ಸಮರ್ಪಕವಾಗಿ ಒದಗಿಸುವ ಮೂಲಕ ಮಾದರಿ ಸಹಕಾರ ಸಂಘವನ್ನಾಗಿ ರೂಪಿಸಲು ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರರು ಶ್ರಮಿಸಲಿ ಎಂದರು.ತಳಮಟ್ಟದಿಂದ ಜೆಡಿಎಸ್ ಪಕ್ಷವನ್ನು ಸಂಘಟಿಸಿ ಮುಂಬರುವ ಜಿಲ್ಲಾ ಮತ್ತು ತಾಪಂ ಚುನಾವಣೆಗೆ ಸಿದ್ದತೆ ನಡೆಸಲಾಗುತ್ತಿದೆ ಎಂದರು.
ಈ ವೇಳೆ ನಿರ್ದೇಶಕರಾದ ರಾಮಕೃಷ್ಣ, ಎಂ.ಪಿ.ಕೃಷ್ಣೇಗೌಡ, ಎಂ.ಎಸ್.ಪ್ರಸನ್ನ, ಎಂ.ಆರ್.ಅಭಿಲಾಷ್ ಗೌಡ, ಎಚ್.ವಿ.ವೆಂಕಟೇಶ್, ಪವಿತ್ರಾ, ಶೀಲಾ, ಟಿ.ಎಸ್.ರಂಜಿತ್ ಕುಮಾರ್, ಸಿಇಒ ಎಂ.ವಿ.ಕೆಂಪೇಗೌಡ, ಮುಖಂಡರಾದ ಪವನ್, ಅಶ್ವಥ್ ಸ್ವಾಮಿ, ಉಮೇಶ್, ಬಸವರಾಜು ಇದ್ದರು.