ಚಿತ್ರದುರ್ಗ: ಕರ್ನಾಟಕ ರಾಜ್ಯ ಮದಕರಿ ನಾಯಕ ಯುವ ಸೇನಾ ಸಮಿತಿಗೆ ಹೊಳಲ್ಕೆರೆ, ಚಳ್ಳಕೆರೆ ಹಾಗೂ ಚಿತ್ರದುರ್ಗದ ತಾಲೂಕು ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ಹೊಳಲ್ಕೆರೆ ತಾಲೂಕು ಅಧ್ಯಕ್ಷರನ್ನಾಗಿ ಅಭಿಷೇಕ್, ಚಳ್ಳಕೆರೆ ತಾಲೂಕಿಗೆ ಈಶ್ವರ, ಚಿತ್ರದುರ್ಗ ತಾಲೂಕು ಅಧ್ಯಕ್ಷರನ್ನಾಗಿ ಆರ್. ಮಹಂತೇಶ್ ಅವರನ್ನು ನೇಮಕ ಮಾಡಲಾಯಿತು. ಸಮಿತಿಯ ರಾಜ್ಯಾಧ್ಯಕ್ಷ ರಾಜಣ್ಣ ಹಿರೇಕಂದವಾಡಿ ಮಾತನಾಡಿ, ಸಮಾಜದಲ್ಲಿ ನೊಂದವರ ಧ್ವನಿಯಾಗಿ ಸಂಘಟಿತರಾಗಿ ಕಾರ್ಯನಿರ್ವಹಿಸಬೇಕೆಂದು ಸೂಚಿಸಿದರು. ರಾಜವಂಶಸ್ಥರಾದ ರಾಜ ವೀರ ಮದಕರಿ ನಾಯಕ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಸಂಘಟನಾ ಕಾರ್ಯದರ್ಶಿ ಲೋಕೇಶ್, ಕಾರ್ಯದರ್ಶಿ ರುದ್ರೇಶ್, ತಿಪ್ಪೇಸ್ವಾಮಿ ಹಿರೇಕಂದವಾಡಿ, ಓಬಳೇಶ್ ಚಿಕ್ಕಂದವಾಡಿ, ರಮೇಶ್ ಗುಂಜಿಗನೂರು ಇದ್ದರು. ಹೊಳಲ್ಕೆರೆ ತಾಲೂಕ್ ಅಧ್ಯಕ್ಷರನ್ನಾಗಿ ಅಭಿಷೇಕ್, ಚಳ್ಳಕೆರೆ ತಾಲೂಕಿಗೆ ಈಶ್ವರ, ಚಿತ್ರದುರ್ಗ ತಾಲೂಕು ಅಧ್ಯಕ್ಷರನ್ನಾಗಿ ಮಹಂತೇಶ್ ಅವರನ್ನು ನೇಮಿಸಲಾಯಿತು.
7ಸಿಟಿಡಿ3