ಮದ್ದೂರು ವಕೀಲ ಸಂಘದಿಂದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ

KannadaprabhaNewsNetwork |  
Published : Aug 14, 2026, 01:30 AM IST
13ಕೆಎಂಎನ್ ಡಿ26 | Kannada Prabha

ಸಾರಾಂಶ

ಕಾವೇರಿ ನದಿ ನೀರಿನ ಚಳವಳಿಯಲ್ಲಿ ಭಾಗವಹಿಸುವ ರೈತರು ಹಾಗೂ ಕನ್ನಡ ಪರ ಸಂಘಟನೆಗಳ ಕರ್ತರ ಮೇಲೆ ಪೊಲೀಸರು ಯಾವುದೇ ರೀತಿಯ ಮೊಕದ್ದಮೆ ದಾಖಲು ಮಾಡಿದರೆ ಮದ್ದೂರು ವಕೀಲರಸಂಘ ವಕಾಲತ್ತು ವಹಿಸಿ ಉಚಿತವಾಗಿ ಕೇಸ್ ಗಳನ್ನು ನಡೆಸಿಕೊಡುತ್ತದೆ.

ಮದ್ದೂರು:

ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ರೈತರು ಮತ್ತು ಕನ್ನಡಪರ ಸಂಘಟನೆಗಳ ಹೋರಾಟ ಬೆಂಬಲಿಸಿ ಪಟ್ಟಣದಲ್ಲಿ ವಕೀಲರು ಗುರುವಾರ ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ವಕೀಲರ ಸಂಘದ ಅಧ್ಯಕ್ಷ ಎಂ.ಎನ್. ಶಿವಣ್ಣ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ ವಕೀಲರು, ಸಮಿತಿ ಮತ್ತು ಪ್ರಾಧಿಕಾರ ಕಾವೇರಿಕೊಳ್ಳದ ವಸ್ತು ಸ್ಥಿತಿ ಅವಲೋಕನ ಮಾಡದೆ ತಮಿಳುನಾಡಿಗೆ ನೀರು ಬಿಡಬೇಕು ಎಂದು ನೀಡಿರುವ ಆದೇಶ ವೈಜ್ಞಾನಿಕವಾಗಿದೆ ಎಂದು ಆರೋಪಿಸಿ ನ್ಯಾಯಾಲಯದ ಕಲಾಪದಿಂದ ಹೊರ ಗುಳಿಯಲು ತೀರ್ಮಾನ ಕೈಗೊಂಡರು. ವಕೀಲರ ಸಂಘದ ಆವರಣದಲ್ಲಿ ಕೆಲಕಾಲ ವಕೀಲರು ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ ತಮಿಳುನಾಡು ಮುಖ್ಯಮಂತ್ರಿ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡು ವಸ್ತು ಸ್ಥಿತಿ ಮನವರಿಕೆ ಮಾಡಬೇಕು ಎಂದು ಅಧ್ಯಕ್ಷ ಶಿವಣ್ಣ ಸಲಹೆ ನೀಡಿದರು.

ಕಾವೇರಿ ನದಿ ನೀರಿನ ಚಳವಳಿಯಲ್ಲಿ ಭಾಗವಹಿಸುವ ರೈತರು ಹಾಗೂ ಕನ್ನಡ ಪರ ಸಂಘಟನೆಗಳ ಕರ್ತರ ಮೇಲೆ ಪೊಲೀಸರು ಯಾವುದೇ ರೀತಿಯ ಮೊಕದ್ದಮೆ ದಾಖಲು ಮಾಡಿದರೆ ಮದ್ದೂರು ವಕೀಲರಸಂಘ ವಕಾಲತ್ತು ವಹಿಸಿ ಉಚಿತವಾಗಿ ಕೇಸ್ ಗಳನ್ನು ನಡೆಸಿಕೊಡುತ್ತದೆ ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಪುಟ್ಟರಾಜು, ಕಾರ್ಯದರ್ಶಿ ಸುಮಂತ್, ಖಜಾಂಚಿ ಪ್ರಸನ್ನ, ಸಂಘದ ಸದಸ್ಯರಾದ ಎಂ.ಎನ್.ಚಂದ್ರಶೇಖರ್, ಎಂ.ಎಂ.ಪ್ರಶಾಂತ್, ಎಸ್.ಉಮೇಶ್, ಚೆಲುವರಾಜು, ಕೆ.ಸ್ವಾಮಿ, ಮಹೇಶ್, ದಯಾನಂದ, ಶಿವಲಿಂಗಯ್ಯ, ಕೆ.ಯೋಗಾನಂದ, ಕೆ.ಶಿವಣ್ಣ, ಎಂ.ಶಿವಣ್ಣ, ವಿ.ಟಿ.ರವಿಕುಮಾರ್, ಪೂರ್ಣಿಮಾ, ಬೇಬಿ, ವಿಲಾಸಿನಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತ್ರಿವರ್ಣಮಯವಾಗಿ ಕಂಗೊಳಿಸಿದ ಬಳ್ಳಾರಿ ನಗರ
ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಸ್ಮರಿಸಿ ರಾಜು: ಕುರಡಗಿ