ಮದ್ದೂರು:
ಪ್ರತಿಭಟನಾ ಧರಣಿ ವೇಳೆ ಮಾತನಾಡಿದ ಅವರು, ಮದ್ದೂರು ಕೊನೇ ಭಾಗದ ಜಮೀನುಗಳಿಗೆ ನೀರು ಹರಿಸುವ ವಿಚಾರದಲ್ಲಿ ಜನರ ಮಾರಣ ಹೋಮಕ್ಕೆ ಕಾರಣರಾಗಿದ್ದಾರೆ. ಇದರಿಂದ ರೈತರು ಸಂಕಷ್ಟ ಪರಿಸ್ಥಿತಿಗೆ ತಲುಪಿದ್ದಾರೆ ಎಂದರು.
ಕಾವೇರಿ ನದಿಯಿಂದ ಬೆಂಗಳೂರಿಗೆ 6ನೇ ಹಂತದ ಕುಡಿಯುವ ನೀರಿನ ಯೋಜನೆಗೆ ಸರ್ಕಾರ ಅನುಮೋದನೆ ನೀಡಿರುವುದು ಮಂಡ್ಯ ಜಿಲ್ಲೆಯ ಜನರಿಗೆ ಸರ್ಕಾರ ಮಾರಣ ಹೋಮ ಮಾಡಲು ಹೊರಟಿದೆ ಎಂದು ಕಿಡಿಕಾರಿದರು.ಆಧುನೀಕರಣದ ಹೆಸರಿನಲ್ಲಿ ರೈತರ ಜೊತೆ ಚೆಲ್ಲಾಟವಾಡುತ್ತೀರಿ. ಚುನಾವಣೆ ವೇಳೆ ಜನರ ಕಾಲಿಗೆ ಕೈ ಹಾಕುತ್ತೀರಿ. ಅವರ ಕಷ್ಟ ಕೇಳೋದಿಕ್ಕೆ ಏನು ದಾಡಿ ಎಂದು ಖಾರವಾಗಿ ಪ್ರಶ್ನಿಸಿದರು.
ಎಚ್ಡಿಕೆಗೆ ಅದ್ಧೂರಿ ಸ್ವಾಗತ
ಮದ್ದೂರು: ನಗರಸಭೆ ವ್ಯಾಪ್ತಿಗೆ ತಾಲೂಕಿನ ಗೆಜ್ಜಲಗೆರೆ ಗ್ರಾಮ ಸೇರ್ಪಡೆ ವಿರೋಧಿಸಿ ಗ್ರಾಮಸ್ಥರು ನಡೆಸುತ್ತಿರುವ ನಿರ್ದಿಷ್ಟಾವಧಿ ಧರಣಿಗೆ ಬೆಂಬಲ ಸೂಚಿಸಲು ಆಗಮಿಸಿದ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಗ್ರಾಮದಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು. ಗೆಜ್ಜಲಗೆರೆ ಗ್ರಾಮದ ಗ್ರಾಪಂ ಮಾಜಿ ಸದಸ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ಕಟ್ಟಾ ಅಭಿಮಾನಿ ಜಿ.ಪಿ.ಸಾಯಿ ಪ್ರಸನ್ನ ಅವರು ಸಚಿವ ಕುಮಾರಸ್ವಾಮಿ ಅವರಿಗೆ ಹಸಿರು ರುಮಾಲು ಹಾಗೂ ಶಾಲು ಹೊದಿಸಿ ಅಭಿನಂದಿಸಿದರು. ಗೆಜ್ಜಲಗೆರೆ ಗ್ರಾಮವನ್ನು ಯಾವುದೇ ಕಾರಣಕ್ಕೂ ಮದ್ದೂರು ನಗರಸಭೆಗೆ ವಿಲೀನ ಮಾಡಬಾರದು. ಈ ಬಗ್ಗೆ ತಾವು ಸರ್ಕಾರದೊಂದಿಗೆ ಹೋರಾಟ ನಡೆಸಬೇಕು. ಒಂದು ವೇಳೆ ಗ್ರಾಮ ನಗರಸಭೆಗೆ ಸೇರ್ಪಡೆಯಾದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಾಯಿ ಪ್ರಸನ್ನ ಕುಮಾರಸ್ವಾಮಿ ಅವರೊಂದಿಗೆ ಅಳಲು ತೋಡಿಕೊಂಡರು.