ಮದ್ದೂರು: ಅನಿದಿಷ್ಟಾವಧಿ ಧರಣಿ ನಾಲ್ಕನೇ ದಿನವೂ ಮುಂದುವರಿಕೆ

KannadaprabhaNewsNetwork |  
Published : Dec 26, 2025, 01:45 AM IST
25ಕೆಎಂಎನ್ ಡಿ19 | Kannada Prabha

ಸಾರಾಂಶ

ಮದ್ದೂರು ತಾಲೂಕು ಗೆಜ್ಜಲಗೆರೆ ಗ್ರಾಮವನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ವಿರೋಧಿಸಿ ಗ್ರಾಮಸ್ಥರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ನಾಲ್ಕನೇ ದಿನವೂ ಮುಂದುವರಿದಿದೆ. ಇದಕ್ಕೆ ಅನೇಕ ಸಾಹಿತಿಗಳು ಬೆಂಬಲ.

ಮದ್ದೂರು:

ತಾಲೂಕಿನ ಗೆಜ್ಜಲಗೆರೆ ಗ್ರಾಮ ಪಂಚಾಯ್ತಿಯನ್ನು ಮದ್ದೂರು ನಗರಸಭಾ ವ್ಯಾಪ್ತಿಗೆ ಸೇರ್ಪಡೆ ಮಾಡಿರುವುದನ್ನು ವಿರೋಧಿಸಿ ಗ್ರಾಮ ಹೋರಾಟ ಸಮಿತಿ ನೇತೃತ್ವದಲ್ಲಿ ನಮ್ಮ ಗ್ರಾಮ ನಮ್ಮ ಪಂಚಾಯ್ತಿ ಎಂಬ ಘೋಷಣೆ ಅಡಿ ರೈತ ಸಂಘ, ಸಂಘ ಸಂಸ್ಥೆಗಳ ಸಹಯೋಗದಲ್ಲಿ ಗ್ರಾಮಸ್ಥರು ನಡೆಸುತ್ತಿರುವ ಅನಿದಿಷ್ಟಾವಧಿ ಧರಣಿ ನಾಲ್ಕನೇ ದಿನವೂ ಮುಂದುವರೆದಿದೆ.

ಸಾಹಿತಿ ತೈಲೂರು ವೆಂಕಟ ಕೃಷ್ಣ, ಸುಭಾಷ್ ಪಾಳೇಗಾರ್ ಸಂಘದ ಜಿಲ್ಲಾ ಸಂಚಾಲಕ ಅನಂತ ರಾವ್, ಮಂಡ್ಯ ಇಂಜಿನಿಯರಿಂಗ್ ಕಾಲೇಜಿನ ಪ್ರೊ.ಜಿ.ಬಿ.ಶಿವಶಂಕರ್ ಸೇರಿದಂತೆ ಅನೇಕ ಸಾಹಿತಿಗಳು ಬೆಂಬಲ ಸೂಚಿಸಿ ಧರಣಿಯಲ್ಲಿ ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಸಾಹಿತಿಗಳು, ರಾಜ್ಯ ಸರ್ಕಾರ ಡಿಪಿಆರ್ ಪ್ರಕಟಿಸದೆ ಅಭಿವೃದ್ಧಿ ಹೆಸರಿನಲ್ಲಿ ಗ್ರಾಪಂ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿದೆ. ಗಾಂಧಿ ಕಂಡ ಕನಸಿನ ಭಾರತ ಉಳಿಯಬೇಕಾದರೆ ಗ್ರಾಪಂಗಳು ಗ್ರಾಮದಲ್ಲಿ ಉಳಿಯಬೇಕು ನಗರೀಕರಣವಾಗಬಾರದು ಎಂದು ಅಭಿಪ್ರಾಯವ್ಯಕ್ತಪಡಿಸಿದರು.

ಧರಣಿಯಲ್ಲಿ ರೈತಪರ ಹೋರಾಟಗಾರ್ತಿ ಸುನಂದ ಜಯರಾಂ, ರೈತ ಮುಖಂಡ ಜಿ.ಎ.ಶಂಕರ್, ಗ್ರಾಪಂ ಅಧ್ಯಕ್ಷ ರಾಧಾ, ತಾಪಂ ಮಾಜಿ ಅಧ್ಯಕ್ಷ ಜಿ.ಪಿ.ಯೋಗೇಶ್, ಜಿ.ಸಿ.ಮಹೇಂದ್ರ, ಜಿ.ಟಿ.ಚಂದ್ರಶೇಖರ್, ಚಂದ್ರಣ್ಣ, ಮೋಹನ್, ಸ್ತ್ರೀಶಕ್ತಿ ಸಂಘದ ಮಹಿಳೆಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.ಮಧು ಮಾದೇಗೌಡರ ಹುಟ್ಟುಹಬ್ಬ; ರೋಗಿಗಳಿಗೆ ಹಣ್ಣು ವಿತರಣೆ

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಭಾರತೀ ವಿದ್ಯಾಸಂಸ್ಥೆ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡರ 61ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳು ಇಲ್ಲಿನ ಸಮುದಾಯ ಆರೋಗ್ಯಕೇಂದ್ರದಲ್ಲಿ ರೋಗಿಗಳಿಗೆ ಹಣ್ಣುಹಂಪಲು ವಿತರಿಸಿಸಿದರು.

ಈ ವೇಳೆ ಮಾತನಾಡಿದ ಅಣ್ಣೂರು ಸೊಸೈಟಿ ಮಾಜಿ ಆರ್.ಸಿದ್ದಪ್ಪ, ಶೈಕ್ಷಣಿಕ, ರಾಜಕೀಯ, ಸಾಮಾಜಿಕ ಮತ್ತು ಆರೋಗ್ಯ ಕ್ಷೇತ್ರದಲ್ಲಿ ನವ ಮನ್ವಂತರ ಸೃಷ್ಟಿಸಿದ ಮಾಜಿ ಸಂಸದ ದಿ.ಜಿ.ಮಾದೇಗೌಡ ಪುತ್ರ ಮಧು ಜಿ.ಮಾದೇಗೌಡರು ತಂದೆಯ ಹಾದಿಯಲ್ಲಿ ಸಾಗುತ್ತಾ ಅವರು ಹಾಕಿ ಕೊಟ್ಟಿರುವ ಮಾರ್ಗವನ್ನು ಮತ್ತಷ್ಟು ಅಭಿವೃದ್ಧಿ ಪಡಿಸುತ್ತಿದ್ದಾರೆ ಎಂದರು.

ನಾಡ ದೇವತೆ ತಾಯಿ ಚಾಮುಂಡೇಶ್ವರಿ ಮಧು ಜಿ.ಮಾದೇಗೌಡರಿಗೆ ಆಯಸ್ಸು, ಆರೋಗ್ಯ, ರಾಜಕೀಯ ಕ್ಷೇತ್ರದಲ್ಲೆ ಉನ್ನತ ಅಧಿಕಾರವನ್ನು ಲಭಿಸಲಿ ಎಂದು ಆಶಿಸಿದರು.

ಈ ವೇಳೆ ಮನ್ಮುಲ್ ನಿರ್ದೇಶಕ ಎ.ಸಿ.ಸತೀಶ್, ಗ್ರಾಪಂ ಸದಸ್ಯರಾದ ಕೆ.ಟಿ.ಶ್ರೀನಿವಾಸ್, ಕೆ.ವಿ.ಶ್ರೀನಿವಾಸ್, ಮಿಥುನ್, ಭಾರತಿ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್.ಮಹದೇವಸ್ವಾಮಿ, ಜಿಎಂಐಟಿ ಪ್ರಾಂಶುಪಾಲ ಡಾ.ಬಿ.ಆರ್.ಚಂದನ್, ಗ್ರಂಥಪಾಲಕ ಎ.ಎಸ್.ಸಂಜೀವ್, ರವಿಕುಮಾರ್, ಮುಖಂಡರಾದ ಕೆ.ಶೆಟ್ಟಹಳ್ಳಿ ನಾಗರಾಜು, ಮಣಿಗೆರೆ ಕಬ್ಬಾಳಯ್ಯ, ಬೊಪ್ಪಮುದ್ರ ಮಲ್ಲೇಶ್, ಉಮೇಶ್ ಸೇರಿದಂತೆ ಮತ್ತಿರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಲಿತ ಸಂಘಟನೆಗಳಿಂದ ಮನುಸ್ಮೃತಿ ಪ್ರತಿ ಹರಿದು ಪ್ರತಿಭಟನೆ
ಶಿಕ್ಷಣದ ಆರಂಭಿಕ ಮೆಟ್ಟಿಲು ಕನ್ನಡ ಸ್ಪಷ್ಟ ಓದು, ಬರಹವಾಗಿದೆ: ಕೃಷ್ಣೇಗೌಡ