ಮದ್ದೂರು ನಗರಸಭೆ ನಾಮಫಲಕ ಅನಾವರಣ ಏಕಪಕ್ಷಿಯ ನಿರ್ಧಾರ

KannadaprabhaNewsNetwork |  
Published : Sep 24, 2025, 01:00 AM IST
23ಕೆಎಂಎನ್ ಡಿ18 | Kannada Prabha

ಸಾರಾಂಶ

ಮದ್ದೂರು ನಗರಸಭೆ ನಾಮಫಲಕ ಅನಾವರಣ ಸಂಬಂಧ ಸದಸ್ಯರ ಪೂರ್ವಭಾವಿ ಸಭೆ ಕರೆಯದೆ ಏಕಪಕ್ಷಿಯ ನಿರ್ಧಾರ ಕೈಗೊಂಡ ಅಧ್ಯಕ್ಷೆ ಕೋಕಿಲ ಅರುಣ್ ವಿರುದ್ಧ ವಿಪಕ್ಷ ಸದಸ್ಯರು ತರಾಟೆಗೆ ತೆಗೆದುಕೊಂಡ ಘಟನೆ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಜರುಗಿತು.

ಕನ್ನಡಪ್ರಭ ವಾರ್ತೆ ಮದ್ದೂರು

ನಗರಸಭೆ ನಾಮಫಲಕ ಅನಾವರಣ ಸಂಬಂಧ ಸದಸ್ಯರ ಪೂರ್ವಭಾವಿ ಸಭೆ ಕರೆಯದೆ ಏಕಪಕ್ಷಿಯ ನಿರ್ಧಾರ ಕೈಗೊಂಡ ಅಧ್ಯಕ್ಷೆ ಕೋಕಿಲ ಅರುಣ್ ವಿರುದ್ಧ ವಿಪಕ್ಷ ಸದಸ್ಯರು ತರಾಟೆಗೆ ತೆಗೆದುಕೊಂಡ ಘಟನೆ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಜರುಗಿತು.

ಪಟ್ಟಣದ ನಗರಸಭೆ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಸಭೆ ಆರಂಭವಾಗುತ್ತಿದ್ದಂತೆ ವಿಪಕ್ಷ ಸದಸ್ಯರಾದ ಎಂ.ಐ.ಪ್ರವೀಣ್, ಮಹೇಶ್ ಸೇರಿದಂತೆ ಹಲವು ಸದಸ್ಯರು ಶಾಸಕ ಕೆ.ಎಂ.ಉದಯ್, ಆಯುಕ್ತ ಪರಶುರಾಮ್ ಸತ್ತಿಗೇರಿ ಎದುರೆ ಅಧ್ಯಕ್ಷ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಮದ್ದೂರು ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಿದ ನಂತರ ನಾಮಫಲಕ ಅನಾವರಣ ಕಾರ್ಯಕ್ರಮದ ಬಗ್ಗೆ ಪೂರ್ವಭಾವಿ ಸಭೆಯಲ್ಲಿ ಚರ್ಚೆ ನಡೆಸದೆ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದೀರಿ ಎಂದು ಸದಸ್ಯ ಪ್ರವೀಣ್ ಆರೋಪಿಸಿದರು.

ನೀರು ಸರಬರಾಜು ಮತ್ತು ಒಳಚರಂಡಿ ದುರಸ್ತಿ ಮಾಡುವ ನೌಕರರು ಮಾಸಿಕ ವೇತನ ಪಾವತಿ ಮಾಡದೇ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಅವರಿಗೆ ವೇತನ ಪಾವತಿ ಮಾಡುವ ಯೋಗ್ಯತೆ ನಿಮಗಿಲ್ಲವೇ ಎಂದು ಪ್ರಶ್ನಿಸಿದರು.

ಪಟ್ಟಣ ವ್ಯಾಪ್ತಿ ಎಲ್ಲಾ ವಾರ್ಡ್ ಗಳ ರಸ್ತೆಗಳು ಗುಂಡಿ ಬಿದ್ದು ಜನರು ಸಂಚರಿಸದಷ್ಟು ಪರಿಸ್ಥಿತಿ ನಿರ್ಮಾಣವಾಗಿದೆ. ಅಧ್ಯಕ್ಷ ಮತ್ತು ಅಧಿಕಾರಿಗಳು ನೀಡುವ ಸಮಜಾಯಿಸಿ ಉತ್ತರಕ್ಕೆ ತಲೆತೂಗಲು ನಾವು ನಾಮನಿರ್ದೇಶನ ಸದಸ್ಯರಲ್ಲ. ಜನರಿಂದ ಚುನಾಯಿತರಾಗಿ ಬಂದಿದ್ದೇವೆ. ಜನರ ವಿಶ್ವಾಸಕ್ಕೆ ಧಕ್ಕೆ ತರಲು ನಮ್ಮ ಮನಸ್ಸು ಒಪ್ಪುತ್ತಿಲ್ಲ ಎಂದು ಸದಸ್ಯರಾದ ಪ್ರವೀಣ್ ಹಾಗೂ ಮಹೇಶ್ ಹೇಳಿದರು.

ಅಧ್ಯಕ್ಷರು ಕೂಡಲೇ ನೌಕರರಿಗೆ ವೇತನ ಬಿಡುಗಡೆ ಮಾಡಿ ಹಾಗೂ ಪಟ್ಟಣದ ರಸ್ತೆಗಳ ಗುಂಡಿ ಮುಚ್ಚುವ ಕೆಲಸ ಮಾಡುವಂತೆ ಎಂದು ಆಗ್ರಹಿಸಿದರು.

ಇಂದು ಸ್ವಚ್ಛತಾ ಹಿ ಸೇವಾ ಪಾಕ್ಷಿಕ-2025 ಆಂದೋಲನ

ಮಂಡ್ಯ: ಜಿಲ್ಲಾ ಪಂಚಾಯ್ತಿ ವತಿಯಿಂದ ಸೆ.24 ರಂದು ಬೆಳಗ್ಗೆ 7 ಗಂಟೆಗೆ ಸ್ವಚ್ಛತಾ ಹಿ ಸೇವಾ (ಸ್ವಚ್ಛೋತ್ಸವ) ಪಾಕ್ಷಿಕ -2025 ವಿಶೇಷ ಆಂದೋಲನದ ಅಂಗವಾಗಿ ನಗರದ ಜಿಲ್ಲಾ ಪಂಚಾಯ್ತಿ ಕಚೇರಿಯಿಂದ ಕೊಮ್ಮೇರಹಳ್ಳಿ ಬೆಟ್ಟದವರೆಗೆ ಸೈಕಲ್ ಜಾಥಾವನ್ನು ಆಯೋಜಿಸಲಾಗಿದೆ ಎಂದು ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.ನಾಳೆ ವಿದ್ಯುತ್ ವ್ಯತ್ಯಯ

ಮಂಡ್ಯ: 66/11 ಕೆ.ವಿ ಜಿ.ಮಲ್ಲಿಗೆರೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ಕಾರ್ಯನಿರ್ವಹಣೆ ಹಮ್ಮಿಕೊಂಡಿರುವುದರಿಂದ ಸೆ.25 ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಜಿ.ಮಲ್ಲಿಗೆರೆ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ತಾಲೂಕಿನ ಜಿ.ಮಲ್ಲಿಗೆರೆ, ಹೊನ್ನೆಮಡು, ಹುನಗನಹಳ್ಳಿ, ನಂಜೇನಹಳ್ಳಿ, ಮುತ್ತೆಗೆರೆ, ತಿಪ್ಪಾಪುರ, ಬುಂಡಾರೆಕೊಪ್ಪಲು, ಎಂ.ಹಟ್ನ, ಸಂಗಾಪುರ ಜವನಹಳ್ಳಿ, ಮಲ್ಲೇನಹಳ್ಳಿ, ಛತ್ರನಹಳ್ಳಿ, ಬಿಲ್ಲೇನಹಳ್ಳಿ, ಬಂಕನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ