ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಮದ್ದೂರು ವಲಯದ ಮದ್ದೂರು ಶಾಖೆ ಬೇರಂಬಾಡಿ ಗಸ್ತಿನ ಮಾರಿಕಟ್ಟೆ ಕೆರೆ ಬಳಿಯ ಪ್ರದೇಶದಲ್ಲಿ ಗುಸ್ತು ವೇಳೆ ಸೋಮವಾರ ಹೆಣ್ಣು ಆನೆಯ ಕಳೇಬರ ಪತ್ತೆಯಾಗಿದೆ ಎಂದು ಅರಣ್ಯ ಇಲಾಖೆ ಹೇಳಿದೆ.
ಅರಣ್ಯ ಇಲಾಖೆಯ ಪಶು ವೈದ್ಯಾಧಿಕಾರಿ ಸತ್ತ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದ್ದು, ಸದರಿ ಆನೆ ವಯೋಸಹಜವಾಗಿ ಸಾವನ್ನಪ್ಪಿದೆ ಎಂದು ಪಶು ವೈದ್ಯಾಧಿಕಾರಿ ದೃಢಪಡಿಸಿದ್ದಾರೆ ಎಂದು ಮದ್ದೂರು ವಲಯ ಅರಣ್ಯಾಧಿಕಾರಿ ಶೈಲೇಂದ್ರ ಕುಮಾರ್ ತಿಳಿಸಿದ್ದಾರೆ.ಸ್ಪಷ್ಟತೆ ಇಲ್ಲ:
ಸ್ಥಳಕ್ಕೆ ಬಂಡೀಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಲ್.ನಂದೀಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶುಭಂ ಸಿಂಗ್ ತನ್ವರ್, ಮದ್ದೂರು ವಲಯ ಅರಣ್ಯಾಧಿಕಾರಿ ಶೈಲೇಂದ್ರ ಕುಮಾರ್ ಭೇಟಿ ನೀಡಿದ್ದರು.
ಗುಂಡ್ಲುಪೇಟೆ ಮದ್ದೂರು ವಲಯದಲ್ಲಿ ಗಸ್ತು ನಡೆಯುತ್ತಿಲ್ಲ ಎಂಬ ಗಂಭೀರ ಆರೋಪಗಳಿವೆ. ಇದೇ ವಲಯದಲ್ಲಿ ಗಸ್ತು ಇಲ್ಲದ ಕಾರಣ ಆನೆ ಸತ್ತರೂ ಆನೆ ಸಂಪೂರ್ಣ ಮಾಂಸ ಖಂಡಗಳಲ್ಲಿದೆ ಬರೀ ಮೂಳೆ ಕಳೇಬರ ಸಿಕ್ಕಿದ್ದು .ಇದು ಗಸ್ತಿನ ಕೊರತೆ ಎದ್ದು ಕಾಣುತ್ತಿದೆ.
ಇತ್ತ ಸೋಮವಾರ ಬೆಳಕಿಗೆ ಬಂದ ಕಾಡಾನೆ ಸಾವಿನಲ್ಲೂ ಆನೆ ಬಹುತೇಕ ಮಾಂಸ ಖಂಡಗಳು ಕಾಣುತ್ತಿಲ್ಲ. ಮೂಳೆಗಳು ಇವೆ. ಅಂದರೆ ಗಸ್ತು ನಡೆಸಿಲ್ಲ ಅನ್ನೋದು ಈ ಪ್ರಕರಣದಲ್ಲಿ ಕಂಡು ಬಂದಂತಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ ಹುಲಿ ಉರುಳಿಗೆ ಸಾವು ಹಾಗೂ ಆನೆ ಸತ್ತ ಬಳಿಕ ಆನೆದಂತ ಕಳವು ಪ್ರಕರಣದಲ್ಲಿ ತಾಲೂಕಿನ ಭೀಮನಬೀಡು ಗ್ರಾಮದ ಯುವಕನೊಬ್ಬನನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ.