ಕನ್ನಡಪ್ರಭವಾರ್ತೆ ಚಾಮರಾಜನಗರ
ನೂತನ ಉಪಾಧ್ಯಕ್ಷ ಎಚ್.ಎಂ. ಮಧು ಅಧಿಕಾರ ವಹಿಸಿಕೊಂಡು ಮಾತನಾಡಿ, ಗ್ರಾಪಂಗೆ ಉಪಾಧ್ಯಕ್ಷರನ್ನಾಗಿ ನನ್ನನ್ನು ಅವಿರೋಧ ಆಯ್ಕೆ ಮಾಡಿದ ಸರ್ವ ಸದಸ್ಯರಿಗೂ, ಬೆಂಬಲ ನೀಡಿದ ಎಲ್ಲ ಮುಖಂಡರಿಗೂ ಆಭಾರಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಪಂಚಾಯಿತಿ ವ್ಯಾಪ್ತಿಯ ಹೆಬ್ಬಸೂರು, ದಡದಹಳ್ಳಿ, ಅರಳಿಪುರ, ಮಲ್ಲದೇವನಹಳ್ಳಿ ಗ್ರಾಮಗಳ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಿ, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು. ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಕೆ. ಪದ್ಮ, ಮಾಜಿ ಉಪಾಧ್ಯಕ್ಷ ಸಾಧಿಕ್ ಉಲ್ಲಾ, ಸದಸ್ಯರಾದ ಎಚ್.ಎಂ. ಜಯಶಂಕರ, ಪುಷ್ಪಲತಾ, ಮಂಜುಳ, ಭಾಗ್ಯಮ್ಮ, ಗೋವಿಂದರಾಜು, ಪ್ರತಿಮಾ, ಪಿ.ಮೂರ್ತಿ, ಎಸ್. ರಶ್ಮಿ, ಜಿ.ಮಹದೇವಸ್ವಾಮಿ, ವಸಂತ, ಭಾಗ್ಯ, ಅನಂದ, ಸಿ.ಎ.ಆಶಾ, ಕುಮಾರ್, ಪಿಡಿಒ ಎ. ರಂಜಿತಾ, ಕಾರ್ಯದರ್ಶಿ ಪ್ರಕಾಶ್ ಇದ್ದರು. ವಿಜಯೋತ್ಸವ: ಎಚ್.ಎಂ.ಮಧು ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಗ್ರಾಮದ ಮುಖಂಡರು, ಯುವಕರು ನೂತನ ಉಪಾಧ್ಯಕ್ಷರಿಗೆ ಹಾರ ಹಾಕಿ ಶಾಲು ಹೊದಿಸಿ ಅಭಿನಂದಿಸಿದರು. ಮುಖಂಡರಾದ ವೀರಭದ್ರಸ್ವಾಮಿ, ರಂಗಸ್ವಾಮಿ, ಉಮೇಶ್, ದಡದಹಳ್ಳಿ ಶಿವಣ್ಣ, ಮುತ್ತಲ್, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ನಂಜುಂಡಸ್ವಾಮಿ ಇತರರು ಇದ್ದರು.