ತಹಸೀಲ್ದಾರ್ ಗೈರುಹಾಜರಿಗೆ ಖಂಡನೆ

KannadaprabhaNewsNetwork |  
Published : Apr 06, 2026, 01:30 AM IST
ಮಧುಗಿರಿಯಲ್ಲಿ ಏ.5ರಂದು ಬಾಬು ಜಗಜೀವನ್ ರಾಮ್ ಜಯಂತಿ ಕಾರ್ಯಕ್ರಮಕ್ಕೆ ತಹಸೀಲ್ದಾರ್ ಶ್ರೀನಿವಾಸ್ ಗೈರು ಹಾಜರಾಗಿದ್ದನ್ನು ತಾಲೂಕಿನ ದಲಿತ ಮುಖಂಡರು ಖಂಡಿಸಿ ಅಮಾನತ್ತು ಮಾಡಬೇಕೆಂದು ಎಸಿ ಗೋಟೂರು ಶಿವಪ್ಪನವರಿಗೆ ಮನವಿ ಪತ್ರ ಸಲ್ಲಿಸಿದರೆ.  | Kannada Prabha

ಸಾರಾಂಶ

ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ಬಾಬು ಜಗಜೀವನ್ ರಾಮ್ ಜಯಂತಿ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಗೈರು ಹಾಜರಾಗಿರುವ ಹಿನ್ನೆಲೆ ದಲಿತಪರ ಸಂಘಟನೆಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿ ತಹಸೀಲ್ದಾರ್ ಕಾರ್ಯ ವೈಖರಿ ವಿರುದ್ಧ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ಬಾಬು ಜಗಜೀವನ್ ರಾಮ್ ಜಯಂತಿ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಗೈರು ಹಾಜರಾಗಿರುವ ಹಿನ್ನೆಲೆ ದಲಿತಪರ ಸಂಘಟನೆಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿ ತಹಸೀಲ್ದಾರ್ ಕಾರ್ಯ ವೈಖರಿ ವಿರುದ್ಧ ಕಿಡಿಕಾರಿದರು.

ಏಪ್ರಿಲ್ 1, ರಂದು ನಡೆದ ಪೂರ್ವಭಾವಿ ಸಭೆಯಲ್ಲಿಯೂ ತಹಸೀಲ್ದಾರ್ ಶ್ರೀನಿವಾಸ್ ಹಾಜರಾಗಿರಲಿಲ್ಲ. ಇದಲ್ಲದೆ, ಏಪ್ರಿಲ್ 5ರಂದು ನಡೆದ ಬಾಬು ಜಗಜೀವನ್ ರಾಮ್ ಜಯಂತಿ ಕಾರ್ಯಕ್ರಮಕ್ಕೂ ಗೈರುಹಾಜರಾಗಿರುವುದನ್ನು ಖಂಡಿಸಿ, ಅವರನ್ನು ಅಮಾನತು ಮಾಡುವಂತೆ ಎಲ್ಲಾ ದಲಿತಪರ ಸಂಘಟನೆಗಳ ಮುಖಂಡರು ಒಟ್ಟಾಗಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಅವರಿಗೆ ಮನವಿ ಸಲ್ಲಿಸಿದರು.

ನಂತರ ದಲಿತಪರ ಸಂಘಟನೆಗಳ ಸದಸ್ಯರು ಮಧುಗಿರಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೇರಿ ಬಾಬು ಜಗಜೀವನ್ ರಾಮ್ ಜಯಂತಿಯನ್ನು ಆಚರಿಸಿ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರುಗಳಾದ ನರಸಿಂಹಮೂರ್ತಿ, ಐ ಡಿ ಹಳ್ಳಿ ದೊಡ್ಡೇರಿ ಕಣಿಮಯ್ಯ, ತೊಂಡೋಟಿ ರಾಮಾಂಜಿನಪ್ಪ ದಲಿತ ಮುಖಂಡರಾದ , ಶಿವಕುಮಾರ್ ಎಂ ವೈ, ಬಾಣದ ರಂಗಯ್ಯ, ನರಸಿಯಪ್ಪ ,ಕರ್ನಾಟಕ ದಲಿತ ಸರ್ವೋದಯ ಸಮಿತಿ ತಾಲೂಕು ಅಧ್ಯಕ್ಷ ಡಿ.ಎ,ಚ್.ನರಸಿಂಹಮೂರ್ತಿ, ದೊಡ್ಡ ಹೊಸಳ್ಳಿ ರಾಮಣ್ಣ , ಕಲಾವಿದ ಸಿದ್ದಾಪುರ ಸಂಜೀವಯ್ಯ , ಜೀವಿಕ ಮಂಜುನಾಥ್, ಗರಣಿ ಶ್ರೀನಿವಾಸ್, ಎಸ್.ಕೆ. ರಂಗನಾಥ್, ಹನುಮಂತರಾಯಪ್ಪ , ಮರಿಯಪ್ಪ, ದೊಡ್ಡೇರಿ ರಮೇಶ್, ದಾಸಪ್ಪ, ಚಿಕ್ಕಮ್ಮ ,ರಾಜು ಕೊಡ್ಲಾಪುರ, ಹರಿ ಗಣೇಶ್, ಗರಣಿ ರಂಗರಾಜು, ರಂಗನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂದೆ-ತಾಯಿಯನ್ನು ಮಕ್ಕಳು ಕಡೆಗಣಿಸುವುದು ಸಲ್ಲ: ನ್ಯಾ. ಇ.ಎಸ್.ಇಂದ್ರೇಶ್
ಒಳ ಮೀಸಲಾತಿಯಿಂದ ಭೋವಿ ಸಮುದಾಯಕ್ಕೆ ಅನ್ಯಾಯ