ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ತಕ್ಷಣವೇ ಪರಿಶಿಷ್ಟ ಜಾತಿ, ಒಳಮೀಸಲಾತಿ ಜಾರಿ ಮಾಡುವಂತೆ ಆಗ್ರಹಿಸಿ ಜನಾಕ್ರೋಶ ಪ್ರತಿಭಟನೆಯ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಒಳಮೀಸಲಾತಿ ನೀಡುವಂತೆ ಆಯಾ ರಾಜ್ಯಗಳಿಗೆ ಸಂಪೂರ್ಣ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿ ಆ.1ಕ್ಕೆ ಒಂದು ವರ್ಷ ಕಳೆದರೂ ರಾಜ್ಯ ಸರ್ಕಾರ ಸುಪ್ರೀಂ ತೀರ್ಪು ಆಧರಿಸಿ ರಾಜ್ಯ ಸರ್ಕಾರವೂ 101 ಎಸ್ಸಿ ಜಾತಿಗಳಿಗೆ ಈಗಾಗಲೇ ಒಳಮೀಸಲಾತಿ ಕಲ್ಪಿಸಲು ಶಿಫಾರಸ್ಸು ಮಾಡಿರುವ ಮಾಧುಸ್ವಾಮಿ ಉಪಸಮಿತಿ ಶಿಪಾರಸ್ಸಿನಂತೆ ಒಳಮೀಸಲೂ ಜಾರಿಗೊಳಿಸಬೇಕಿತ್ತು. ಆದರೆ ಕಾಲಹರಣ ಮಾಡುವ ಉದ್ದೇಶದಿಂದ ಪರಿಶಿಷ್ಟರಿಗೆ ಸಾಮಾಜಿಕ ನ್ಯಾಯಕ್ಕಾಗಿ ನಿರಂತರವಾಗಿರುವ ಹೋರಾಟ ಹತ್ತಿಕ್ಕಲು ಮತ್ತೊಂದು ಆಯೋಗ ನೇಮಿಸಿಕೊಂಡಿದ್ದರೂ ಸರಿಯಾದ ಮಾಹಿತಿಯನ್ನು ಸರ್ಕಾರ ನೀಡದೆ ಅಸಹಕಾರದಿಂದಲೇ ಇದೆ. ಬರುವ ಆಗಸ್ಟ್ ನಲ್ಲಿ ಆರಂಭವಾಗುವ ಆಧಿವೇಶನದಲ್ಲಿ ಈ ಒಳಮೀಸಲಾತಿ ಜಾರಿಯಾಗಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಮಾಜಿ ಡಿಸಿಎಂ, ಸಂಸದ ಗೋವಿಂದ ಕಾರಜೋಳ ಅವರು ಆಗಮಿಸಿ ಡಾ. ಅಂಬೇಡ್ಕರ್ ಅವರ ಪುತ್ಥಳಿಗೆ ಗೌರವ ಸಲ್ಲಿಸಿ ಹೋರಾಟಕ್ಕೆ ಚಾಲನೆ ನೀಡಿದರು. ನಂತರ ಸಭೆ ಉದ್ದೇಶಿಸಿ ಮಾತನಾಡಿದರು.
ಮಾದಿಗ ಜಾತಿ ಉಪಜಾತಿ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಮುತ್ತಣ್ಣ ಬೆಣ್ಣೂರ, ಶಿವಾನಂದ ಟವಳಿ, ಯಲ್ಲಪ್ಪ ಬೆಂಡಿಗೇರಿ, ಯಲ್ಲಪ್ಪ ನಾರಾಯಣಿ, ಹಣಮಂತ ಚಿಮ್ಮಲಗಿ, ಧರ್ಮಣ್ಣ ಸಂಕೆನ್ನವರ, ಸತ್ಯಪ್ಪ ದಳವಾಯಿ, ಸಿದ್ಧು ಮಾದರ, ಸಿದ್ಧು ದೊಡಮನಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.