
ತುಮಕೂರು ಜಿಲ್ಲೆಯಲ್ಲಿ ಬಹು ಸಂಖ್ಯಾತರಾಗಿರುವ ಮಾದಿಗ ಸಮುದಾಯವು ಇದೀಗ ಒಗ್ಗಟ್ಟಾಗುತ್ತಿದ್ದು ಮುಂಬರುವ ದಿನಗಳಲ್ಲಿ ಮಾದರ ಮಹಾಸಭಾದ ಸಂಘಟನೆ ವತಿಯಿಂದ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಮುಂದೆ ಬರಲು ಅನೇಕ ಯೋಜನೆಗಳನ್ನು ರೂಪಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರು ತಿಳಿಸಿದರು.
ಕಮಲ ಗಂಗಹನುಮಯ್ಯನವರು ಸ್ಮರಣೀಯ ರಾಜಕೀಯ ಸೇವೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಮಾಜಿ ಶಾಸಕ ಗಂಗಮ್ಮಯ್ಯನವರ ಪಾತ್ರ ಬಹು ಮುಖ್ಯವಾಗಿದ್ದು ಅವರ ಧರ್ಮಪತ್ನಿ ಕಮಲಮ್ಮನವರು ಸಂಘಟನಾತ್ಮಕ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದರು ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ತಿಳಿಸಿದರು. ಮಾದಿಗ ಮಹಾಸಭಾ ಜಿಲ್ಲಾಧ್ಯಕ್ಷ ವೈ.ಎಚ್.ಹುಚ್ಚಯ್ಯ ಅವರು ಮಾತನಾಡಿ ನಮ್ಮ ಸಮುದಾಯದ ಧೀಮಂತ ರಾಜಕಾರಣಿಯಾಗಿದ್ದ ಕಮಲಮ್ಮನವರು ಅವರ ಪತಿ ಗಂಗಹನುಮಯ್ಯನವರು ಶಾಸಕರಾಗಿದ್ದ ಕಾಲದಿಂದಲೂ ಸಕ್ರಿಯ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದವರು ಸಮುದಾಯದ ಜನರನ್ನು ಗುರುತಿಸುತ್ತಾ ಸಾಮಾಜಿಕ ಸೇವೆಗಳಲ್ಲಿ ಪಾಲ್ಗೊಂಡು ಸಮಾಜದ ಹಿತದೃಷ್ಟಿಗೆ ದುಡಿದ ದಿಟ್ಟ ಮಹಿಳೆಯಾಗಿದ್ದಾರೆ ಇವರ ಅಗಲಿಕೆಯು ನಮ್ಮ ಸಮಾಜಕ್ಕೆ ತುಂಬಾ ನಷ್ಟವನ್ನ ಉಂಟು ಮಾಡಿದೆ ಎಂದರು.
ಈ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಮಾಜಿ ಸಂಸದ ಚಂದ್ರಪ್ಪ, ಮಾಜಿ.ಶಾಸಕ ಗಂಗಹನುಮಯ್ಯ, ಡಿಸಿಸಿ ಬ್ಯಾಂಕ್ ಉಪಧ್ಯಾಕ್ಷ ಜಿ.ಜೆ.ರಾಜಣ್ಣ, ಮಹಾಸಭಾದ ಮುಖಂಡರುಗಳಾದ ನರಸಿಯಪ್ಪ, ಬಾಲಕೃಷ್ಣ, ಡಾ, ಎಲ್ ಮುಕುಂದ, ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಯೋಗೀಶ್ , ಉಪಾಧ್ಯಕ್ಷ ಬಿಟ್ಟನಕುರಿಕೆ ಜಯನುಡಿ ಜಯಣ್ಣ, ನಿರ್ದೇಶಕರುಗಳು ಹಾಗೂ ಹನುಮಂತರಾಯಪ್ಪ, ಸಿದ್ದಪುರ ರಂಗಶಾಮಯ್ಯ, ಸೇರಿದಂತೆ ಗಂಗಹನುಮಯ್ಯನವರ ಮಕ್ಕಳು, ಕುಟುಂಬಸ್ಥರು ಹಾಗೂ ವಿವಿಧ ಸಮುದಾಯಗಳ ಮುಖಂಡರು ಇತರರು ಉಪಸ್ಥಿತರಿದ್ದರು.