ಕನ್ನಡಪ್ರಭ ವಾರ್ತೆ ಮಡಿಕೇರಿ ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಮತ್ತು ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಜರುಗಿದ 10 ನೇ ವರ್ಷದ ಮಕ್ಕಳ ದಸಾರ ಅತ್ಯಧಿಕ ಮಕ್ಕಳ ಪಾಲ್ಗೊಳ್ಳುವಿಕೆಗೆ ಕಾರಣವಾಯಿತು. ಮಕ್ಕಳ ಸಂತೆಯಲ್ಲಿ ಈ ಬಾರಿ 122 ಅಂಗಡಿಗಳು ಇದ್ದರೆ, ಮಕ್ಕಳ ಅಂಗಡಿಯಲ್ಲಿ 74 ಅಂಗಡಿಗಳಿದ್ದವು. ಮಕ್ಕಳ ಮಂಟಪದಲ್ಲಿ 18 ಸ್ಪರ್ಧಾ ತಂಡಗಳು, ಛದ್ಮವೇಷ ಸ್ಪರ್ಧೆಯಲ್ಲಿ 66 ಸ್ಪರ್ಧಿಗಳು ಮತ್ತು ಕ್ಲೇಮಾಡೆಲಿಂಗ್ ಸ್ಪರ್ಧೆಗೆ 17 ಮಂದಿ ಪಾಲ್ಗೊಂಡಿದ್ದರು. ಮಕ್ಕಳ ದಸರಾದಲ್ಲಿ ಈ ವರ್ಷ 620ಕ್ಕೂ ಅಧಿಕ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ದಾಖಲೆಯ ಸಂಖ್ಯೆಗೆ ಕಾರಣರಾದರು ಎಂದು ಮಕ್ಕಳ ದಸರಾ ಸಂಚಾಲಕ ಅನಿಲ್ ಎಚ್.ಟಿ. ಮಾಹಿತಿ ನೀಡಿದ್ದಾರೆ. ಮಕ್ಕಳ ದಸರಾ ವಿವಿಧ ಸ್ಪರ್ಧೆಗಳ ವಿಜೇತರು: ಛದ್ಮವೇಷದಲ್ಲಿ (ಎಲ್ ಕೆಜಿಯಿಂದ ಒಂದನೇ ತರಗತಿ) ಮನ್ವಿತಾ ಬಿ.ಎನ್. (ಪ್ರಥಮ), ರಿಶಾ ಪೂಜಾರಿ (ದ್ವಿತೀಯ), ಆರುಶ್ ಜೆ.ಕೆ. (ತೃತೀಯ), ಶಾನ್ ಚಂಗಪ್ಪ ಮತ್ತು ಲಾಸ್ಯ ಮುತ್ತಮ್ಮ (ಸಮಧಾನಕರ ಬಹುಮಾನ). ಮೂರರಿಂದ ನಾಲ್ಕನೇ ತರಗತಿ ವಿಭಾಗದಲ್ಲಿ ಧೃತಿ ಪೂಜಾರಿ (ಪ್ರಥಮ), ಚತುರ್ವಿ ಕೆ.ಎ. (ದ್ವಿತೀಯ), ಶಮಿತ್ ಕುಟ್ಟಪ್ಪ (ತೖತೀಯ), ನಿರಾಲ್ ಕಾರ್ಯಪ್ಪ ಮತ್ತು ಹಷಿ೯ಣಿ ಎಂ.ಕೆ. (ಸಮಧಾನಕರ ಬಹುಮಾನ) ಹಾಗೂ ನಾಲ್ಕರಿಂದ ಏಳನೇ ತರಗತಿ ವಿಭಾಗದಲ್ಲಿ ರುಶಿಲ್ ಶ್ರೀಹರಿ (ಪ್ರಥಮ), ಯಶಿಕಾ ದೇವಯ್ಯ (ದ್ವಿತೀಯ), ವರುಣ್ ಪಿ.ಎಚ್.(ತೖತೀಯ) , ಮಾನವಿ, ಜನ್ಯ ಪಿ.ಪಿ., ಮತ್ತು ನಫಿಯಾ ಕೆ.ಎ. ( ಸಮಧಾನಕರ ಬಹುಮಾನ). ತೀಪು೯ಗಾರರಾಗಿ ಭಾರತಿ ರಮೇಶ್, ಮೇಘ ಸುಜಯ್, ಐಚೆಟ್ಟೀರ ಸುನಿತಾ ಮಾಚಯ್ಯ ನಿರ್ವಹಿಸಿದರು. ಮಕ್ಕಳ ಸಂತೆ ಸ್ಪರ್ಧೆಯಲ್ಲಿ ಶೀತಲ್ ಎ.ಬಿ. ಮತ್ತು ಲವಿನ್ ಟಿ.ಕೆ. (ಪ್ರಥಮ), ದಿಯಾ ಎಂ.ಎ., ಧೃತಿ ಕೆ.ಎ. (ದ್ವಿತೀಯ), ಲಿಖಿತ್ ಲಾಲ್ ಪಿ.ಎಂ, ಬರುಣ್ ಪಿ.ಯು. (ತೖತೀಯ), ಕಾವೇರಿ ಎನ್.ಎಸ್. ಮತ್ತು ಕವಿನ್ ಎನ್.ಟಿ (ಸಮಧಾನಕರ) ಮತ್ತು ಲಲಿತ್ ಜಿ.ವಿ. ಸಮಥ್೯ ಜಿ.ವಿ., ವೀಕ್ಷಾ ಕೆ.ಸಿ. ಮತ್ತು ಸಮೖದ್ಧಿ ಕೆ.ಆರ್. (ಸಮಧಾನಕರ ಬಹುಮಾನ) ಮಕ್ಕಳ ಅಂಗಡಿ ಸ್ಪರ್ಧೆಯಲ್ಲಿ ತನ್ಮಯ ಮಹೇಶ್ ಡಿ. ಮತ್ತು ಧಾಮಿ೯ಕ್ (ಪ್ರಥಮ), ತನ್ಮಯ್ ಮತ್ತು ಜನನ್ (ದ್ವಿತೀಯ), ಹಷಿ೯ತ ಮತ್ತು ಸಾಕ್ಷಿ (ತೖತೀಯ), ಶಿಶಿರ ಮತ್ತು ಸುಧಾನ್ವ (ಸಮಧಾನಕರ), ರಮ್ಯ ಮತ್ತು ಲಲಿತ (ಸಮಧಾನಕರ ಬಹುಮಾನ) ಕ್ಲೇ ಮಾಡೆಲಿಂಗ್ (ಪ್ರೌಢಶಾಲಾ ವಿಭಾಗ)ದಲ್ಲಿ ಪವಿನ್ ಎಚ್.ಜೆ. (ಪ್ರಥಮ), ಹರ್ಷಿತ್ ಪೊನ್ನಪ್ಪ (ದ್ವಿತೀಯ), ಕಿಶನ್ ಆರ್.ವಿ. (ತೖತೀಯ) ಗಾನವಿ ಪಿ.ಎ ಮತ್ತು ಗಗನ್ ಎಸ್.ಕೆ. (ಸಮಧಾನಕರ ಬಹುಮಾನ)ತೀಪು೯ಗಾರರು - ಸುನಿತಾ ಕುಶಾಲನಗರ, ಮಲ್ಲಿಕಾ ಜಿ.ಎಸ್., ರಶ್ಮಿ ಉತ್ತಪ್ಪ. ಶರತ್ ಶೆಟ್ಟಿ. ಕ್ಲೇ ಮಾಡೆಲಿಂಗ್ ( ಪ್ರಾಥಮಿಕ ಶಾಲಾ ವಿಭಾಗ)ದಲ್ಲಿ ಬಿನಿತ್ ಕೆ.ಪಿ. (ಪ್ರಥಮ), ಶ್ರೀಯಾಕಿರಣ್ ಎಂ (ದ್ವಿತೀಯ) ಚಾರ್ವಿ ಕೆ.ಸಿ. (ತೖತೀಯ), ಆಧಿತ್ರಿ ಕಾವೇರಮ್ಮ ಮತ್ತು ಅಧ್ಯಾ ಎಂ.ಎಸ್. (ಸಮಧಾನಕರ ಬಹುಮಾನ). ತೀರ್ಪುಗಾರರಾಗಿ ಭರತ್ ಕೋಡಿ ಮತ್ತು ವೈಶಾಲಿ ಭಟ್ ಕಾರ್ಯ ನಿರ್ವಹಿಸಿದರು. ಮಕ್ಕಳ ಮಂಟಪ ಸ್ಪರ್ಧೆ ವಿಜೇತರು: ವಿವಿ ಕ್ರಿಯೇಟರ್ಸ್ - ರಂಜಿತ್, ಆಶಿಶ್, ಮೋಕ್ಷಿತ್, ವಿಶೇಷ್, ಪ್ರೀತಂ, ಗೌರವ್ (ಪ್ರಥಮ), ಟೀಮ್ 14 - ಸಮಥ್೯, ಪೂಜಿತ್, ಆರ್ಯನ್, ವಿಶ್ರುತ್, ಗಾಯನ್, ಕೃಪಾಲ್ (ದ್ವಿತೀಯ), ಟೀಮ್ ಏಕದಂತ - ಜಯಂತ್, ಅಕ್ಷಯ್, ಮಿಥುನ್, ಧ್ಯಾನ್, ಚಿರಂತ್, ಜಸ್ವಂತ್, (ತೖತೀಯ) , ಟೀಮ್ ಭಗವತಿ - ತೇಜಸ್, ಮನಿಷ್, ಚಿನ್ಮಯ್, ಗೌತಮ್, ಪುನಿತ್ , ತರುಣ್ (ಸಮಧಾನಕರ ಬಹುಮಾನ), ಟೀಮ್ ಬಾಲಗಂಗ - ಪೂರ್ವಿತ್, ನಮಿತ್, ಇಮ್ರಾನ್, ಲಿಖಿತ್ ( ಸಮಧಾನಕರ ಬಹುಮಾನ) , ಗ್ಯಾಂಗ್ ಸ್ಟರ್ - ಸ್ಕಂದನ್, ಸಮರ್ಥ್, ಚಿರಾಗ್, ಹೇಮಂತ್, ರಾಕೇಶ್, ಶ್ರೀನಿವಾಸ್ ( ಸಮಧಾನಕರ ಬಹುಮಾನ) ರಘುಪತಿ, ಭಾರದ್ವಜ್, ಜಯರಾಮ್ ಪಿ.ಎಂ., ಚೇತನ್ ಕುಮಾರ್. ಪ್ರಧಾನ್ ತೀಪು೯ಗಾರರಾಗಿ ಕಾರ್ಯನಿರ್ವಹಿಸಿದರು.