ಮೋಹನ್ ರಾಜ್
ತನ್ನ 3ನೇ ವಯಸ್ಸಿನಲ್ಲಿ ನಡೆದ ಟ್ರ್ಯಾಕ್ಟರ್ ಅಪಘಾತದಲ್ಲಿ ಬೆನ್ನುಹುರಿಗೆ ಪೆಟ್ಟಾಗಿ, 19 ವರ್ಷಗಳ ಕಾಲ ಗಾಲಿಕುರ್ಚಿ ಇಲ್ಲದೆ ನೆಲದ ಮೇಲೆ ತೆವಳಿಕೊಂಡು ಬದುಕಿದ ಆ ಹುಡುಗಿ, ಇಂದು ತಾನು ಕೂಡ ವಿಶ್ವದ ಓರ್ವ ಪ್ರಸಿದ್ಧ ಆಟಗಾರ್ತಿಯಾಗಿ ಬೆಳೆದಿದ್ದಾಳೆ.ಬದುಕಿಗೆ ಸಿಕ್ಕ ತಿರುವು:
ಎಪಿಡಿ ಪುನರ್ವಸತಿ ಕೇಂದ್ರ ಅವರ ಬದುಕಿಗೆ ತಿರುವು ನೀಡಿತು. ಅಲ್ಲಿ ಫ್ಯಾಷನ್ ಡಿಸೈನಿಂಗ್ ಕಲಿತು, ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಲೇ, ಬ್ಯಾಡ್ಮಿಂಟನ್ ಅನ್ನು ಗಂಭೀರವಾಗಿ ತೆಗೆದುಕೊಂಡರು. ಆರಂಭದಲ್ಲಿ ಮೈಸೂರಿನ ತರಬೇತುದಾರ ಆನಂದ್ ಅವರಿಂದ ಮಾರ್ಗದರ್ಶನ ಪಡೆದ ಪಲ್ಲವಿ, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಮೂಲತಃ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮದವರಾದ ವಿನಾಯಕ ಮಾರ್ಗದರ್ಶನದಲ್ಲಿ ವಿನಾಯಕ ಪ್ಯಾರಾ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಈಕೆಗೆ ಇದೀಗ ಒಲಿಂಪಿಕ್ ಗೋಲ್ಡ್ ಕ್ವೆಸ್ಟ್ ಸಂಸ್ಥೆ ಬೆಂಬಲ ನೀಡುತ್ತಿದೆ.ಇಂದು 44 ಪದಕಗಳ ಒಡತಿ!: ಅಂತಾರಾಷ್ಟ್ರೀಯ ಸಾಧನೆಗಳು (ಒಟ್ಟು 28 ಪದಕಗಳು): 2026 ಏಷಿಯನ್ ಪ್ಯಾರಾ ಗೇಮ್ಸ್ ಮಹಿಳಾ ಡಬಲ್ಸ್‌ನಲ್ಲಿ ಕಂಚಿನ ಪದಕ (ಭಾರತದ ಮೊದಲ ಗಾಲಿಕುರ್ಚಿ ಬ್ಯಾಡ್ಮಿಂಟನ್ ಪದಕ), ಫ್ರಾನ್ಸ್ ಪ್ಯಾರಾ ಬ್ಯಾಡ್ಮಿಂಟನ್ 2026ನಲ್ಲಿ ಮಿಕ್ಸೆಡ್ ಡಬಲ್ಸ್‌ನಲ್ಲಿ ಬೆಳ್ಳಿ , ಬ್ರಿಟಿಷ್ ಪ್ಯಾರಾ ಬ್ಯಾಡ್ಮಿಂಟನ್ 2026ನಲ್ಲಿ ಮಹಿಳಾ ಡಬಲ್ಸ್ ಮತ್ತು ಮಿಕ್ಸೆಡ್ ಡಬಲ್ಸ್‌ನಲ್ಲಿ ಕಂಚು, ವಲ್ಡ್ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ 2026ನಲ್ಲಿ - ಕ್ವಾರ್ಟರ್ ಫೈನಲಿಸ್ಟ್, ಈಜಿಫ್ಟ್ ಪ್ಯಾರಾ ಬ್ಯಾಡ್ಮಿಂಟನ್ 2025ನಲ್ಲಿ ಡಬಲ್ಸ್‌ನಲ್ಲಿ ಚಿನ್ನ, ಸಿಂಗಲ್ಸ್ ಮತ್ತು ಮಿಕ್ಸೆಡ್‌ನಲ್ಲಿ ಕಂಚು, ಬಹರೆನ್ ಪ್ಯಾರಾ ಬ್ಯಾಡ್ಮಿಂಟನ್ 2025ನಲ್ಲಿ ಸಿಂಗಲ್ಸ್‌ನಲ್ಲಿ ಚಿನ್ನ, ಡಬಲ್ಸ್‌ನಲ್ಲಿ ಬೆಳ್ಳಿ, ಮಿಕ್ಸೆಡ್‌ನಲ್ಲಿ ಕಂಚು, ಇಂಡೋನೆಷಿಯಾ ಪ್ಯಾರಾ ಬ್ಯಾಡ್ಮಿಂಟನ್ 2024ನಲ್ಲಿ - ಸಿಂಗಲ್ಸ್ ಮತ್ತು ಡಬಲ್ಸ್‌ನಲ್ಲಿ ಚಿನ್ನ, ಮಿಕ್ಸೆಡ್‌ನಲ್ಲಿ ಕಂಚು, ವಲ್ಡ್ ಅಬಿಲಿಟಿ ಗೇಮ್ಸ್‌ನಲ್ಲಿ 2023ನಲ್ಲಿ - ಡಬಲ್ಸ್‌ನಲ್ಲಿ ಚಿನ್ನ, ಉಗಾಂಡ ಪ್ಯಾರಾ ಬ್ಯಾಡ್ಮಿಂಟನ್ 2023ನಲ್ಲಿ - ಸಿಂಗಲ್ಸ್‌ನಲ್ಲಿ ಚಿನ್ನ (ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮೊದಲ ಚಿನ್ನ)ರಾಷ್ಟ್ರೀಯ ಮಟ್ಟದ ಸಾಧನೆಗಳು (11 ಪದಕಗಳು): ಖೆಲೋ ಇಂಡಿಯಾ ಗೇಮ್ಸ್‌ನಲ್ಲಿ 2025 ಮತ್ತು 2024ನಲ್ಲಿ ಚಿನ್ನದ ಪದಕ, 7ನೇ ರಾಷ್ಟ್ರೀಯ ಚಾಂಪಿಯನ್ ಶಿಪ್ 2026ನಲ್ಲಿ - ಸಿಂಗಲ್ಸ್ ಮತ್ತು ಡಬಲ್ಸ್‌ನಲ್ಲಿ ಚಿನ್ನ, ಕರ್ನಾಟಕ ರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ 3 ಬಾರಿ ಚಿನ್ನ ( ಸ್ಟೇಟ್ ನಂ. 1 ) ಈ ಹೋರಾಟಗಾರ್ತಿಯ ಮುಂದಿನ ಗುರಿ 2028ರ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕ ಗೆಲ್ಲುವ ಮೂಲಕ ಭಾರತಾಂಬೆಯ ಕೀರ್ತಿಯನ್ನು ವಿಶ್ವಕ್ಕೆ ಸಾರುವುದು.‘ನನ್ನ ಪಯಣ ಹೋರಾಟದಿಂದ ಶುರುವಾಯಿತು. ಅಂಗವೈಕಲ್ಯ ಭವಿಷ್ಯವನ್ನು ನಿರ್ಧರಿಸುವುದಿಲ್ಲ. ಅಂಗವೈಕಲ್ಯ ಅನ್ನೋದು ಅಂಗಕ್ಕೆ ಹೊರತು ಮನಸ್ಸಿಗೋ ಅಥವಾ ಛಲಕ್ಕೋ ಅಲ್ಲ. ಆತ್ಮವಿಶ್ವಾಸ ಇದ್ದರೆ ನಾವು ಅಂದುಕೊಂಡದ್ದನ್ನು ಸಾಧಿಸಬಹುದು. ನನ್ನ ಮುಂದಿನ ಗುರಿ 2028ರ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು.’-ಪಲ್ಲವಿ ಕೆ.ಎಂ, ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ್ತಿಅಂಗವಿಕಲರು ಅಂದ ಕೂಡಲೇ ಎಲ್ಲವೂ ಮುಗಿಯಿತು ಅಂತ ಮೂಲೆ ಸೇರಬಾರದು. ಛಲ ಮತ್ತು ಆತ್ಮವಿಶ್ವಾಸ ಇದ್ದರೆ ಸಾಧನೆ ನಿಮ್ಮನ್ನು ಹುಡುಕಿ ಬರುತ್ತೆ. ಪ್ಯಾರಾ ಕ್ರೀಡೆಯಲ್ಲಿ ಹಲವು ಅವಕಾಶಗಳಿವೆ. ಬ್ಯಾಡ್ಮಿಂಟನ್ ಮಾತ್ರವಲ್ಲ ಮತ್ತಷ್ಟು ಕ್ರೀಡೆಗಳಿದೆ. ಅದನ್ನು ಆಯ್ಕೆ ಮಾಡಿಕೊಂಡು ಸೂಕ್ತ ತರಬೇತಿ ಪಡೆದುಕೊಂಡರೆ ಮುಂದೆ ನೀವು ಕೂಡ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತರಬಹುದು.ವಿನಾಯಕ, ಮುಖ್ಯ ತರಬೇತಿದಾರರು, ವಿಪಿಬಿಎ