ಮಡಿಕೇರಿ: ನಗರದ ಸಂಪಿಗೆಕಟ್ಟೆ ಮೂಲಕ ಮಹದೇವಪೇಟೆ ಸಂಪರ್ಕಿಸುವ ರಸ್ತೆಯನ್ನು 85 ಲಕ್ಷ ರೂ. ವೆಚ್ಚದಲ್ಲಿ ಸರ್ವಋತು ರಸ್ತೆಯನ್ನಾಗಿ ಅಭಿವೃದ್ದಿಪಡಿಸಲಾಗುತ್ತಿದ್ದು ಮೊದಲನೇ ಹಂತದ 80 ಮೀಟರ್ ಕಾಂಕ್ರೀಟ್ ರಸ್ತೆಯನ್ನು ಶಾಸಕ ಡಾ.ಮಂತರ್ ಗೌಡ ಲೋಕಾರ್ಪಣೆಗೊಳಿಸಿದರು. ಬಳಿಕ ರಸ್ತೆ ಕಾಮಗಾರಿ ವೀಕ್ಷಿಸಿದ ಶಾಸಕರು ದ್ವಿಚಕ್ರ ವಾಹನದಲ್ಲಿ ಸಂಚಾರ ಮಾಡುವ ಮೂಲಕ ರಸ್ತೆ ಗುಣಮಟ್ಟ ಪರೀಕ್ಷಿಸಿ ಗಮನ ಸೆಳೆದರು. ದುರಸ್ತಿ ಮಾಡಬೇಕಾಗಿರುವ ಉಳಿದ ರಸ್ತೆಯ ಎರಡೂ ಬದಿಗಳಲ್ಲಿ ವೆಟ್ ಮಿಕ್ಸ್ ಅಳವಡಿಸಬೇಕು. ಬಳಿಕ ಡಾಮರೀಕರಿಣ ಕಾಮಗಾರಿ ನಡೆಸಬೇಕು. ರಸ್ತೆಯ ಸುದೀರ್ಘ ಬಾಳಿಕೆಗಾಗಿ ಮಳೆ ನೀರು ಹರಿದು ಹೋಗಲು ರಸ್ತೆಯ ಎರಡೂ ಬದಿಗಳಲ್ಲಿ ಸುಸಜ್ಜಿತ ಚರಂಡಿ ವ್ಯವಸ್ಥೆ ಕಲ್ಪಿಸಬೇಕು. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಶಾಸಕ ಡಾ.ಮಂತರ್ ಗೌಡ ಅವರು ಗುತ್ತಿಗೆದಾರರು, ನಗರ ಸಭಾ ಪೌರಾಯುಕ್ತರು ಹಾಗೂ ಇಂಜಿನಿಯರ್‌ಗೆ ಸೂಚನೆ ನೀಡಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನೀರ ಮೈನಾ ಮಾತನಾಡಿ, ಸಾರ್ವಜನಿಕರ ಪರವಾಗಿ ಶಾಸಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ನಗರ ಸಭಾ ಅಧ್ಯಕ್ಷೆ ಪಿ.ಕಲಾವತಿ, ಪೌರಾಯುಕ್ತ ರಮೇಶ್, ವಾರ್ಡ್ ಸದಸ್ಯ ಕೆ.ಎಸ್.ರಮೇಶ್, ನಾಮ ನಿರ್ದೇಶಿತ ಸದಸ್ಯ ಸದಾ ಮುದ್ದಪ್ಪ, ಮುತ್ತುರಾಜ್, ಮೂಡಾ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಕಾಂಗ್ರೆಸ್ ಮುಖಂಡರಾದ ಟಿ.ಎಂ. ಅಯ್ಯಪ್ಪ, ಪ್ರಕಾಶ್ ಆಚಾರ್ಯ, ಬೂತ್ ಅಧ್ಯಕ್ಷ ರಿಯಾಝದ್ದೀನ್, ಕೋಚನ ಚೇತನ್, ಚಂದ್ರಶೇಖರ್, ಮಿನಾಝ್ ಪ್ರವೀಣ್, ಲೀಲಾ ಶೇಷಮ್ಮ, ಸಂಪಿಗೆಕಟ್ಟೆ ಯುವಕ ಸಂಘದ ಗೌರವಾಧ್ಯಕ್ಷ ಈ.ಕೆ.ಶಶಿಧರನ್, ಅಧ್ಯಕ್ಷ ಪ್ರಮೋದ್, ಕೊಡಗು ಅಭಿವೃದ್ದಿ ಸಮಿತಿ ಸಂಚಾಲಕ ಪ್ರಸನ್ನ ಭಟ್, ಕನ್ನಂಡ ಸುಧಾ ಬೊಳ್ಳಪ್ಪ, ಕನ್ನಂಡ ವಾಸು ಹಾಗೂ ಸಂಪಿಗೆಕಟ್ಟೆ ಸಾರ್ವಜನಿಕರು ಹಾಜರಿದ್ದರು.