ಕನ್ನಡಪ್ರಭ ವಾರ್ತೆ ಮಡಿಕೇರಿ
ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತು ಚಂಗಪ್ಪನವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಡವರು ಮುಂದೆ ಬಂದರೆ ಮಾತ್ರ ಜನಾಂಗದ ಅಭಿವೃದ್ಧಿ ಸಾಧ್ಯ. ಕೊಡಗಿನ ಹಬ್ಬ ಹರಿದಿನಗಳನ್ನು ಎಲ್ಲರೂ ಒಗ್ಗಟ್ಟಾಗಿ ಆಚರಿಸುವಂತಾಗಬೇಕು, ಕೊಡಗಿನ ಜಾಗವನ್ನು ಮಾರಾಟ ಮಾಡುವುದು ನಿಂತರೆ ಮಾತ್ರ ಕೊಡಗು ಉಳಿಯಲು ಸಾದ್ಯ ಎಂದರು.
ಕಳೆದ ಮಹಾಸಭೆಯ ವರದಿ ಹಾಗೂ ಆಡಳಿತ ಮಂಡಳಿ ವರದಿಯನ್ನು ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ, ಲೆಕ್ಕಪತ್ರ ವರದಿಯನ್ನು ಖಜಾಂಜಿ ಪುತ್ತರಿರ ಗಂಗು ಅಚ್ಚಯ್ಯ ಓದಿ ಅಂಗಿಕರಿಸಲಾಯಿತು.ಬಲ್ಲಾರಂಡ ರಾಜಪ್ಪ ಮೋಟಯ್ಯ, ಮುಳ್ಳಂಡ ಮಾಯಮ್ಮ ತಮ್ಮಯ್ಯ, ಪುತ್ತರಿರ ರಾಬಿನ್ ಚಂಗಪ್ಪ ಅವರನ್ನು ಸಮಾಜದ ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು.
ಸನ್ಮಾನ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಗೆ ಆಯ್ಕೆಯಾದ ಚೆಟ್ಟಳ್ಳಿ ಕೊಡವ ಸಮಾಜದ ಸದಸ್ಯ ಪುತ್ತರಿರ ಪಪ್ಪುತಿಮಯ್ಯ ಅವರನ್ನು ಸಮಾಜವತಿಯಿಂದ ಸನ್ಮಾನಿಲಾಯಿತು. ಸಮಾಜದ ನಿರ್ದೇಶಕ ಬಟ್ಟೀರ ರಕ್ಷು ಕಾಳಪ್ಪ ವಂದಿಸಿದರು.
ಕಾರ್ಯಕ್ರಮದಲ್ಲಿ ಖಜಾಂಜಿ ಪುತ್ತರಿರ ಗಂಗು ಅಚ್ಚಯ್ಯ, ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ, ಜಂಟಿ ಕಾರ್ಯದರ್ಶಿ ಮುಳ್ಳಂಡ ಶೋಭಾಚಂಗಪ್ಪ, ನಿರ್ದೇಶಕರಾದ ಬಿದ್ದಂಡ ಮಾದಯ್ಯ, ಬಟ್ಡೀರ ರಕ್ಷು ಕಾಳಪ್ಪ, ಪುತ್ತರಿರ ಕಾಶಿ ಸುಬ್ಬಯ್ಯ, ಕಡೇಮಡ ವಿನ್ಸಿ ಅಪ್ಪಯ್ಯ, ಅಡಿಕೇರ ಶಾಂತಿ ಜಯ, ಕೆಚ್ಚಟ್ಟೀರ ರತಿ ಕಾರ್ಯಪ್ಪ ಹಾಜರಿದ್ದರು.