ಕನ್ನಡಪ್ರಭ ವಾರ್ತೆ ಮಡಿಕೇರಿ
ಗ್ರಾ.ಪಂ. ಅಧ್ಯಕ್ಷ ಗೋಪಾಲಕೃಷ್ಣ ಕಾರ್ಯಕ್ರಮ ಉದ್ಘಾಟಿಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಉತ್ತಮವಾದ ಕಾರ್ಯಕ್ರಮ ಹಮ್ಮಿಕೊಂಡಿದೆ. ನಮ್ಮ ಆರೋಗ್ಯ ನಮ್ಮ ಕೈನಲ್ಲಿ ಹಿಡಿದಿಟ್ಟುಕೊಳ್ಳುವಂತಹ ಪರಿಸ್ಥಿತಿ ಉಂಟಾಗಿದೆ. ಸಾಧ್ಯವಾದಷ್ಟು ಮನೆಯ ಹಿತ್ತಲಿನಲ್ಲಿ ಬೆಳೆದ ತರಕಾರಿಗಳನ್ನು ಸೇವಿಸೋದು ಉತ್ತಮ ಎಂದರು.
ಇಲಾಖೆ ವತಿಯಿಂದ ದೊರೆಯುವ ಹಲವಾರು ಯೋಜನೆಯ ಕುರಿತು ತಿಳಿದುಕೊಂಡು ಮುಂದಿನ ದಿನಗಳಲ್ಲಿ ಜನರಿಗೆ ಇಂತಹ ಮಾಹಿತಿಯ ಅವಶ್ಯಕತೆ ಇದೆ. ಈ ಕಾರ್ಯಕ್ರಮದ ಮುಖಾಂತರ ಎಲ್ಲ ಜನರ ಮನೆಗಳಿಗೆ ಮಾಹಿತಿ ಪಸರಿಸಲಿ, ಉತ್ತಮ ಸಮಾಜ ನಿರ್ಮಾಣವಾಗಲಿ ಎಂದು ತಿಳಿಸಿದರು.ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸಾವಿತ್ರವ್ವ ಅಧ್ಯಕ್ಷತೆವಹಿಸಿ ಮಾತನಾಡಿ, ಪೋಷಣ್ ಅಭಿಯಾನ ಯೋಜನೆಯು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ಗರ್ಭಿಣಿ, ಬಾಣಂತಿ, ಮಕ್ಕಳ ಅಪೌಷ್ಟಿಕತೆ, ಸಾವಿನ ಪ್ರಮಾಣ ಕಡಿಮೆ ಗೊಳಿಸುವಿಕೆ, ರಕ್ತಹೀನತೆ, ಈ ಕುರಿತಾಗಿ ಜನರಿಗೆ ಜಾಗೃತಿ ಮೂಡಿಸುವುದಾಗಿದೆ. ಒಬ್ಬ ತಾಯಿಯ ಹೆಸರಿನಲ್ಲಿ ಒಂದು ಸಸಿ ನೆಡುವುದರೊಂದಿಗೆ ಎಲ್ಲರೂ ದೇಶಕ್ಕೆ ಸದೃಢ ಮಕ್ಕಳನ್ನು ನೀಡಿ ಎಂಬುದಾಗಿ ಹೇಳಿದರು.
ಊರಿನ ಗರ್ಭಿಣಿ, ಬಾಣಂತಿ, ಮಹಿಳೆಯರು ಗ್ರಾಮಸ್ಥರು, ಗ್ರಾಮದ ವಿ.ಆರ್.ಡಬ್ಲ್ಯೂ ಹಾಜರಿದ್ದರು. ಅಂಗನವಾಡಿ ಕಾರ್ಯಕರ್ತೆಯರು ನಿರೂಪಿಸಿದರು. ಪೂರ್ಣಿಮಾ ಪ್ರಾರ್ಥಿಸಿದರು. ಸವಿತ ವಂದಿಸಿದರು.