
ಕನ್ನಡಪ್ರಭ ವಾರ್ತೆ ತುಮಕೂರು
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ತುಮಕೂರು ಜಿಲ್ಲಾ ಮಡಿವಾಳ ಸಂಘ ತುಮಕೂರು ತಾಲೂಕು ಮಡಿವಾಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವೀರ ಗಣಚಾರಿ ಶ್ರೀಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು,ಹೊಸ ಪೀಳಿಗೆ ಸಂಘಟನೆಯ ಜವಾಬ್ದಾರಿ ಪಡೆದು, ಮತ್ತಷ್ಟು ಬಲಿಷ್ಠವಾಗಿ ಕಟ್ಟುವ ಕೆಲಸ ಮಾಡಬೇಕೆಂದರು.
ಕಾರ್ಯಕ್ರಮ ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ಮಾತನಾಡಿ,ಶರಣರಿಗೆ ಕಾಯಕ ಬಹಳ ಮುಖ್ಯವಾಗಿತ್ತು, ಬಟ್ಟೆ ಮಡಿಮಾಡುವ ಕಾಯಕದ ಜೊತೆಗೆ,ಅನುಭವ ಮಂಟಪ್ಪಕ್ಕೆ ಭದ್ರತೆ ಒದಗಿಸುವ ಗುರುತರ ಜವಾಬ್ದಾರಿಯನ್ನು ತನ್ನ ಬದುಕಿದ್ದ ಕಾಲದವರೆಗೆ ಅತ್ಯಂತ ನಿಷ್ಠೆಯಿಂದ ನಿಭಾಯಿಸಿದವರು ಮಡಿವಾಳ ಮಾಚಿದೇವರು. ಇಂದು ಪರಿಸ್ಥಿತಿ ಬದಲಾಗಿದೆ ಅವಕಾಶಕ್ಕಾಗಿ ದೊಡ್ಡ ಸಮುದಾಯಗಳ ಜೊತೆ ಪೈಪೊಟಿಗೆ ಇಳಿಯಬೇಕಾಗಿದೆ. ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿ, ಅವರನ್ನು ಸಮಾಜದ, ಕುಟುಂಬದ ಆಸ್ತಿಯಾಗಿ ಬೆಳೆಸಿ ಎಂದು ಸಲಹೆ ನೀಡಿದರು.ಮಡಿವಾಳ ಮಾಚಿದೇವರ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ ಗೋವಿಂದರಾಜು, ಅನುಭವ ಮಂಟಪದಲ್ಲಿ ಬಹಳ ಪ್ರಮುಖರಾಗಿದ್ದ ಮಡಿವಾಳ ಮಾಚಿದೇವರು,ವೀರ ಗಣಾಚಾರಿ ಎಂಬ ಬಿರುದು ಪಡೆದವರು. ಅನುಭವ ಮಂಟಪಕ್ಕೆ ಬರುವವನ್ನು ಮೊದಲು ಪರೀಕ್ಷೆಗೆ ಒಳಪಡಿಸುವ ಗುರುತರ ಜವಾಬ್ದಾರಿಯನ್ನು ಪಡೆದು, ಅದನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ್ ಕೆ.ಮಿರ್ಜಿ,ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಸುರೇಶಕುಮಾರ್, ಪಾಲಿಕೆ ಮಾಜಿ ಸದಸ್ಯ ವಿಷ್ಣುವರ್ಧನ್, ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯಕುಮಾರ್,ತುಮಕೂರು ಜಿಲ್ಲಾ ಮಡಿವಾಳ ಸಂಘದ ಜಿಲ್ಲಾಧ್ಯಕ್ಷ ಲಕ್ಷö್ಮಣ್,ಶ್ರೀಮಾಚಿದೇವ್ ಸೌಹಾರ್ಧ ಸಹಕಾರಿ ಸಂಘದ ಅಧ್ಯಕ್ಷ ಶಾಂತಕುಮಾರ್, ಉಪಾಧ್ಯಕ್ಷ ಆರ್.ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ.ವೆಂಕಟರಾಮಯ್ಯ, ತಾಲೂಕು ಮಡಿವಾಳರ ಸಂಘದ ಅಧ್ಯಕ್ಷ ಬಿ.ಕೆಂಪನರಸಯ್ಯ, ಉಪಾಧ್ಯಕ್ಷರಾದ ಕೆ.ಎ.ಗೋವಿಂದರಾಜು,ಉಪಾಧ್ಯಕ್ಷರಾದ ಚಿಕ್ಕಣ್ಣ, ಜಿ.ಆರ್.ಚನ್ನಬಸವಣ್ಣ, ಹೆಚ್.ದೇವೆಂದ್ರಪ್ಪ, ಎಚ್.ಎಂ.ಶ್ರೀನಿವಾಸ್, ಆರ್.ಕೆಂಪರಾಮಯ್ಯ, ಎಂ.ಎ.ಆನಂದಮೂರ್ತಿ, ಶ್ರೀನಿವಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.