ಕನ್ನಡಪ್ರಭ ವಾರ್ತೆ ಲೋಕಾಪುರ
ಪಟ್ಟಣದ ಶಾಂತಿ ಗ್ರ್ಯಾಂಡ್ ಸಭಾಭವನದಲ್ಲಿ ಬುಧವಾರ ಹೋಟೆಲ್, ಬಾರ್, ಬೇಕರಿ ಮಾಲೀಕರ ಒಕ್ಕೂಟದ ಸಹಯೋಗದಲ್ಲಿ ನಡೂರು ಮಂದಾರ್ತಿಯ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಕಲಾವಿದರ ಮಹಾಶಕ್ತಿ ವೀರಭದ್ರ ಯಕ್ಷಗಾನ ಪ್ರದರ್ಶನಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುಣಕರ ಶೇಖರ ಶೆಟ್ಟಿ ಚಾಲನೆ ನೀಡಿದರು.ಉತ್ತರ ಕರ್ನಾಟಕದ ಪಾರಿಜಾತ ಮತ್ತು ದೊಡ್ಡಾಟದಂತೆ ಯಕ್ಷಗಾನ ಕಲಾವಿದರು ಸಂಭಾಷಣೆ, ಸಂಗೀತ ಮತ್ತು ವಿಶೇಷ ಉಡುಗೆ ಮೂಲಕ ಪ್ರೇಕ್ಷಕರ ಮನ ಗೆದ್ದರು.
ಭಾಗವತರಾಗಿ ಸದಾಶಿವ ಅಮೀನ್ ಕೊಕ್ಕರ್ಣಿ, ಗಣೇಶ ಆಚಾರ್ಯ ಬಿಲ್ಲಾಡಿ, ಸ್ತ್ರೀ ಪಾತ್ರದಲ್ಲಿ ದಿನಕರ ಕುಂದರ ನಡೂರ, ನಾಗರಾಜ ದೇವಲ್ಕುಂದ ರಾಕೇಶ ಶೆಟ್ಟಿ, ಮೇಗರವಳ್ಳಿ, ಹಾಸ್ಯ ಪಾತ್ರದಲ್ಲಿ ಸತೀಶಕುಮಾರ ಹಾಲಾಡಿ ಜನರ ಮೆಚ್ಚುಗೆಗೆ ಪಾತ್ರರಾದರು.ಯಕ್ಷಗಾನದ ವಿಶೇಷ ಪಾತ್ರದಲ್ಲಿ ಲೋಹಿರ್ ಕೊಮೆ, ಉಪ್ಪುಂದ ನಾಗೇಂದ್ರರಾವ, ಚಂಡ ಕಿರ್ತಿ ವಿಶ್ವನಾಥ ಹೆನ್ನಾಬೈಲ, ನಾಗಾರ್ಜುನ ಹರೀಶ ಜಪ್ತಿ, ಸತ್ಯಸೇನಾ ರಮೇಶ ವಂಡಾರ್, ಮೇದಾವಿ ರಾಘವೇಂದ್ರ ಉಳ್ಳೂರ, ನಗಾಂಬಿಕೆ ದಿನಕ್ ಕುಂದರ್ ನಡೂರ, ನೈದಿಲೆ ನಾಗರಾಜ ದೇವಾಲುಕುಂದ, ನಾಗಿಣಿ ರಾಕೇಶ ಶೆಟ್ಟಿ ಮೇಗರವಳ್ಳಿ, ಸತೀಶ ಕುಮಾರ ಹಾಲಾಡಿ ಹಾಸ್ಯ ಮನರಂಜಿಸಿತು. ಲೋಹಿತ್ ಕೊಮೆ ಮದ್ದಳೆ ಮತ್ತು ಕುಮಾರ್ ಅಮೀನ್ ಕೊಕ್ಕರ್ಣಿ ಚಂಡೆ ಚೆನ್ನಾಗಿ ನುಡಿಸಿದರು.
ಪ್ರಸಿದ್ಧ ಯಕ್ಷಗಾನ ಕಲಾವಿದ ವೀರಭದ್ರ ನಂದೀಶ ಮೊಗವೀರ ಜನ್ನಾಡಿ ವೀರಭದ್ರ ಪಾತ್ರದಾರಿಯಾಗಿ ಅಭಿನಿಯಸಿದ್ದು, ವೀರಭದ್ರ ಪಾತ್ರ ಸನ್ನಿವೇಶ ಕಂಡು ಪ್ರೇಕ್ಷಕರು ಮೂಕ ವಿಸ್ಮಿತರಾದರು. ಯಕ್ಷಗಾನ ಕಾರ್ಯಕ್ರಮ ಪೌರಾಣಿಕ ಕಥಾಭಾಗವನ್ನು ಪ್ರದರ್ಶಿಸಿ ನೆರೆದಿದ್ದ ನೂರಾರು ಯಕ್ಷಗಾನ ಅಭಿಮಾನಿಗಳಿಗೆ ಮುದ ನೀಡಿದರು.ಹೋಟೆಲ್ ಮತ್ತು ಬೇಕರಿ ಮಾಲೀಕರು, ವೃತ್ತಿ ಬಾಂಧವರು ಪ್ರತಿ ವರ್ಷವೂ ಪಟ್ಟಣದಲ್ಲಿ ಯಕ್ಷಗಾನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ. ರಾತ್ರಿ ಎಲ್ಲ ಪ್ರೇಕ್ಷಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಈ ವೇಳೆ ಉದಯ ಶೆಟ್ಟಿ, ರತ್ನಾಕರ ಶೆಟ್ಟಿ, ಶರತ್ ಶೆಟ್ಟಿ, ಶಾಂತಿ ಗ್ರ್ಯಾಂಡ್ ಹೋಟೆಲ್ ಮಾಲೀಕ ಗುಣಕರಶೇಖರ ಶೆಟ್ಟಿ, ಪ್ರಭಾಕರ ಮೊಗವೀರ, ದಿನೇಶ ದೇವಾಡಿಗ, ಕುಮಾರ ಗಾಣಿಗ, ನಾಗರಾಜ ಶೆಟ್ಟಿ, ನವೀನ ಶೆಟ್ಟಿ, ಸುನೀಲ್ ಶೆಟ್ಟಿ, ಪ್ರದೀಪದ ಶೆಟ್ಟಿ, ವಿಜಯ ಶೆಟ್ಟಿ, ರವಿ ಶೆಟ್ಟಿ, ಅಮರ್ ಶೆಟ್ಟಿ, ಗುರು ಹಾಗೂ ಕೀರ್ತಿರಾಜ ಹೊಟೇಲ್ ಬಾರ್ ಬೇಕರಿ ಮಾಲೀಕರ ಒಕ್ಕೂಟದ ಸರ್ವ ಸದಸ್ಯರು ಇದ್ದರು.