ವಿಜೃಂಭಣೆಯಿಂದ ನಡೆದ ಮಹಾಂಕಾಳೇಶ್ವರಿ ಅಮ್ಮನವರ ಹೂವಿನ‌ ಪಲ್ಲಕ್ಕಿ ಉತ್ಸವ

KannadaprabhaNewsNetwork |  
Published : Nov 19, 2025, 12:30 AM IST
18ಕೆಎಂಎನ್ ಡಿ17 | Kannada Prabha

ಸಾರಾಂಶ

ಉತ್ಸವದ ಹಿನ್ನೆಲೆಯಲ್ಲಿ ದೇಗುಲವನ್ನು ಹೂವಿನ ಹಾಗೂ ದೀಪಾಲಂಕಾರದಿಂದ ಸಿಂಗರಿಸಲಾಗಿತ್ತು. ಬೆಳಗ್ಗೆಯಿಂದ ರಾತ್ರಿವರೆಗೆ ದೇವಿಗೆ ಪೂಜೆ-ಪುನಸ್ಕಾರಗಳು ಜರುಗಿದವು.‌ ಸಾವಿರಾರು ಸಂಖ್ಯೆಯಲ್ಲಿ ವಿವಿಧೆಡೆಗಳಿಂದ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿ ಉತ್ಸವ ವೀಕ್ಷಿಸಿ ಕಣ್ತುಂಬಿಕೊಂಡರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪಟ್ಟಣದ ಶಾಂತಿನಗರದ ಶ್ರೀಮಹಾಂಕಾಳೇಶ್ವರಿ ಅಮ್ಮನವರ 63ನೇ ವರ್ಷದ ಕಾರ್ತಿಕ ಮಾಸದ ಹೂವಿನ‌ ಪಲ್ಲಕ್ಕಿ ಉತ್ಸವ ಬಹಳ ವಿಜೃಂಭಣೆಯಿಂದ ನಡೆಯಿತು.

ಉತ್ಸವದ ಹಿನ್ನೆಲೆಯಲ್ಲಿ ದೇಗುಲವನ್ನು ಹೂವಿನ ಹಾಗೂ ದೀಪಾಲಂಕಾರದಿಂದ ಸಿಂಗರಿಸಲಾಗಿತ್ತು. ಬೆಳಗ್ಗೆಯಿಂದ ರಾತ್ರಿವರೆಗೆ ದೇವಿಗೆ ಪೂಜೆ-ಪುನಸ್ಕಾರಗಳು ಜರುಗಿದವು.‌ ಸಾವಿರಾರು ಸಂಖ್ಯೆಯಲ್ಲಿ ವಿವಿಧೆಡೆಗಳಿಂದ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿ ಉತ್ಸವ ವೀಕ್ಷಿಸಿ ಕಣ್ತುಂಬಿಕೊಂಡರು.

ಹೂವಿನ ಪಲ್ಲಕ್ಕಿ ಉತ್ಸವವು ದೇವಸ್ಥಾನದ ಆವರಣದಿಂದ ಪ್ರಾರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ‌ ಸಂಚರಿಸಿತು. ಈ‌ ವೇಳೆ ಪಟಾಕಿ ಸಿಡಿಸಲಾಯಿತು. ಉತ್ಸವಕ್ಕೆ ವಿವಿಧ ಕಲಾ ಪ್ರಕಾರಗಳು ಮೆರುಗು ತಂದುಕೊಟ್ಟವು.

ಉಸ್ತಾದ್ ಬೋರಲಿಂಗೇಗೌಡರ ಪಟ್ಟ ಉಸ್ತಾದ್ ಬೋರೇಗೌಡರ ತಂಡ ಬೀರಶೆಟ್ಟಹಳ್ಳಿಯಿಂದ ದೊಣ್ಣೆ ವರಸೆ,‌ ಬೆಂಕಿ ಚೆಂಡಿನ ವರಸೆ,‌ ಬಿಜಿಲಿ ವರಸೆ ಸೇರಿದಂತೆ ಇತರೆ ಸಾಹಸಿ ಕಲೆಗಳ ಪ್ರದರ್ಶನವು ಜನರ ಮೆಚ್ಚುಗೆಗೆ ಪಾತ್ರವಾದವು. ಈ ವೇಳೆ ಬೋರೇಗೌಡ, ಪಾರ್ಥಸಾರಥಿ, ಮಹಾಂತೇಶ, ಬೀರಶೆಟ್ಟಹಳ್ಳಿ ಭಾಸ್ಕರ್, ವಿಜೇಂದ್ರ ಸೇರಿದಂತೆ ಹಲವರು ವಿವಿಧ ಕಲಾ ಪ್ರದರ್ಶನ ನೀಡಿದರು.

ದಲಿತ ಹಕ್ಕುಗಳ ಸಮಿತಿ ವತಿಯಿಂದ ಪ್ರತಿಭಟನೆ

ಹಲಗೂರು: ರಾಜ್ಯದ ಪರಿಶಿಷ್ಟ ಸಮುದಾಯದ ಜನರ ಶ್ರೇಯೋಭಿವೃದ್ಧಿಗಾಗಿ ಮೀಸಲಾಗಿದ್ದ ಅನುದಾನವನ್ನು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಸಮರ್ಪಕವಾಗಿ ಬಳಸದೇ ದ್ರೋಹ ಎಸಗಿದೆ ಎಂದು ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಕೃಷ್ಣ ಆರೋಪಿಸಿದರು.

ಎಚ್.ಬಸಾಪುರ ಗ್ರಾಪಂ ಕಚೇರಿ ಎದುರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಮಿತಿಯಿಂದ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಹಿತ್ತಲು ಸಹಿತ ಮನೆ, ಗಂಗಾ ಕಲ್ಯಾಣ ಕೊಳವೆ ಬಾವಿ, ಸ್ಮಶಾನ ಭೂಮಿ ಮತ್ತು ಕಾನೂನಿನ ಅಡಿಯಲ್ಲಿ ಅಸ್ಪೃಶ್ಯತೆ ಆಚರಣೆ ನಿಷೇಧ ಇದ್ದರೂ ಸಹ ಅಸ್ಪೃಶ್ಯರ ಮೇಲಿನ ದೌರ್ಜನ್ಯ ಪ್ರಕರಣಗಳ ಪ್ರಮಾಣ ಪ್ರತಿ ದಿನವೂ ಹೆಚ್ಚಾಗುತ್ತಲೇ ಇವೆ. ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಲು, ತ್ವರಿತ ನ್ಯಾಯಕ್ಕಾಗಿ ಜಿಲ್ಲೆಗೊಂದು ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷೆ ಸುನಂದ, ಖಜಾಂಚಿ ಮಂಜುಳ, ಸದಸ್ಯರಾದ ಜ್ಯೋತಿಮಣಿ, ಸುಶೀಲ, ಅನಿತಾ, ಗೌರಮ್ಮ, ಸವಿತ ಸೇರಿದಂತೆ ಹಲವರು ಭಾಗವಹಿಸಿದ್ದರು.

PREV

Recommended Stories

ಸಹಕಾರ ಸಂಘಗಳಿಂದ ಮಾತ್ರ ರೈತರ ಆರ್ಥಿಕ ಸದೃಢತೆ ಸಾಧ್ಯ: ಶಾಸಕ ಕೆ.ಎಂ.ಉದಯ್
ಸಮಾಜದಲ್ಲಿ ಪೌರಕಾರ್ಮಿಕರ ಸೇವೆ ಅನನ್ಯವಾದುದು: ಜೆ.ಸಿ ಗೀತಾರಾಜಕುಮಾರ್