ಬೇಲೂರು ಚೆಸ್ಕಾಂನಿಂದ ಚೆನ್ನಕೇಶವ ಸ್ವಾಮಿಗೆ ಮಹಾಭಿಷೇಕ

KannadaprabhaNewsNetwork | Published : Mar 13, 2025 12:46 AM

ಸಾರಾಂಶ

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಅಧಿಕಾರಿಗಳು ಹಾಗೂ ನೌಕರರ ವರ್ಗದ ವತಿಯಿಂದ ಶ್ರೀ ಚೆನ್ನಕೇಶವ ಸ್ವಾಮಿಯವರಿಗೆ ಮಹಾಭಿಷೇಕವನ್ನು ಏರ್ಪಡಿಸಲಾಗಿತ್ತು. ಶ್ರೀ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಹಾಗೂ ಕೆಪಿಟಿಸಿಎಲ್‌ಟಿಎಲ್ ಹಾಗೂ ಎಸ್ ಎಸ್ ನೌಕರರು ಗ್ರಾಮ ವಿದ್ಯುತ್ ಪ್ರತಿನಿಧಿಗಳು ಬೇಲೂರು ಉಪ ವಿಭಾಗ ಇವರ ವತಿಯಿಂದ ಶ್ರೀ ಚೆನ್ನಕೇಶವ ಸ್ವಾಮಿಗೆ ವಿಶೇಷ ಪೂಜಾ ಮಹೋತ್ಸವವನ್ನು ಮಹಾಭಿಷೇಕವನ್ನು ನಡೆಸಲಾಗಿದೆ. ಸುಮಾರು 20 ವರ್ಷಗಳಿಂದ ನಾವು ವರ್ಷಕ್ಕೊಮ್ಮೆ ಚೆನ್ನಕೇಶಸ್ವಾಮಿಗೆ ಮಹಾಭಿಷೇಕ ಮಾಡುತ್ತಾ ಬರುತ್ತಿದ್ದು ಯಾವುದೇ ತೊಂದರೆಗಳು ಬಾರದಂತೆ ದೇವರಲ್ಲಿ ಪ್ರಾರ್ಥಿಸಿ, ಪೂಜೆ ಸಲ್ಲಿಸುತ್ತಾ ಬಂದಿದ್ದೇವೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಅಧಿಕಾರಿಗಳು ಹಾಗೂ ನೌಕರರ ವರ್ಗದ ವತಿಯಿಂದ ಶ್ರೀ ಚೆನ್ನಕೇಶವ ಸ್ವಾಮಿಯವರಿಗೆ ಮಹಾಭಿಷೇಕವನ್ನು ಏರ್ಪಡಿಸಲಾಗಿತ್ತು.

ಈ ವೇಳೆ ಮಾತನಾಡಿದ ಎಇಇ ಬಸವರಾಜು, ಶ್ರೀ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಹಾಗೂ ಕೆಪಿಟಿಸಿಎಲ್‌ಟಿಎಲ್ ಹಾಗೂ ಎಸ್ ಎಸ್ ನೌಕರರು ಗ್ರಾಮ ವಿದ್ಯುತ್ ಪ್ರತಿನಿಧಿಗಳು ಬೇಲೂರು ಉಪ ವಿಭಾಗ ಇವರ ವತಿಯಿಂದ ಶ್ರೀ ಚೆನ್ನಕೇಶವ ಸ್ವಾಮಿಗೆ ವಿಶೇಷ ಪೂಜಾ ಮಹೋತ್ಸವವನ್ನು ಮಹಾಭಿಷೇಕವನ್ನು ನಡೆಸಲಾಗಿದೆ. ಸುಮಾರು 20 ವರ್ಷಗಳಿಂದ ನಾವು ವರ್ಷಕ್ಕೊಮ್ಮೆ ಚೆನ್ನಕೇಶಸ್ವಾಮಿಗೆ ಮಹಾಭಿಷೇಕ ಮಾಡುತ್ತಾ ಬರುತ್ತಿದ್ದು ಯಾವುದೇ ತೊಂದರೆಗಳು ಬಾರದಂತೆ ದೇವರಲ್ಲಿ ಪ್ರಾರ್ಥಿಸಿ, ಪೂಜೆ ಸಲ್ಲಿಸುತ್ತಾ ಬಂದಿದ್ದೇವೆ ಎಂದು ತಿಳಿಸಿದರು.

ನಂತರ ಮಾತನಾಡಿದ ಎ ಇ ಯೋಗಾಚಾರ್, ನಮ್ಮ ಕೆಇಬಿ ವತಿಯಿಂದ ಚೆನ್ನಕೇಶವ ಸ್ವಾಮಿಗೆ ಮಹಾಭಿಷೇಕ ನಡೆಸಿ ನಂತರ ಆಂಜನೇಯ ಸ್ವಾಮಿ ಹಾಗೂ ಗಣಪತಿಗೆ ಪೂಜೆ ಸಲ್ಲಿಸುವ ಮೂಲಕ ನಾವು ಈ ಕಾರ್ಯಕ್ರಮವನ್ನು ಹಬ್ಬದ ರೀತಿಯಲ್ಲಿ ಆಚರಿಸುತ್ತ ಬಂದಿದ್ದು, ದೇಶ ಕಾಯುವ ಸೈನಿಕರಂತೆ ಕೆಇಬಿ ಇಲಾಖೆ ನೌಕರರು ಕೂಡ ತಮ್ಮ ಪ್ರಾಣವನ್ನು ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಯಾವುದೇ ರೀತಿಯ ತೊಂದರೆಗಳು ಆಗದಂತೆ ಅವರ ಆರೋಗ್ಯ ಚೆನ್ನಾಗಿರಲಿ ಎಂದು ನಾವು ದೇವರಲ್ಲಿ ಪ್ರಾರ್ಥಿಸಿ, ನಾವು ನಮ್ಮ ಅಧಿಕಾರಿಗಳು ನೌಕರವರ್ಗದವರು ಸ್ವಲ್ಪ ಕೂಡಿಟ್ಟ ಹಣದಿಂದ ಉಳಿತಾಯ ಮಾಡಿ ಈ ಕಾರ್ಯಕ್ರಮ ಮಾಡಲಾಗಿದೆ. ಪೂಜೆಯ ನಂತರ ಭಕ್ತಾದಿಗಳಿಗೆ ದಾಸೋಹ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ನೌಕರ ಸಂಘದ ಪೂಜಾ ಸಮಿತಿಯ ಅಧ್ಯಕ್ಷ ಐ. ಆರ್‌. ಜಗದೀಶ್ ಮಾತನಾಡಿ, ನಮ್ಮ ಇಲಾಖೆ ಕೆಲಸ ತುಂಬಾ ಕಷ್ಟಕರವಾಗಿದ್ದು, ಅಷ್ಟೇ ಜವಾಬ್ದಾರಿಯುತವಾಗಿದೆ. ಕತ್ತಲೆ ಬೆಳಕೆನ್ನದೆ ಕರ್ತವ್ಯ ನಿರ್ವಹಿಸುವ ನಮ್ಮ ಇಲಾಖೆಯ ನೌಕರರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಿದ್ದು ಅವರಿಗೆ ಅವರ ಕುಟುಂಬಕ್ಕೆ ಯಾವುದೇ ತೊಂದರೆ ಆಗಬಾರದು ಎಂದು ನಾವು ಚೆನ್ನಕೇಶವ ದೇವರಲ್ಲಿ ಪ್ರಾರ್ಥಿಸಿ, ವಿಶೇಷ ಪೂಜೆ ಸಲ್ಲಿಸುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ಶಾಖಾಧಿಕಾರಿಗಳು, ನೌಕರ ಸಂಘದ ಸಮಿತಿಯ ಸದಸ್ಯರಾದ ಶಿವಕುಮಾರ್, ಗಂಗಾಧರ್, ರಾಘವೇಂದ್ರ, ಮದನ್, ಶೇಖರ್‌, ಚಂದ್ರಶೇಖರ್‌, ಅನಿಲಕುಮಾರ್, ಶ್ರಿಕಾಂತ್ , ಇತರರು ಹಾಜರಿದ್ದರು.

Share this article