ಮಹಾಲಿಂಗಪುರ ಅರ್ಬನ್ ಬ್ಯಾಂಕಿಗೆ ₹32 ಲಕ್ಷ ನಿವ್ವಳ ಲಾಭ

KannadaprabhaNewsNetwork | Published : Sep 24, 2024 1:47 AM

ಸಾರಾಂಶ

ಸದಾ ರೈತರ, ವ್ಯಾಪಾರಸ್ಥರು ಮತ್ತು ಗ್ರಾಹಕರ ಹಿತ ಮತ್ತು ಅಭಿವೃದ್ಧಿಗೆ ಶ್ರಮಿಸುತ್ತಿರುವ ಬ್ಯಾಂಕ್‌ ಕಳೆದ 2023-24ನೇ ಸಾಲಿನ ಹಣಕಾಸಿನ ವರ್ಷದ ಅಂತ್ಯಕ್ಕೆ 2024ರ ಮಾರ್ಚ್‌ 31ಕ್ಕೆ ₹32,39,700 ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಶೇಖರ ಅಂಗಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಸದಾ ರೈತರ, ವ್ಯಾಪಾರಸ್ಥರು ಮತ್ತು ಗ್ರಾಹಕರ ಹಿತ ಮತ್ತು ಅಭಿವೃದ್ಧಿಗೆ ಶ್ರಮಿಸುತ್ತಿರುವ ಬ್ಯಾಂಕ್‌ ಕಳೆದ 2023-24ನೇ ಸಾಲಿನ ಹಣಕಾಸಿನ ವರ್ಷದ ಅಂತ್ಯಕ್ಕೆ 2024ರ ಮಾರ್ಚ್‌ 31ಕ್ಕೆ ₹32,39,700 ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಶೇಖರ ಅಂಗಡಿ ಹೇಳಿದರು.

ಪಟ್ಟಣದ ಬನಶಂಕರಿ ದೇವಿ ಸಂಸ್ಕೃತಿ ಭವನದಲ್ಲಿ ಭಾನುವಾರ ಜರುಗಿದ ಅರ್ಬನ್ ಬ್ಯಾಂಕಿನ 46ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸಕ್ತ ವರ್ಷ ಸುಮಾರು ₹19 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ಸುಮಾರು ₹7.78 ಕೋಟಿ ಸಾಲ ವಿತರಿಸಲಾಗಿದೆ. ಈ ಹಣಕಾಸು ವರ್ಷದ ಅಂತ್ಯಕ್ಕೆ 31/3/24 ಕ್ಕೆ ಬ್ಯಾಂಕು 4904 ಸದಸ್ಯ ಷೇರುದಾರರನ್ನು ಹೊಂದಿದ್ದು, ಒಟ್ಟು ಷೇರು ಬಂಡವಾಳವು ₹55.33 ಲಕ್ಷ ಇರುತ್ತದೆ. ಇದೆ ಅವಧಿಯಲ್ಲಿ ಒಟ್ಟು ಠೇವಣಿ ₹10.81 ಕೋಟಿ ಇದ್ದು, ಅದನ್ನು ಹೆಚ್ಚಿಸಲು ಸೂಕ್ತಕ್ರಮ ಕೈಕೊಳ್ಳಲಾಗುವುದು. 2023-24ನೇ ಸಾಲಿನ ಲೆಕ್ಕಪರಿಶೋಧನೆಯನ್ನು ಭಾರತೀಯ ರಿಜರ್ವ್‌ ಬ್ಯಾಂಕ್‌ ನೇಮಕ ಮಾಡಿದ ಮೇ.ಬಿ.ಆರ್ ಆ್ಯಂಡ್‌ ಕಂಪನಿ ಬೆಳಗಾವಿ ಅವರು ಸದರಿ ಸಾಲಿನ ಲೆಕ್ಕ ಪರಿಶೋಧನೆ ಮಾಡಿ ಸೂಕ್ತ ಸಲಹೆಗಳನ್ನು ನೀಡಿದ್ದು, ಬ್ಯಾಂಕ್‌ ಪ್ರಸಕ್ತ ಸಾಲಿನಲ್ಲಿ ಬಿ ವರ್ಗೀಕೃತವಾಗಿದೆ ಎಂದು ತಿಳಿಸಿದರು.ಬ್ಯಾಂಕಿನ ನಿರ್ದೇಶಕ ಮಹಾದೇವ ಮಾರಾಪುರ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ಥಳೀಯ ಬ್ಯಾಂಕುಗಳು ಜನರ ಜೀವನಾಡಿಗಳಿದಂತೆ. ಬ್ಯಾಂಕುಗಳು ಬೆಳೆದರೇ ಮಾತ್ರ ಏಳಿಗೆ ಸಾಧ್ಯ. ಅದರ ಪೂರಕವಾಗಿ ಗ್ರಾಹಕರು ಮತ್ತು ಸಿಬ್ಬಂದಿ ಸಹಕಾರ ಬಹಳ ಮುಖ್ಯ. ನಾವು ಸಲ್ಲಿಸುವ ಅತ್ಯುತ್ತಮ ಸೇವೆ ಗ್ರಾಹಕರ ಮನಸು ಗೆಲ್ಲಲ್ಲು ಸಾಧ್ಯ. ಹೆಚ್ಚಿನ ಸಂಖ್ಯೆಯಲ್ಲಿ ವ್ಯವಹಾರ ನಮ್ಮ ಬ್ಯಾಂಕಿನೊಂದಿಗೆ ಮಾಡುವ ಮೂಲಕ ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.ಈ ಸಂದರ್ಭದಲ್ಲಿ ಬಿ.ಎಂ.ಕುರಿ, ಪ್ರಮೋದ ಹಾಸಿಲಕರ, ಶಿರೋಳ ತಮ್ಮ ಅನಿಸಿಕೆ ಹಂಚಿಕೊಂಡರು.ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಯಲ್ಲಣ್ಣಗೌಡ ಪಾಟೀಲ, ಉಪಾಧ್ಯಕ್ಷ ಶೀಲಾ ಭಾವಿಕಟ್ಟಿ, ಬ್ಯಾಂಕಿನ ಉಪಾಧ್ಯಕ್ಷ ಗಿರಮಲ್ಲಪ್ಪ ರಾ.ಕಬಾಡಿ ನಿರ್ದೇಶಕ ಮಹಾಲಿಂಗಪ್ಪ ಕೋಳಿಗುಡ್ಡ, ಗುರುಪಾದ ಅಂಬಿ, ಫಕೃದ್ದಿನ್‌ ಕುಂಟೋಜಿ, ವೀರೂಪಾಕ್ಷಯ್ಯ ಪಂಚಕಟ್ಟಿಮಠ, ಅಶೋಕ ಜ.ಅಂಗಡಿ, ಶ್ರೀಶೈಲ ಹಿಪ್ಪರಗಿ, ಹೊಳೆಪ್ಪ ಬಾಡಗಿ, ಅಕ್ಷತಾ ಹಲಗತ್ತಿ, ಲಕ್ಷ್ಮೀ ಡಿನ್ನಮನಿ, ಕಾನೂನು ಸಲಹೆಗಾರರಾದ ಎಂ.ಬಿ.ಬಡಿಗೇರ, ಧರೆಪ್ಪ ಸಾಂಗ್ಲಿಕರ, ವೆಂಕಣ್ಣ ಗುಂಡಾ, ದುಂಡಪ್ಪ ಜಾಧವ, ಈಶ್ವರ ಮುರಗೋಡ, ಬಸಪ್ಪ ಕೊಪ್ಪದ, ಬಿ.ಡಿ.ಸೋರಗಾಂವಿ, ಮಹಾಲಿಂಗಪ್ಪ ಲಾತುರ, ಗುರುಲಿಂಗಯ್ಯ ಮಠಪತಿ, ಮಾನಿಂಗ ಸನದಿ, ಈರಣ್ಣ ಹಲಗತ್ತಿ, ರಾಜೇಶ ಭಾವಿಕಟ್ಟಿ, ಶ್ರೀಶೈಲಪ್ಪ ಉಳ್ಳೆಗಡ್ಡಿ, ಬಸವರಾಜ ಸುನಧೋಳಿ, ಮುತ್ತಪ್ಪ ಹುಕ್ಕೇರಿ, ಹಣಮಂತ ಮೇಟಿ, ಮಹೇಶ ಮುಕುಂದ, ಅಶೋಕ ಬ.ಅಂಗಡಿ, ಶಿವಾನಂದ ಹುದ್ದಾರ, ಶುಭಾಶ ಭಾವಿಕಟ್ಟಿ, ಈರಪ್ಪ ಜಿಡ್ಡಿಮನಿ, ಗೊಲೇಶ ಅಮ್ಮನಗಿ, ಬಾಬುರಾವ ಅಂಬಲಝರಿ, ಬಂದು ಪಕಾಲಿ, ಮಹಾದೇವ ಕೋಳಿಗುಡ್ಡ, ಪ್ರಧಾನ ವ್ಯವಸ್ಥಾಪಕ ಎಸ್.ಎಂ.ಗುಣದಾಳ ಹಾಗೂ ಎಲ್ಲ ಸಿಬ್ಬಂದಿ ವರ್ಗ ಸೇರಿ ಹಲವರು ಇದ್ದರು. ನರನಗೌಡ ಉತ್ತಂಗಿ ನಿರೂಪಿಸಿ, ವಂದಿಸಿದರು.ಷೇರುದಾರರು ಬ್ಯಾಂಕಿಗೆ ಆಧಾರ ಸ್ಥಂಬಗಳಿದ್ದಂತೆ. ಅವರೇ ಬ್ಯಾಂಕಿನ ಜೀವಾಳ. ಹಣ ಗಳಿಕೆ ಮಾಡುವವರು ಠೇವಣಿ ಇಡುವುದು ಮತ್ತು ಹಣದ ಅವಶ್ಯಕತೆಯಿದ್ದವರು ಸಾಲ ಪಡೆದು ಸಕಾಲದಲ್ಲಿ ಪಾವತಿಸುತ್ತ ಬ್ಯಾಂಕ್‌ನ್ನು ಆರ್ಥಿಕವಾಗಿ ಸದೃಢಗೊಳಿಸಬೇಕು.

-ಶೇಖರ ಅಂಗಡಿ, ಮಹಾಲಿಂಗಪುರ ಅರ್ಬನ್ ಬ್ಯಾಂಕಿನ ಅಧ್ಯಕ್ಷರು.

Share this article