ಮೈಸೂರಿನ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಭಾನುವಾರ ನಡೆದ ಶ್ರೀ ಕೃಷ್ಣರಾಜೇಂದ್ರ ಸಹಕಾರ ಬ್ಯಾಂಕಿನ ಸರ್ವ ಸದಸ್ಯರ ಸಭೆಯಲ್ಲಿ ಹಿರಿಯ ಸಹಕಾರಿಗಳನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಪ್ರತಿಷ್ಠಿತ ಸಹಕಾರ ಬ್ಯಾಂಕ್‌ಗಳಲ್ಲಿ ಒಂದಾದ ಶ್ರೀ ಕೃಷ್ಣರಾಜೇಂದ್ರ ಸಹಕಾರ ಬ್ಯಾಂಕ್ ನಿಯಮಿತದ 101ನೇ ಸರ್ವ ಸದಸ್ಯರ ಸಭೆಯು ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಭಾನುವಾರ ಜರುಗಿತು.ಈ ವೇಳೆ ಸನ್ಮಾನ ಸ್ವೀಕರಿಸಿ ವಿಧಾನ ಪರಿಷತ್ ಸದಸ್ಯ ಆರ್. ರಘು ಮಾತನಾಡಿ, ಶ್ರೀ ಕೃಷ್ಣರಾಜೇಂದ್ರ ಸಹಕಾರ ಬ್ಯಾಂಕ್ ನೂರಕ್ಕೂ ಹೆಚ್ಚು ವರ್ಷಗಳ ಸುದೀರ್ಘ ಹಾಗೂ ಯಶಸ್ವಿ ಇತಿಹಾಸವನ್ನು ಹೊಂದಿದ್ದು, ಸಹಕಾರ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗ್ರಾಹಕರಿಗೆ ಮತ್ತು ಸದಸ್ಯರಿಗೆ ಅತ್ಯುತ್ತಮ ಸೇವೆ ನೀಡುತ್ತಿರುವ, ಈ ಸಂಸ್ಥೆಯು ಮುಂದೆಯೂ ಸಹ ಹತ್ತಾರು ಜನಪರ ಕಾರ್ಯಗಳನ್ನು ಕೈಗೊಳ್ಳಲಿ ಎಂದು ಶುಭ ಹಾರೈಸಿದರು.
ವಿಧಾನ ಪರಿಷತ್ ಸದಸ್ಯ ಕೆ. ಶಿವಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ಅಧ್ಯಕ್ಷತೆ ವಹಿಸಿದ್ದರು. ಬ್ಯಾಂಕಿನ ಅಧ್ಯಕ್ಷ ಡಿ. ಬಸವರಾಜು ಬಸಪ್ಪ, ಉಪಾಧ್ಯಕ್ಷೆ ಎಚ್.ಎನ್. ಸರ್ವಮಂಗಳಾ, ನಿರ್ದೇಶಕರಾದ ನಂ. ಸಿದ್ದಪ್ಪ, ಜಿ.ಎಂ. ಪಂಚಾಕ್ಷರಿ, ಎಚ್.ವಿ. ಭಾಸ್ಕರ್, ಎಂ.ಡಿ. ಪಾರ್ಥಸಾರಥಿ, ಪ್ರತಿಧ್ವನಿ ಪ್ರಸಾದ್, ತಾಯೂರು ಗಣೇಶಮೂರ್ತಿ, ಬಿ ನಾಗಜ್ಯೋತಿ ಪ್ರತಿಧ್ವನಿ ಪ್ರಸಾದ್, ಎಂ.ಎಸ್. ನವೀನ್ ಕುಮಾರ್, ಎಂ.ಎಸ್. ಅರುಣ್ ಸಿದ್ದಪ್ಪ, ಎಚ್. ವಾಸು, ಎಂ. ಶಿವಪ್ರಕಾಶ್, ವೃತ್ತಿಪರ ನಿರ್ದೇಶಕರಾದ ಎಚ್.ಕೆ. ಅನಂತ, ವಿ. ಶ್ರೀನಿವಾಸ ಶೆಟ್ಟಿ, ಪ್ರಭಾರ ವ್ಯವಸ್ಥಾಪಕಿ ಶಾಂತಲಾ, ಎಸ್.ಬಿ. ನಾಗಬಸವಣ್ಣ, ಆರ್. ಎಂ. ವಿಜಯಕುಮಾರ್ ಮೊದಲಾದವರು ಭಾಗವಹಿಸಿದ್ದರು.
ಎಸ್. ಆದಿಶೇಷ, ಎಸ್. ಹೊಂಬಯ್ಯ, ಗೌರಮ್ಮ, ಎಚ್.ಎನ್. ಶ್ರೀಧರ್, ಎಂ.ಎಸ್. ಮಲ್ಲಿಕಾರ್ಜುನ, ನಾಗರಾಜು, ಎಸ್. ತುಂಗಾದೇವಿ,ಜಿ.ಎಸ್. ಭೋಗಾನಂದೀಶ್, ಎಂ. ಗುರುಮಲ್ಲು, ಸದ್ಗುರುಮೂರ್ತಿ, ಎಂ. ಮಾದೇಗೌಡ, ಎಸ್.ಟಿ. ಜಯಲಕ್ಷ್ಮಿ, ಮಹದೇವಮ್ಮ, ಎಚ್.ಎ. ನಂಜುಂಡಸ್ವಾಮಿ, ಎಂ.ಎನ್. ಶಿವಕುಮಾರಸ್ವಾಮಿ, ಶಿವನಂಜಯ್ಯ, ಕೆ,.ವಿ. ಶಿವಕುಮಾರ್, ಎಂ. ಉಷಾ, ಎಂ. ಮಹಾಲಕ್ಷ್ಮಿ ಹಾಗೂ ಆರ್. ಉಮೇಶ್ ಅವರಿಗೆ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಡಿಆರ್‌ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಹಕಾರದೊಂದಿಗೆ ಬ್ಯಾಂಕಿನ ಸದಸ್ಯರಿಗೆ ಉಚಿತವಾಗಿ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. ಸಾಮಾನ್ಯ ರೋಗ, ಕೀಲು ಹಾಗೂ ಮೂಳೆ ತಪಾಸಣೆ ನಡೆಸಲಾಯಿತು. ಇದಲ್ಲದೇ ಅನ್ನಪೂರ್ಣ ಕಣ್ಣಿನ ಆಸ್ಪತ್ರೆ ಸಹಕಾರದೊಂದಿಗೆ ಉಚಿತವಾಗಿ ಆರೋಗ್ಯ, ರಕ್ತಪರೀಕ್ಷೆ, ರಕ್ತದಾನ ಹಾಗೂ ಕಣ್ಣಿನ ತಪಾಸಣಾ ಶಿಬಿರ ನಡೆಸಲಾಯಿತು.