ಖ್ಯಾತ ಉದ್ಯಮಿಯಾಗಿದ್ದ ಕರ್ಮಯೋಗಿ ಎಸ್ ಎಸ್ ಪಾಟೀಲರ 4 ನೇ ಪುಣ್ಯಸ್ಮರಣೋತ್ಸವ ಹಾಗೂ ಕರ್ಮಯೋಗಿ ಪುರಸ್ಕಾರ ಪ್ರದಾನ ಸಮಾರಂಭ ಕಲಬುರಗಿಯ ಸೇಡಂ ರಸ್ತೆಯಲ್ಲಿರುವ ರಾಂಪೂರೆ ವೈದ್ಯ ವಿದ್ಯಾಲಯದ ಸ್ಯಾಕ್ ಸಭಾಂಗಣದಲ್ಲಿ ಭಾನುವಾರ ಅದ್ಧೂರಿಯಾಗಿ ನಡೆಯಿತು.
ಕನ್ನಡಪ್ರಭ ವಾರ್ತೆ ಕಲಬುರಗಿಖ್ಯಾತ ಉದ್ಯಮಿಯಾಗಿದ್ದ ಕರ್ಮಯೋಗಿ ಎಸ್ ಎಸ್ ಪಾಟೀಲರ 4 ನೇ ಪುಣ್ಯಸ್ಮರಣೋತ್ಸವ ಹಾಗೂ ಕರ್ಮಯೋಗಿ ಪುರಸ್ಕಾರ ಪ್ರದಾನ ಸಮಾರಂಭ ಕಲಬುರಗಿಯ ಸೇಡಂ ರಸ್ತೆಯಲ್ಲಿರುವ ರಾಂಪೂರೆ ವೈದ್ಯ ವಿದ್ಯಾಲಯದ ಸ್ಯಾಕ್ ಸಭಾಂಗಣದಲ್ಲಿ ಭಾನುವಾರ ಅದ್ಧೂರಿಯಾಗಿ ನಡೆಯಿತು.ಸಮಾರಂಭದಲ್ಲಿ ಪಾಟೀಲರ ಸ್ಮರಣಾರ್ಥ ಶಿಕ್ಷಣ ರಂಗದ ಸಾಧನೆಗಾಗಿ ಚೆನ್ನವೀರ ಶಿವಾಚಾರ್ಯರು ಹಾರಕೂಡ್, ಸಮಾಜ ಸೇವೆಗಾಗಿ ಡಾ. ವಿಲಾಸವತಿ ಖೂಬಾ, ಸಹಿತ್ಯ ರಂಗದಲ್ಲಿ ಏಕೆ ರಾಮೇಶ್ವರ, ಸಂಗೀತದಲ್ಲಿ ಫಕಿರೇಶ ಕಣವಿ, ಆರೋಗ್ಯ ರಂಗದಲ್ಲಿ ಡಾ.ಶೇಖರ ಪಾಟೀಲ್, ಉದ್ಯಮ ರಂಗದ ಸಾಧನೆಗೆ ಡಾ. ಸಂಜೀವ ಗುಪ್ತಾ, ವಾಣಿಜ್ಯೋದ್ಯಮ ರಂಗದಲ್ಲಿನ ಸಾಧನೆಗೆ ರಾಹುಲ ಕುಮಾರ್ ಬಲ್ದೋಟಾ, ಉದ್ಯಮ ರಂಗದಲ್ಲಿ ಪ್ರೀತಮ ಮೇಹ್ತಾ ಅವರಿಗೆ ಕರ್ಮಯೋಗಿ ಪುರಸ್ಕಾರ ಪ್ರದಾನ ಮಾಡಲಾಯ್ತು.ಸರಡಗಿ ಶಕ್ತಿ ಪೀಠದ ಅಪ್ಪಾರಾವ ಮುತ್ಯಾ ಅವರು, ಪಾಟೀಲ್ ಪ್ರತಿಷ್ಠಾನದ ಮುಖ್ಯಸ್ಥರಾದ ನಾಡೋಜ ಡಾ. ಮನು ಬಳಗಾರ್ ಮಾತನಾಡಿ, ಪಾಟೀಲರು ಕರ್ಮಯೋಗಿಯಗಿದ್ದರು, ಖುದ್ದು ಉದ್ಯಮಿಯಾಗಿದ್ದು, ಕಲಬುರಗಿ ಪ್ರಗತಿಗೆ ಮುನ್ನುಡಿ ಬರೆದವರು. ಅವರ ಸ್ಮರಣೆಯನ್ನು ಇತರ ಸಾಧಕರಿಗೆ ಪ್ರೋತ್ಸಾಹಿಸುವ ಮೂಲಕ ಸ್ಮರಿಸುವ ಪರಿವಾರದ ಇಚ್ಚೆ ಶ್ಲಾಘನೀಯ ಎಂದರು. ಡಾ. ಮನು ಬಳಗಾರ್ ಅಧ್ಯಕ್ಷತೆ ವಹಿಸಲಿರುವ ಸಮಾರಂಭದಲ್ಲಿ ಗೌರವ ಅಧ್ಯಕ್ಷರಾಗಿ ಸರೋಜಿನಿ ದೇವಿ ಪಾಟೀಲ್, ಪಾಟೀಲ್ ಗ್ರುಪ್‌ನ ಲಿಂಗರಾಜ ಪಾಟೀಲ್, ಬಸವಂತಕುಮಾರ ಪಾಟೀಲ್, ರೇವಣಸಿದ್ದ ಪಾಟೀಲ್, ಸಿದ್ದಲಿಂಗ ಪಾಟೀಲ್ ಉಪಸ್ಥಿತರಿದ್ದರು.