ಉತ್ತರಾಧಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಗಳ ಗುರುಗಳ ಆಜ್ಞೆ ಅನುಸಾರ ಲೋಕ ಕಲ್ಯಾಣಕ್ಕಾಗಿ ಮತ್ತು ಶ್ರೀ ಗುರುರಾಯರ ಆರಾಧನಾ ಮಹೋತ್ಸವದ ಅಂಗವಾಗಿ ಇಂದು ನಗರದ ಜೇವರ್ಗಿ ಕಾಲೋನಿಯಲ್ಲಿರುವ ರಾಘವೇಂದ್ರ ಸ್ವಾಮಿಗಳ ಮಠದ ಅಂಗಳದಲ್ಲಿ ಗಾಯತ್ರಿ ಯುವಕ ಸಂಘದವರು ಹಮ್ಮಿಕೊಂಡಿದ್ದ ಲಕ್ಷ ಗಾಯತ್ರಿ ಜಪ ಯಶಸ್ವಿಯಾಗಿ ಸಂಪನ್ನಗೊಂಡಿತು.

ಕನ್ನಡಪ್ರಭ ವಾರ್ತೆ ಕಲಬುರಗಿಉತ್ತರಾಧಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಗಳ ಗುರುಗಳ ಆಜ್ಞೆ ಅನುಸಾರ ಲೋಕ ಕಲ್ಯಾಣಕ್ಕಾಗಿ ಮತ್ತು ಶ್ರೀ ಗುರುರಾಯರ ಆರಾಧನಾ ಮಹೋತ್ಸವದ ಅಂಗವಾಗಿ ಇಂದು ನಗರದ ಜೇವರ್ಗಿ ಕಾಲೋನಿಯಲ್ಲಿರುವ ರಾಘವೇಂದ್ರ ಸ್ವಾಮಿಗಳ ಮಠದ ಅಂಗಳದಲ್ಲಿ ಗಾಯತ್ರಿ ಯುವಕ ಸಂಘದವರು ಹಮ್ಮಿಕೊಂಡಿದ್ದ ಲಕ್ಷ ಗಾಯತ್ರಿ ಜಪ ಯಶಸ್ವಿಯಾಗಿ ಸಂಪನ್ನಗೊಂಡಿತು.ಬೆಳಗ್ಗೆ 8 ಗಂಟೆಗೆ ಶುರುವಾದ ಜಪದಲ್ಲಿ 352 ಜನ ಹಿರಿಯರು, ಯುವಕರು, ಕಿರಿಯರು ಪಾಲ್ಗೊಂಡು 4,00,703 ಬಾರಿ ಗಾಯತ್ರಿ ಮಂತ್ರ ಜಪಿಸಿದರು. ಪಾಲ್ಗೊಂಡವರಲ್ಲಿ ಒಬ್ಬೊಬ್ಬರೇ ಸುಮಾರು 5, 500 ತನಕ ಜಪ ಮಾಡಿ ಗಮನ ಸೆಳೆದರು. ಸಮಾರಂಭದಲ್ಲಿ ಉತ್ತರಾದಿ ಮಠಾಧಿಕಾರಿಗಳಾದ ರಾಮಾಚಾರ್ಯ ಘಂಟಿ, ಪಂಡಿತರಾದ ಗುರುಮಧ್ವಾಚಾರ್ಯ ನವಲಿ, ಗಿರೀಶಾಚಾರ್ಯ ಅವಧಾನಿ, ಜೇವರ್ಗಿ ಕಾಲೋನಿ ರಾಘವೇಂದ್ರ ಸ್ವಾಮಿಗಳ ಮಠದ ಅಧ್ಯಕ್ಷರಾದ ವಾಸುದೇವ ಮುಂಡರಗಿ, ಗಾಯತ್ರಿ ಯುವಕ ಸಂಘದ ಎಲ್ಲಾ ಪದಾಧಿಕಾರಿಗಳು , ಸದ್ಭಕ್ತರು ಇಂದಿನ ಶುಭದಿನ ಬಂದು ಈ ಜಪದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.