ಪ್ರಜಾಪ್ರಭುತ್ವ, ಬಸವ ತತ್ವದಲ್ಲಿ ನಂಬಿಕೆ ಇಟ್ಟುಕೊಂಡ ನಾವು ಸದಾ ಶಾಂತಿ ಹಾಗೂ ಸರ್ವರ ಕಲ್ಯಾಣ ಬಯಸುವವರು, ಆದರೆ ರಂಜೋಳ ಗ್ರಾಮದಲ್ಲಿ ಕೆಲವರು ಧಾರ್ಮಿಕ ಸಂಭ್ರಮವನ್ನು ಸಹಿಸದೆ ಅಶಾಂತಿ ಉಂಟು ಮಾಡಲು ಯತ್ನಿಸಿದ್ದಾರೆ. ಇಂತಹ ಗೂಂಡಾಗಿರಿ ಎಂದಿಗೂ ಸಹಿಸುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಖಾತೆ ಸಚಿವ, ಸೇಡಂ ಶಾಸಕ ಡಾ. ಶರಣಪ್ರಕಾಶ ಪಾಟೀಲ್‌ ತಮ್ಮ ರಾಜಕೀಯ ವಿರೋಧಿಗಳಿಗೆ ಖಡರ್‌ ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಪ್ರಜಾಪ್ರಭುತ್ವ, ಬಸವ ತತ್ವದಲ್ಲಿ ನಂಬಿಕೆ ಇಟ್ಟುಕೊಂಡ ನಾವು ಸದಾ ಶಾಂತಿ ಹಾಗೂ ಸರ್ವರ ಕಲ್ಯಾಣ ಬಯಸುವವರು, ಆದರೆ ರಂಜೋಳ ಗ್ರಾಮದಲ್ಲಿ ಕೆಲವರು ಧಾರ್ಮಿಕ ಸಂಭ್ರಮವನ್ನು ಸಹಿಸದೆ ಅಶಾಂತಿ ಉಂಟು ಮಾಡಲು ಯತ್ನಿಸಿದ್ದಾರೆ. ಇಂತಹ ಗೂಂಡಾಗಿರಿ ಎಂದಿಗೂ ಸಹಿಸುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಖಾತೆ ಸಚಿವ, ಸೇಡಂ ಶಾಸಕ ಡಾ. ಶರಣಪ್ರಕಾಶ ಪಾಟೀಲ್‌ ತಮ್ಮ ರಾಜಕೀಯ ವಿರೋಧಿಗಳಿಗೆ ಖಡರ್‌ ಎಚ್ಚರಿಕೆ ನೀಡಿದ್ದಾರೆ.ಸೇಡಂ ತಾಲೂಕಿನ ರಂಜೋಳ ಗ್ರಾಮದ ವೀರಾಂಜನೆಯ ದೇವಸ್ಥಾನ ಕಾರ್ಯಕ್ರಮದಲ್ಲಿ ಗೂಂಡಾಗಿರಿ ಮಾಡಿರುವುದು ಖಂಡನೀಯ, ಸೇಡಂ ತಾಲೂಕಿನ ನಾನು ಶಾಸಕನಾಗಿರುವವರೆಗೂ ಗೂಂಡಾಗಿರಿ ನಡೆಯುವುದಿಲ್ಲ, ಸಮಯ ಬಂದಲ್ಲಿ ಕಾನೂನು ಕ್ರಮ ನಿಶ್ಚಿತ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಎಚ್ಚರಿಕೆ ನೀಡಿದರು.ಸೇಡಂ ತಾಲೂಕಿನ ರಂಜೋಳ ಗ್ರಾಮದಲ್ಲಿ ಶ್ರೀ ವೀರಾಂಜನೇಯ ದೇವಸ್ಥಾನ ಹಾಗೂ 9 ಗ್ರಾಮ ದೇವತೆಗಳ ದೇವಸ್ಥಾನ ಉದ್ಘಾಟನೆ ಸಮಾರಂಭ ವೇದಿಕೆಯಲ್ಲಿ ಮಾತನಾಡಿದ ಅವರು, ರಂಜೋಳ ಗ್ರಾಮದ ಜನರು ಶಾಂತಿಪ್ರೀಯರ ಎಂಬುದು 2 ದಿನದ ಹಿಂದಿನ ಘಟನೆಯಿಂದ ತೋರಿಸಿಕೊಟ್ಟಿದ್ದಕ್ಕೆ ಆಭಾರಿಯಾಗಿದ್ದೇನೆ. ನಾವು ಅಧಿಕಾರದಲ್ಲಿದ್ದೇವೆ. ಆತುರ ಮಾಡಬಾರದು ಎಂದು ಸುಮ್ಮನಿದ್ದೇವೆ. ಪರಿಸ್ಥಿತಿ ಮೀರಿದರೆ ಕಾನೂನು ಕ್ರಮ ನಿಶ್ಚಿತ ಎಂದರು.ರಂಜೋಳ ಗ್ರಾಮದ ಮುಖಂಡ ಸತೀಶರೆಡ್ಡಿ ಮಾತನಾಡಿ, ಸಜ್ಜನ ಹಾಗೂ ಒಳ್ಳೆಯ ವ್ಯಕ್ತಿಡಾ. ಶರಣಪ್ರಕಾಶ ಪಾಟೀಲರು ಸೇಡಂ ಕ್ಷೇತ್ರಕ್ಕೆ ಬೇಕು ಎಂದು ಅವರೊಟ್ಟಿಗೆ ಇರುವೆ ಎಂದರು.

ಗುರುಮಠಕಲ್ ಶಾಖಾ ಮಠದ ಶ್ರೀಗಳು, ಗೌಡನಳ್ಳಿ ಶ್ರೀಗಳು, ಶರಣು ಬಿ ಗದ್ದುಗೆ ಸೇರಿದಂತೆ ಮುಖಂಡರಾದ ಬಸವರಾಜ ಪಾಟೀಲ, ರಾಜೂಗೌಡ ಬೆನಕಳ್ಳಿ, ರವಿ ಸಾಹುಕಾರ್ ತಂಬಾಕೆ, ನಾರಾಯಣರೆಡ್ಡಿ ರಂಜೋಳ, ರಶೀದ್ ರಂಜೋಳ, ರಾಜು ಬಳಗಾರ, ನರಸಿಂಹರೆಡ್ಡಿ, ವಿರೇಂದ್ರ ರುದ್ನೂರು, ರಾಮಯ್ಯ ಪೂಜಾರಿ, ಸತೀಶ್ ಪೂಜಾರಿ, ಉಮಾರೆಡ್ಡಿ ಹಂದರಕಿ ಇದ್ದರು.

ರಂಜೋಳ ಗ್ರಾಮದ ಧಾರ್ಮಿಕ ಸಮಾರಂಭವನ್ನು ಊರಿನ ಜನರೆಲ್ಲರೂ ಸೇರಿ ಮಾಡುವಾಗ ವಿರೋಧಿಗಳು ನುಗ್ಗಿ ತೊಂದರೆ ಕೊಡುವುದು ಸರಿಯಾದ ನಡೆ ಅಲ್ಲ. ನಾವು ಮನಸ್ಸು ಮಾಡಿದರೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬಹುದಿತ್ತು. ಆದರೆ ನಾವು ಆ ರೀತಿ ಮಾಡಲ್ಲ, ಮಾಡೋದು ಇಲ್ಲ, ನಾನು ಸಹ ಹಿಂದೆ ಸೋತಾಗ ಕಾರ್ಯಕ್ರಮಗಳಲ್ಲಿ ಯಾಕೆ ಹೆಸರು ಹಾಕಿಲ್ಲ ಎಂದು ಜಗಳ ಆಡಿಲ್ಲ, ಆದರೆ ಇವರು ಸಣ್ಣ ವಿಷಯಕ್ಕೂ ರಂಪಾಟ ಮಾಡುವುದು ಸರಿಯಾದ ಬೆಳವಣಿಗೆಯಲ್ಲ, ಸುಮ್ಮನೆ ಕೂತಿದ್ದೇವೆ ಎಂದರೆ ನಮಗೆ ಏನೂ ಮಾಟಲು ಆಗುವುದಿಲ್ಲ ಅಂತಲ್ಲ, ಸಮಯ ಬಂದರೆ ಉತ್ತರ ನೀಡುವುದಕ್ಕೂ ಸಿದ್ದನಿರುವೆ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.